ವನ್ಯಜೀವಿ ಸಂರಕ್ಷಣೆಗಾಗಿ ಹುತಾತ್ಮರಾದವರು ಸೂರ್ಯನಂತೆ ಸ್ಮರಣೀಯರು
ಮೈಸೂರು

ವನ್ಯಜೀವಿ ಸಂರಕ್ಷಣೆಗಾಗಿ ಹುತಾತ್ಮರಾದವರು ಸೂರ್ಯನಂತೆ ಸ್ಮರಣೀಯರು

March 4, 2020

`ವಿಶ್ವ ವನ್ಯಜೀವಿಗಳ ದಿನಾಚರಣೆ’, ಸಿಎಫ್ ಮಣಿಕಂದನ್ ಸ್ಮರಣೆ ಕಾರ್ಯಕ್ರಮದಲ್ಲಿ ಸಿಸಿಎಫ್ ಟಿ.ಹೀರಾಲಾಲ್ ಬಣ್ಣನೆ
ಮೈಸೂರು,ಮಾ.3(ಎಂಟಿವೈ)- ವನ್ಯ ಜೀವಿ ಸಂರಕ್ಷಣೆಗಾಗಿ ಹಗಲಿರುಳು ಶ್ರಮಿಸಿ ಹುತಾತ್ಮರಾಗಿರುವ ಮಹನೀಯರು ಇಲಾ ಖೆಗೆ ಸದಾ ಬೆಳಕು ನೀಡುವ ಸೂರ್ಯ ನಂತೆ ಸ್ಮರಣೀಯರು ಎಂದು ಮೈಸೂರು ವೃತ್ತದ ಸಿಸಿಎಫ್ ಟಿ.ಹೀರಾಲಾಲ್ ಬಣ್ಣಿಸಿದರು.

ಮೈಸೂರು ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಮಂಗಳವಾರ `ವಿಶ್ವ ವನ್ಯಜೀವಿಗಳ ದಿನಾಚರಣೆ’ ಹಾಗೂ ಆನೆ ದಾಳಿಗೆ ತುತ್ತಾಗಿ ಸಾವಿಗೀಡಾದ ನಾಗರ ಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಮಣಿಕಂದನ್ 2ನೇ ವರ್ಷದ ಸ್ಮರಣೆ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಅರಣ್ಯ ಸಂರಕ್ಷಣೆಗೆ ತಮ್ಮ ಜೀವವನ್ನೇ ಪಣಕ್ಕಿಟ್ಟು ಹುತಾತ್ಮರಾದವರ ಸೇವೆ ಅವಿಸ್ಮರಣೀಯ. ಅರಣ್ಯ ವೀಕ್ಷಕರಿಂದ ಸಿಎಫ್ ಅಧಿಕಾರಿ ವರೆಗೆ ಹುತಾತ್ಮರಾಗಿದ್ದಾರೆ. ಇಲಾಖೆ ಸಿಬ್ಬಂದಿಗೆ ಇವರೆಲ್ಲ ಸೂರ್ಯನಿದ್ದಂತೆ. ಕರ್ತವ್ಯದ ವೇಳೆ ವೀರಮರಣವನ್ನಪ್ಪಿದ ಸಿಬ್ಬಂದಿಗಳ ತ್ಯಾಗ, ಬದ್ಧತೆ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದರು.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇ ಶದ ನಿರ್ದೇಶಕರಾಗಿದ್ದ ಮಣಿಕಂದನ್ 2018ರಲ್ಲಿ ವಿಶ್ವ ವನ್ಯಜೀವಿ ದಿನದಂದೇ ಆನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದು, ಇಲಾಖೆಗೆ ತುಂಬಲಾರದ ನಷ್ಟ. 2001ರ ಬ್ಯಾಚ್‍ನ ಮಣಿಕಂದನ್ ದಕ್ಷ ಅಧಿಕಾರಿ ಎನಿಸಿಕೊಂಡಿ ದ್ದರು. ಎಷ್ಟೇ ಒತ್ತಡ, ಬೆದರಿಕೆ ಬಂದರೂ ಜಗ್ಗದೆ ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿದ್ದರು. ಸಾಫ್ಟವೇರ್ ಅಭಿವೃದ್ಧಿ ಪಡಿಸಿ ಗಣಿಗಾರಿಕೆ ಸ್ಟ್ರೀಮ್‍ಲೈನ್ ಮಾಡಿ ಸರ್ಕಾರದ ಪ್ರಶಂಸೆಗೆ ಪಾತ್ರರಾಗಿದ್ದರು. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ 2 ವರ್ಷ ಜನಪ್ರಿಯ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದು ಕಾಡಂಚಿನ ಗ್ರಾಮಗಳ ಜನರಿಗೆ ನೆರವಾಗಿದ್ದರು. ಮಾನವ-ವನ್ಯಪ್ರಾಣಿ ಸಂಘರ್ಷ ತಡೆಗೂ ಪರಿಹಾರ ತೋರಿದ್ದರು. ಆದರೆ ಬೆಂಕಿ ಬಿದ್ದ ಪ್ರದೇಶದ ಪರಿಶೀಲ ನೆಗೆ ಹೋಗಿದ್ದಾಗ ಆನೆ ದಾಳಿಗೆ ಸಿಲುಕಿ ಮೃತಪಟ್ಟರು. ಅವರ ಬದ್ಧತೆ ಎಲ್ಲರಿಗೂ ಆದರ್ಶ ಎಂದು ನೆನಪಿಸಿಕೊಂಡರು.

`ಭೂಮಿ ಮೇಲಿನ ಸಕಲ ಜೀವಿಗಳ ಉಳಿ ಸೋಣ’ ಘೋಷಣೆಯೊಂದಿಗೆ ಈ ಸಾಲಿನ ವಿಶ್ವ ವನ್ಯಜೀವಿ ದಿನ ಆಚರಿಸಲಾಗುತ್ತಿದೆ. ಕಾಡಿನ ರಕ್ಷಣೆಗೆ ಆದ್ಯತೆ ನೀಡದಿದ್ದರೆ ಹಲವು ಸಮಸ್ಯೆಗಳು ಸೃಷ್ಟಿಯಾಗಲಿವೆ. ಮಾನವ-ಪ್ರಾಣಿ ಸಂಘರ್ಷವೂ ಹೆಚ್ಚಲಿದೆ. ಭೂಮಿ ಮೇಲಿನ ಎಲ್ಲಾ ಜೀವಿಗಳ ರಕ್ಷಣೆಗೆ ಪಣ ತೊಡುವ ಅಗತ್ಯವಿದೆ ಎಂದರು.

ಬಿಜಿಎಲ್ ಅಪೋಲೊ ಆಸ್ಪತ್ರೆ ಉಪಾಧ್ಯಕ್ಷ ಭರತೇಶ್ ರೆಡ್ಡಿ ಮಾತನಾಡಿ, ಹಸಿರು ಸೈನಿಕ ರಾದ ಅರಣ್ಯ ಇಲಾಖೆ ಸಿಬ್ಬಂದಿ ಕಾಡನ್ನು ಹಗಲು ರಾತ್ರಿ ರಕ್ಷಣೆ ಮಾಡುತ್ತಿರುವುದ ರಿಂದಲೇ ಉತ್ತಮ ಪರಿಸರವಿದೆ ಎಂದರು.

ಕರ್ತವ್ಯ ವೇಳೆಯ ಒತ್ತಡದಿಂದ ಆರೋಗ್ಯ ಸಮಸ್ಯೆ ಉದ್ಭವಿಸುತ್ತದೆ. ಹೃದಯಾಘಾತ, ಪಾಶ್ರ್ವವಾಯು, ಕ್ಯಾನ್ಸರ್ ಮೊದಲಾದ ತೀವ್ರ ಸ್ವರೂಪದ ಆರೋಗ್ಯ ಸಮಸ್ಯೆಗಳಿಗೆ ಗೋಲ್ಡನ್ ಹವರ್‍ನಲ್ಲಿ ಚಿಕಿತ್ಸೆ ಪಡೆದರೆ ಜೀವ ಉಳಿಸಬಹುದು. ಇತ್ತೀಚೆಗೆ ಶೇ.60 ಕ್ಕಿಂತ ಹೆಚ್ಚಿನ ರೋಗಿಗಳು ರೋಗ ಉಲ್ಬಣ ಗೊಂಡ ನಂತರವಷ್ಟೇ ಆಸ್ಪತ್ರೆಗೆ ಬರುತ್ತಿ ದ್ದಾರೆ. ಕ್ಯಾನ್ಸರ್ ಪೀಡಿತರಂತೂ ರೋಗ ಅಂತಿಮ ಹಂತಕ್ಕೆ ಬಂದಾಗ ಆಸ್ಪತ್ರೆಗೆ ಬರುತ್ತಾರೆ. ಸಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿ ಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದರು.

ಹುಲಿ ಯೋಜನೆಯ ಎಪಿಸಿಸಿಎಫ್ ಜಗತ್ ರಾಮ್ ಅಧ್ಯಕ್ಷತೆ ವಹಿಸಿದ್ದರು. ಸಿಬ್ಬಂದಿ ಸಂಜಯ್ ಹೊಯ್ಸಳ ಸ್ವರಚಿತ `ಹಸಿರು ಯೋಧರು’ ಕವನ ವಾಚಿಸಿದರು.

ರಕ್ತದಾನ ಶಿಬಿರ
ಮಣಿಕಂದನ್ ಸ್ಮರಣಾರ್ಥ ರಕ್ತದಾನ ಶಿಬಿರ ನಡೆಸಲು ಸೋಮವಾರ ಸಂಜೆ ನಿರ್ಧ ರಿಸಲಾಗಿತ್ತು. ಕಡಿಮೆ ಅವಧಿಯಲ್ಲೇ ಬಿಜಿಎಸ್ ಅಪೋಲೊ ಆಸ್ಪತ್ರೆ ಸಿಬ್ಬಂದಿ ಶಿಬಿರಕ್ಕೆ ಸಹಕಾರ ನೀಡಿದರು. ಡಿಸಿಎಫ್‍ಗಳಾದ ಅಲೆಗ್ಸಾಂಡರ್, ದೀಪ್ ಜೆ.ಕಂಟ್ರಾಕ್ಟರ್, ಶಿವ ರಾಜು, ಡಿ.ವೆಂಕಟೇಶ್, ಪೂವಯ್ಯ, ಶ್ರೀಧರ್, ಪುರುಷೋತ್ತಮ್, ಎಸಿಎಫ್‍ಗಳು, ಆರ್ ಎಫ್‍ಓ, ಡಿಆರ್‍ಎಫ್, ಗಾರ್ಡ್, ವಾಚರ್ ಗಳು ಸೇರಿದಂತೆ 50ಕ್ಕೂ ಹೆಚ್ಚು ಸಿಬ್ಬಂದಿ ರಕ್ತದಾನ ಮಾಡಿದರು. ಡಿಸಿಎಫ್‍ಗಳಾದ ಕೆ.ಸಿ.ಪ್ರಶಾಂತ್ ಕುಮಾರ್, ಅಲೆಗ್ಸಾಂಡರ್ ಶಿಬಿರದ ನೇತೃತ್ವ ವಹಿಸಿದ್ದರು.

Translate »