ಮೈಸೂರು: ಹುಣ ಸೂರು ತಾಲೂಕು ಹನಗೋಡು ಹೋಬಳಿ ಹರಳಹಳ್ಳಿ ಹಾಡಿಯ ಜೇನು ಕುರುಬ ಸಮುದಾಯಕ್ಕೆ ಸೇರಿದ ಆದಿವಾಸಿ ಮಹ ದೇವಯ್ಯ (55) ಹತ್ಯೆ ಪ್ರಕರಣದ ಸಿಓಡಿ ತನಿಖೆಗೆ ಆಗ್ರಹಿಸಿ ಮೇ 9ರಂದು ಕರ್ನಾ ಟಕ ಆದಿವಾಸಿ ರಕ್ಷಣಾ ಪರಿಷತ್ ಆಶ್ರಯ ದಲ್ಲಿ ಹುಣಸೂರು ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳ ಲಾಗುವುದು ಎಂದು ಪರಿಷತ್ ರಾಜ್ಯಾ ಧ್ಯಕ್ಷ ಎಂ.ಕೃಷ್ಣಯ್ಯ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಹರಳಹಳ್ಳಿ ಗ್ರಾಮದ ಅಭಿಷೇಕ್ ಎಂಬಾತ ಕೊಲೆ ಮಾಡಿರುವ ಶಂಕೆ ಇದೆ. ಅದಿವಾಸಿಗಳನ್ನು ಹೆದರಿಸಿ ಆತ ಜಮೀನಿನಲ್ಲೇ ರಸ್ತೆ ಮಾಡಿಕೊಂಡಿದ್ದು, ಇದನ್ನು ಪ್ರಶ್ನಿಸಿದ ಮಹದೇವಯ್ಯನನ್ನು ಕೊಲೆ ಮಾಡಿ, ಮೈಮೇಲೆ ಟ್ರಾಕ್ಟರ್ ಬ್ಯಾಟರಿ ಆಸಿಡ್ ಸುರಿದು ಗುರುತು ಸಿಗದಂತೆ ಮಾಡಿದ್ದಾನೆ ಎಂದು ಆರೋಪಿಸಿದರು.
ಕೆಲವು ಸ್ಥಳೀಯ ರಾಜಕೀಯ ಪ್ರಭಾವಿ ಗಳು ಆರೋಪಿಯನ್ನು ರಕ್ಷಿಸುತ್ತಿದ್ದು, ಇಡೀ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆ ದಿದೆ. ಘಟನೆಯ ಬಳಿಕ ಯಾವೊಬ್ಬ ಅಧಿ ಕಾರಿಯೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ಮೃತನ ಕುಟುಂಬಕ್ಕೆ ಪರಿಹಾರವನ್ನೂ ನೀಡಿಲ್ಲ ಎಂದು ದೂರಿದರು.
ಮೃತ ಮಹದೇವಯ್ಯನಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಮೇ 9ರಂದು ನಡೆಯುವ ಪ್ರತಿ ಭಟನೆಗೂ ಅಧಿಕಾರಿಗಳು ಕ್ರಮ ಕೈಗೊಳ್ಳÀದಿ ದ್ದಲ್ಲಿ ರಾಜ್ಯಮಟ್ಟದಲ್ಲಿ ಪ್ರತಿಭಟನೆ ನಡೆ ಸುವ ಉದ್ದೇಶವಿದೆ ಎಂದರು. ಗೋಷ್ಠಿ ಯಲ್ಲಿ ಮೃತನ ಪತ್ನಿ ಬಿ.ಕಾವೇರ, ಪದಾಧಿ ಕಾರಿಗಳಾದ ಕೆ.ಸುಭಾಷಿಣಿ, ರಾಮು, ಗೌರಮ್ಮ ಇನ್ನಿತರರು ಉಪಸ್ಥಿತರಿದ್ದರು.