ಜಿಲ್ಲಾ ಕ್ರೀಡಾಂಗಣದಲ್ಲಿ ಸಂಸದರಿಂದ ಸಿಂಥೆಟಿಕ್ ಟ್ರ್ಯಾಕ್ ಲೋಕಾರ್ಪಣೆ ಕ್ರೀಡಾ ಉತ್ತೇಜನಕ್ಕೆ ಮೀಸಲಿಟ್ಟ ಅನುದಾನ ಸದ್ಬಳಕೆಗೆ ಸಲಹೆ
ಚಾಮರಾಜನಗರ

ಜಿಲ್ಲಾ ಕ್ರೀಡಾಂಗಣದಲ್ಲಿ ಸಂಸದರಿಂದ ಸಿಂಥೆಟಿಕ್ ಟ್ರ್ಯಾಕ್ ಲೋಕಾರ್ಪಣೆ ಕ್ರೀಡಾ ಉತ್ತೇಜನಕ್ಕೆ ಮೀಸಲಿಟ್ಟ ಅನುದಾನ ಸದ್ಬಳಕೆಗೆ ಸಲಹೆ

January 17, 2019

ಚಾಮರಾಜನಗರ: ಜಿಲ್ಲಾ ಕೆಂದ್ರ ದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಬುಧವಾರ 5.5 ಕೋಟಿ ರೂ. ವೆಚ್ಚದಡಿ ನೂತನವಾಗಿ ನಿರ್ಮಾಣ ವಾಗಿರುವ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್‍ನ್ನು ಲೋಕಾರ್ಪಣೆ ಹಾಗೂ ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ ಕಾರ್ಯಕ್ರಮವನ್ನು ಸಂಸದ ಆರ್.ಧ್ರುವನಾರಾಯಣ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸಿಂಥೆ ಟಿಕ್ ಟ್ರ್ಯಾಕ್‍ನ್ನು ನಿರ್ವಹಣೆ ಮಾಡುವ ಜವಾಬ್ದಾರಿ ಸಮರ್ಪಕವಾಗಿ ಕೈಗೊಳ್ಳ ಬೇಕಿದೆ. ಜಿಲ್ಲೆಯಲ್ಲಿ ಒಳ್ಳೆಯ ಕ್ರಿಡಾಪಟು ಗಳು ಇದ್ದಾರೆ. ಕ್ರೀಡೆಗೆ ಉತ್ತೇಜನ ನೀಡಲು ಹೆಚ್ಚಿನ ಅನುದಾನ ಬಿಡುಗಡೆಯಾಗುತ್ತಿದೆ. ಇದನ್ನು ಕ್ರೀಡಾ ಬೆಳವಣಿಗೆಗೆ ಬಳಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು.

ಸಿಂಥೆಟಿಕ್ ಟ್ರ್ಯಾಕ್ ಸಿದ್ದವಾಗಿರುವುದ ರಿಂದ 400ಮೀ. ಓಟ, ರಿಲೇ, ಉದ್ದ ಜಿಗಿತ, ಎತ್ತರ ಜಿಗಿತ, ಟ್ರಿಪ್ಪಲ್ ಜಂಪ್, ಶಾಟ್‍ಫುಟ್, ಡಿಸ್ಕಸ್ ಥ್ರೋ ನಂತಹ 9 ಕ್ರೀಡೆಗಳಿಗೆ ಅನುಕೂಲವಾಗಲಿದೆ. ಕ್ರೀಡಾಂ ಗಣದಲ್ಲಿ ಚೈನ್‍ಲಿಂಕ್ ಫೆನ್ಸಿಂಗ್ ಅಳವಡಿ ಸಲಾಗಿದೆ. ಹೈಟೆಕ್ ಶೌಚಾಲಯಗಳನ್ನು ಸಹ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟ ಆಯೋ ಜನೆ ಮಾಡಿರುವ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಅವರು, ಎರಡು ದಿನಗಳ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಹಾರೈಸಿದರು.

ಶಾಸಕ ಎನ್.ಮಹೇಶ್ ಮಾತನಾಡಿ, ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಸೌಲಭ್ಯ ಕಲ್ಪಿಸಿರುವುದರಿಂದ ಜಿಲ್ಲೆಯ ಕ್ರೀಡಾ ಪ್ರತಿಭೆ ಗಳಿಗೆ ಅನುಕೂಲವಾದಂತಾಗಿದೆ. ಕೊಳ್ಳೇ ಗಾಲ ಪಟ್ಟಣದಲ್ಲಿಯೂ 3.5 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣ ಆಗಲಿದೆ. ಎಂಜಿ ಎಸ್‍ವಿ ಕಾಲೇಜು ಆವರಣದಲ್ಲಿಯೂ ಹಿರಿಯ ನಾಗರಿಕರು ಆಸಕ್ತ ಕ್ರೀಡಾಪಟು ಗಳಿಗೆ ವಾಯುವಿಹಾರ, ಇತರೆ ಕ್ರೀಡಾ ಚಟು ವಟಿಕೆಗಳಿಗೆ ಅವಕಾಶ ಮಾಡಿಕೊಡುವ ಕಾಮಗಾರಿಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರಿ ನೌಕರರು ಕ್ರೀಡಾಕೂಟ ದಲ್ಲಿ ಮಾತ್ರ ಭಾಗವಹಿಸುವ ವಾಡಿಕೆ ಆಗ ಬಾರದು. ಯಾರಿಗೆ ಯಾವ ಕ್ರೀಡೆಯಲ್ಲಿ ಆಸಕ್ತಿ ಇದೆಯೋ ಅಂತಹ ಚಟುವಟಿಕೆ ಗಳಿಗೆ ಹೆಚ್ಚು ಗಮನ ನೀಡಬೇಕು. ದಿನ ನಿತ್ಯ ದೈಹಿಕ ವ್ಯಾಯಾಮ ಚಟುವಟಿಕೆ ಗಳಿಂದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದಾಗಿದೆ ಎಂದರು.

ವಹಿಸಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಮಾತನಾಡಿ, ಸರ್ಕಾರಿ ನೌಕ ರರ ಕ್ರೀಡಾಕೂಟ ಯಶಸ್ವಿಯಾಗಿ ಪೂರ್ಣ ಗೊಳ್ಳಲಿ ಎಂದು ಶುಭ ಕೋರಿದರು.
ಕಾರ್ಯಕ್ರಮದಿಂದ ಹೊರ ನಡೆದ ತಾಪಂ ಉಪಾಧ್ಯಕ್ಷ: ನಗರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಬೇಸರ ಗೊಂಡು ತಾಪಂ ಉಪಾಧ್ಯಕ್ಷ ಬಸವಣ್ಣ ಕಾರ್ಯಕ್ರಮದಿಂದ ಹೊರ ನಡೆದ ಪ್ರಸಂಗ ನಡೆಯಿತು.

ಕಾರ್ಯಕ್ರಮ ಪ್ರಾರಂಭವಾಗುತ್ತಿದಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾ ಖೆಯ ಸಹಾಯಕ ನಿರ್ದೇಶಕ ಎಂ.ಚಲು ವಯ್ಯ ಅವರು ಸ್ವಾಗತ ಭಾಷಣ ಮಾಡಿ ದರು. ಈ ವೇಳೆ ತಾಪಂ ಉಪಾಧ್ಯಕ್ಷರ ಹೆಸರನ್ನು ಕರೆಯದೆ ತಮ್ಮ ಭಾಷಣ ಮುಕ್ತಾಯಗೊಳಿಸಿದರು.
ಬಳಿಕ ವೇದಿಕೆಯಲ್ಲಿದ್ದ ತಾಪಂ ಉಪಾ ಧ್ಯಕ್ಷ ಬಸವಣ್ಣ ಎದ್ದು ನಿಂತು ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಸ್ವಾಗತ ಕೋರದೆ ಅಪಮಾನ ಮಾಡಲಾಗಿದೆ. ನಾನು ಇದನ್ನು ಖಂಡಿಸುತ್ತೇನೆ ಎಂದು ಕಾರ್ಯಕ್ರಮದಿಂದ ಹೊರ ನಡೆದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾ ಯಿತಿ ಅಧ್ಯಕ್ಷೆ ದೊಡ್ಡಮ್ಮ, ಜಿಲ್ಲಾ ಪಂಚಾ ಯಿತಿ ಉಪಾಧ್ಯಕ್ಷ ಜೆ.ಯೋಗೀಶ್, ಸದಸ್ಯರಾದ ಸಿ.ಎನ್.ಬಾಲರಾಜು, ಎ.ಆರ್. ಬಾಲರಾಜು, ಜಯಂತಿ, ಕಮಲ್ ನಾಗ ರಾಜು, ನಗರಸಭೆ ಸದಸ್ಯರಾದ ಆಶಾ ನಟರಾಜು, ಭಾಗ್ಯಮ್ಮ, ನೀಲಮ್ಮ, ಕಲಾ ವತಿ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಸಿಇಓ ಡಾ.ಕೆ.ಹರೀಶ್‍ಕುಮಾರ್, ಯುವ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಕೆ.ಶ್ರೀನಿವಾಸ್, ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ರಮೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಆರ್.ರಾಚಪ್ಪ, ಉಪಾಧ್ಯಕ್ಷ ಬಸವರಾಜು, ಗೌರವಾಧ್ಯಕ್ಷ ರಂಗಸ್ವಾಮಿ, ಪ್ರಧಾನ ಕಾರ್ಯ ದರ್ಶಿ ಮಹದೇವಸ್ವಾಮಿ, ಯುವ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆಯ ಸಹಾ ಯಕ ನಿರ್ದೇಶಕ ಎಂ.ಚಲುವಯ್ಯ, ನೌಕ ರರ ಸಂಘದ ಪದಾಧಿಕಾರಿಗಳಾದ ನೇತ್ರಾ ವತಿ, ಶಾಂತಮ್ಮ ಇತರರು ಉಪಸ್ಥಿತರಿದ್ದರು.

ನಾನು ಸಿಎಂ ಕುಮಾರಸ್ವಾಮಿ ಪರ: ಎನ್.ಮಹೇಶ್
ಚಾಮರಾಜನಗರ(ಎಸ್‍ಎಸ್)- ನನ್ನನ್ನು ಇದುವರೆವಿಗೂ ಯಾವ ಪಕ್ಷದವರೂ ಸಂಪರ್ಕ ಮಾಡಿಲ್ಲ… ನಾನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪರ ಇದ್ದೇನೆ… ಎಂದು ಮಾಜಿ ಸಚಿವ ಹಾಗೂ ಶಾಸಕ ಎನ್.ಮಹೇಶ್ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ಉದ್ಘಾಟನಾ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷೇತರ ಶಾಸಕರು ಬಿಜೆಪಿಗೆ ಹೋಗಿರುವುದು ನನಗೆ ಗೊತ್ತಿಲ್ಲ. ಅವರು ಬಿಜೆಪಿಗೆ ಹೋದರೂ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದರು.
ಬಿಜೆಪಿ ಅವರು ತಮ್ಮ ಶಾಸಕರನ್ನು ಏಕೆ ದೆಹಲಿಯಲ್ಲಿ ಇಟ್ಟುಕೊಂಡಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಅವರಿಗೆ ಭಯ ಕಾಡುತ್ತಿರಬೇಕು ಎಂದು ಟೀಕಿಸಿದರು.

ನನ್ನ ಗಮನವನ್ನು ಮುಂದಿನ ಲೋಕಸಭಾ ಚುನಾವಣೆ ಮೇಲೆ ಕೇಂದ್ರಿಕರಿಸಿಲ್ಲ. ಬಿಎಸ್‍ಪಿ ಲೋಕಸಭೆಯ ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ. ಒಂದು ವೇಳೆ ಮೈತ್ರಿಯಾದರೆ ಮೈಸೂರು ಭಾಗ, ಬಾಂಬೆ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕವನ್ನು ನಾವು(ಬಿಎಸ್‍ಪಿ) ಕೇಳುತ್ತೇವೆ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ: ಧ್ರುವನಾರಾಯಣ
ಚಾಮರಾಜನಗರ: ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಪಕ್ಷೇತರ ಶಾಸಕರು ಸಕಾರಕ್ಕೆ ನೀಡಿದ ಬೆಂಬಲವನ್ನು ಹಿಂಪಡೆದರೂ ಸರ್ಕಾರಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ಸಂಸದ ಆರ್.ಧ್ರುವನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತ ಶಾಸಕರ ಮನವೊಲಿಸುವ ಕೆಲಸವನ್ನು ವರಿಷ್ಠರು ನಡೆಸುತ್ತಿದ್ದಾರೆ. ಆಪರೇಷನ್ ಕಮಲ ಬಿಜೆಪಿಯ ಕೆಟ್ಟ ಸಂಪ್ರದಾಯ ಎಂದು ಕಿಡಿಕಾರಿದರು. ಈ ಹಿಂದೆಯೂ ಬಿಜೆಪಿ ಕೆಲವು ಶಾಸಕರಿಗೆ ಆಸೆ, ಆಮಿಷ ಗಳನ್ನು ತೋರಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದ್ದರು. ಈ ಸಂಪ್ರದಾಯ ಬಿಜೆಪಿಗೆ ಹಾನಿಯೇ ಹೊರತು ಇದರಿಂದ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಧಕ್ಕೆ ಅಗುವುದಿಲ್ಲ ಎಂದರು.

ರಾಜೀವ್‍ಗಾಂಧಿ ಖೇಲ್ ಅಭಿಯಾನ ದಡಿ ಸುಸಜ್ಜಿತ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣವಾಗಿರುವುದು ಜಿಲ್ಲೆಯ ಕ್ರೀಡಾ ಬೆಳವಣಿಗೆಗೆ ಸಹಾಯಕವಾಗ ಲಿದೆ. ಕೇಂದ್ರದಿಂದ ಬೆಳಗಾವಿಯ ಒಳಾಂಗಣ ಕ್ರೀಡಾಂಗಣ ಹಾಗೂ ಚಾಮರಾಜನಗರ ಜಿಲ್ಲೆಯ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ಅನುದಾನ ಬಿಡು ಗಡೆಯಾಗಿತ್ತು. ಇದರಿಂದ ಸಿಂಥೆಟಿಕ್ ಟ್ರ್ಯಾಕ್ ತುಂಬಾ ಉತ್ತಮವಾಗಿ ನಿರ್ಮಾಣ ಮಾಡಲಾಗಿದೆ -ಧ್ರುವನಾರಾಯಣ, ಸಂಸದ

Translate »