ಮುಕ್ತ ವಿವಿ ಕೋರ್ಸ್‍ಗಳಿಗೆ ಪ್ರವೇಶಾತಿ ಅವಧಿ ವಿಸ್ತರಣೆ
Uncategorized, ಮೈಸೂರು

ಮುಕ್ತ ವಿವಿ ಕೋರ್ಸ್‍ಗಳಿಗೆ ಪ್ರವೇಶಾತಿ ಅವಧಿ ವಿಸ್ತರಣೆ

October 2, 2018

ಮೈಸೂರು: ವಿಶ್ವವಿದ್ಯಾನಿಲಯವು 2018- 19ನೇ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದಂತೆ ಯುಜಿಸಿಯಿಂದ ಮಾನ್ಯತೆ ದೊರೆತಿರುವ ಎಲ್ಲಾ ಕೋರ್ಸ್ ಗಳಿಗೆ ಈಗಾಗಲೇ ಪ್ರವೇಶಾತಿಯನ್ನು ಪ್ರಾರಂಭಿಸಿದ್ದು, ವಿವಿ ಕೇಂದ್ರ ಕಚೇರಿ ಹಾಗೂ ತನ್ನ ಎಲ್ಲಾ ಪ್ರಾದೇಶಿಕ ಕೇಂದ್ರಗಳಲ್ಲಿ ಪ್ರವೇಶಾತಿ ಪ್ರಕ್ರಿಯೆಗಳು ನಡೆಯುತ್ತಿದೆ.

ಪ್ರವೇಶಾತಿಯ ಅಂತಿಮ ದಿನಾಂಕವನ್ನು ದಂಡ ಶುಲ್ಕದೊಂದಿಗೆ ಅ.20ರವರೆಗೆ ವಿಸ್ತರಿಸಲಾಗಿದೆ ಎಂದು ಕುಲಸಚಿವರು ತಿಳಿಸಿದ್ದಾರೆ.

ವಿವಿಗೆ ವಿದ್ಯಾರ್ಥಿಗಳು ವಿವಿಧ ಕೋರ್ಸ್‍ಗಳಿಗೆ ಪ್ರವೇಶಾತಿ ಕೋರಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದಿನಾಂಕ ವಿಸ್ತರಿಸುವಂತೆ ಕುಲಪತಿಯವರು ಯುಜಿಸಿಗೆ ಪತ್ರ ಬರೆದು ಕೋರಿದ್ದರು. ಈ ಹಿನ್ನೆಲೆಯಲ್ಲಿ ಮುಕ್ತ ವಿವಿ ವಿವಿಧ ಕೋರ್ಸ್‍ಗಳಿಗೆ ಪ್ರವೇಶಾತಿ ದಿನಾಂಕವನ್ನು ಅ.20ರವರೆಗೆ ವಿಸ್ತರಿಸಿದ್ದು, ಮುಕ್ತ ವಿವಿಯ ಎಲ್ಲಾ ಪ್ರಾದೇಶಿಕ ಕೇಂದ್ರಗಳಲ್ಲಿ ದಂಡ ಶುಲ್ಕದೊಡನೆ ಎಲ್ಲಾ ಸರ್ಕಾರಿ ರಜೆ ಮತ್ತು ಭಾನುವಾರವೂ ಸೇರಿದಂತೆ ಪ್ರವೇಶಾತಿ ಪಡೆದುಕೊಳ್ಳಬಹುದು ಎಂದು ವಿವಿ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »