ಬೇಡಿಕೆ ಈಡೇರಿಕೆಗೆ ಆಗ್ರಹ: ಜಿಲ್ಲೆಯಲ್ಲಿ ಸರಣಿ ಪ್ರತಿಭಟನೆ
ಮಂಡ್ಯ

ಬೇಡಿಕೆ ಈಡೇರಿಕೆಗೆ ಆಗ್ರಹ: ಜಿಲ್ಲೆಯಲ್ಲಿ ಸರಣಿ ಪ್ರತಿಭಟನೆ

October 2, 2018

ಮಂಡ್ಯ:  ವಿವಿಧ ಬೇಡಿಕೆ ಈಡೇ ರಿಕೆಗೆ ಆಗ್ರಹಿಸಿ ಜಿಲ್ಲೆಯಲ್ಲಿ ಸೋಮವಾರ ಸರಣಿ ಪ್ರತಿಭಟನೆ ನಡೆಯಿತು.
ಮಂಡ್ಯದಲ್ಲಿ ಮರ್ಯಾದ ಹತ್ಯೆ, ಶೋಷಿತ, ದಲಿತ, ಹಿಂದುಳಿದವರ ಮೇಲಿನ ದೌರ್ಜನ್ಯ ತಡೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸದಸ್ಯರು ಧರಣಿ ನಡೆಸಿದರೇ, ನ್ಯಾ.ಎ.ಜೆ.ಸದಾಶಿವ ಆಯೋ ಗದ ವರದಿ ಜಾರಿಗೆ ಆಗ್ರಹಿಸಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಕಾರ್ಯ ಕರ್ತರು ತಮಟೆ ಚಳವಳಿ ನಡೆಸಿದರು. ಭಾರತೀನಗರದಲ್ಲಿ ಕಬ್ಬಿನ ಬಾಕಿ ಹಣ ಪಾವತಿಗೆ ಆಗ್ರಹಿಸಿ ರೈತರು ಚಾಂಷು ಗರ್ಸ್‍ಗೆ ಮುತ್ತಿಗೆ ಹಾಕಿದರು. ಕೆ.ಆರ್.ಪೇಟೆ ಯಲ್ಲಿ ಕಾರ್ಮಿಕ ಅಧಿಕಾರಿಗಳು ಕಚೇರಿಗೆ ಬಾರದಿರುವುದನ್ನು ಖಂಡಿಸಿ ಆಟೋ ಚಾಲಕರು ಪ್ರತಿಭಟನೆ ನಡೆಸಿದರು.

ಬೇಡಿಕೆ ಈಡೇರಿಕೆಗೆ ಆಗ್ರಹ: ಮರ್ಯಾದ ಹತ್ಯೆ, ಶೋಷಿತ, ದಲಿತ, ಹಿಂದುಳಿದವರ ಮೇಲಿನ ದೌರ್ಜನ್ಯ ತಡೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸದಸ್ಯರು ನಗರದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.

ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಿಂದ ಮೈಸೂರು- ಬೆಂಗಳೂರು ಹೆದ್ದಾರಿ ಮೂಲಕ ಮೆರವಣಿಗೆ ನಡೆಸಿದ ಪ್ರತಿಭಟನಾ ಕಾರರು ಸರ್‍ಎಂವಿ ಪ್ರತಿಮೆ ಎದುರು ಧರಣಿ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಗಳ ಜನವಿರೋಧಿ ನೀತಿ ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಪುಟ್ಟಮಾದು, ಮಳವಳ್ಳಿ ತಾಲೂಕು ಅಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮೇಶ್, ಪ್ರದೀಪ್ ಕುಮಾರ್, ನಾಗರಾಜು ಇದ್ದರು.

ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ: ಪರಿಶಿಷ್ಟರ ವಿಶೇಷ ಘಟಕ ಯೋಜನೆಗೆ ಮಹತ್ವ ನೀಡದ ರಾಜ್ಯ ಸರ್ಕಾ ರದ ಕ್ರಮ ಹಾಗೂ ನ್ಯಾ.ಎ.ಜೆ.ಸದಾಶಿವ ಆಯೋ ಗದ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಕಾರ್ಯಕರ್ತರು ತಮಟೆ ಚಳವಳಿ ನಡೆಸಿದರು.

ನಗರದ ಸಂಜಯ ವೃತ್ತದಲ್ಲಿ ಜಮಾವಣೆ ಗೊಂಡ ಕಾರ್ಯಕರ್ತರು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಯಲ್ಲಿ ಸಂಘದ ರಾಜ್ಯಾಧ್ಯಕ್ಷ ವೆಂಕಟಗಿರಿ ಯಯ್ಯ, ಜಿಲ್ಲಾಧ್ಯಕ್ಷ ಶಿವರಾಜ್ ಮರಳಿಗ, ವೆಂಕಟೇಶ್ ಸೇರಿದಂತೆ ಮತ್ತಿತರರಿದ್ದರು.

ಚಾಂಷುಗರ್ಸ್‍ಗೆ ಮುತ್ತಿಗೆ: ಕಬ್ಬಿನ ಬಾಕಿ ಪಾವತಿಗೆ ಆಗ್ರಹಿಸಿ ಮತ್ತು ಹೊರ ಜಿಲ್ಲೆಯ ಒಪ್ಪಿಗೆ ಇಲ್ಲದ ಕಬ್ಬನ್ನು ಅರೆಯುತ್ತಿರುವ ಇಲ್ಲಿನ ಚಾಂಷುಗರ್ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ರೈತ ಸಂಘದ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು.

ಕಾರ್ಖಾನೆ ಎದುರು ಜಮಾಯಿಸಿದ ರೈತರು, ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಕಬ್ಬಿನ ಬಾಕಿ ಹಣ ಪಾವತಿಸುವಂತೆ ಆಗ್ರಹಿಸಿ ದರು. ಕಾರ್ಖಾನೆ ಪ್ರಾರಂಭವಾಗಿ 2 ತಿಂಗಳು ಕಳೆದಿದೆ. ಈಗಾಗಲೇ 7ಬ್ಯಾಚ್ ಕಬ್ಬನ್ನು ಅರೆದಿದ್ದರೂ, ಇದುವರೆಗೂ 1 ಬ್ಯಾಚಿಗೂ ಹಣ ಪಾವತಿಸದೇ ಕಾರ್ಖಾನೆ ಆಡಳಿತ ಮಂಡಳಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು. ಸಕ್ಕರೆ ಕಾಯ್ದೆ ಯನ್ವಯ ಕಬ್ಬು ಸರಬರಾಜು ಮಾಡಿದ 15 ದಿನದೊಳಗೆ ಹಣ ಪಾವತಿ ಮಾಡ ಬೇಕು. ಆದರೆ ಇದುವರೆವಿಗೂ ರೈತರಿಗೆ ಹಣ ಪಾವತಿಸಿಲ್ಲ. ಈ ಕೂಡಲೇ ಹಣ ಪಾವತಿಸಬೇಕೆಂದು ಆಗ್ರಹಿಸಿದರು.

ಕಾರ್ಖಾನೆ ಅಧಿಕಾರಿಗಳಾದ ಎಂ.ರವಿ, ಸುಧೀಂದ್ರಕಟ್ಟಿ, ನಿತೀಶ್ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಮಹೇಂದ್ರ, ರವಿ ಕುಮಾರ್, ದೇಶೀಗೌಡ, ಪುಟ್ಟಸ್ವಾಮಿ, ರಮೇಶ್, ನವೀನ್, ರಮೇಶ್, ಅಂದಾನಿ, ರಾಮಕೃಷ್ಣ, ಚಿಕ್ಕಮರೀಗೌಡ ಸೇರಿದಂತೆ ಇತರರಿದ್ದರು.

ಕಾರ್ಮಿಕ ಅಧಿಕಾರಿಗಳ ವಿರುದ್ಧ ಪ್ರತಿಭಟನೆ: ತಾಲೂಕಿಗೆ ವಾರಕ್ಕೆ ಒಂದು ದಿನವೂ ಬಾರದ ಕಾರ್ಮಿಕ ಅಧಿಕಾರಿಗಳ ನಡೆ ಖಂಡಿಸಿ ತಾಲೂಕು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಕಾರ್ಯಕರ್ತರು, ಸಂಘದ ಅಧ್ಯಕ್ಷ ಕೆ.ಎನ್.ವಾಸುದೇವ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ನಮಗೆ ಸಿಗಬೇಕಾದ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಲು ಹಾಗೂ ಮಾಹಿತಿ ಕೇಳಲು ಕಚೇರಿಗೆ ಬಂದರೆ ಅಲ್ಲಿ ಅಧಿಕಾರಿಗಳ ಬದಲಿಗೆ ಅವರ ಕುರ್ಚಿಗಳು ಮಾತ್ರ ದರ್ಶನಕ್ಕೆ ಸಿಗುತ್ತವೆ. ಹೀಗಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಕೆ.ಆರ್.ಪೇಟೆಗೆ ಬಂದು ಸಮಸ್ಯೆ ಬಗೆಹರಿಸ ಬೇಕು. ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ನಿವೇಶನ, ಆರೋಗ್ಯ ವಿಮೆ ಸೇರಿದಂತೆ ನ್ಯಾಯಬದ್ಧವಾಗಿ ಸಿಗಬೇಕಾದ ಸೌಲಭ್ಯ ಗಳನ್ನು ಕೊಡಿಸಕೊಡಬೇಕೆಂದು ಒತ್ತಾಯಿಸಿ ದರು. ಪ್ರತಿಭಟನೆಯಲ್ಲಿ ಚಾಲಕರಾದ ಮಂಜು ನಾಥ್, ಪ್ರಕಾಶ್, ಅನಿಲ್, ಆರ್.ಬಾಲ ಸುಬ್ರ ಮಣ್ಯಂ, ಶಶಿ, ನರಸಿಂಹ ಭಾಗವಹಿಸಿದ್ದರು.

Translate »