ಯಳಂದೂರು:ತಾಲೂಕಿನ ಬಿಳಿಗಿರಿರಂಗನಾಥ ಸ್ವಾಮಿ ಬೆಟ್ಟದಲ್ಲಿ ಸಂಕ್ರಾಂತಿ ಚಿಕ್ಕ ರಥೋ ತ್ಸವ ಇಲ್ಲದ ಕಾರಣ ಭಕ್ತರು ಕಾಶಿ ಗುರುಗಳ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ಮತ್ತು ಅಲಮೇಲು ರಂಗ ನಾಯಕಿ ಅಮ್ಮನವರಿಗೆ ಪೂಜೆ ಸಲ್ಲಿಸಿದರು.
ಬುಧವಾರ ಬೆಳಿಗ್ಗೆಯಿಂದಲ್ಲೆ ದೇವಾಲ ಯದಲ್ಲಿ ಬಿಳಿಗಿರಿ ರಂಗಸ್ವಾಮಿ ಮತ್ತು ಅಲ ಮೇಲು ರಂಗನಾಯಕಿ ಅಮ್ಮನವರಿಗೆ ವಿಶೇಷ ಪೂಜಾ ಕೈಂಕಾರ್ಯ ನೇರವೇರಿಸಿದ ಬಳಿಕ, ದೇವರ ದರ್ಶನಕ್ಕೆ ಅನುವು ಮಾಡಿಕೊಡ ಲಾಯಿತು. ಸರತಿ ಸಾಲಿನಲ್ಲಿ ಸಾವಿರಾರು ಭಕ್ತರು ನಿಂತು ದೇವರ ದರ್ಶನ ಪಡೆದರು.
ಗ್ರಾಮೀಣ ಪ್ರದೇಶದಿಂದ ಬಂದಿದ್ದ ಭಕ್ತರು ತಾವು ಬೆಳೆದಿದ್ದ ರಾಗಿ, ಜೋಳ, ಭತ್ತ ಸೇರಿ ದಂತೆ ದವಸ, ಧಾನ್ಯಗಳನ್ನು ಬಿಳಿಗಿರಿ ರಂಗ ನಾಥಸ್ವಾಮಿಗೆ ಅರ್ಪಿಸುವ ಮೂಲಕ ತಮ್ಮ ಹರಕೆ ತೀರಿಸಿದರು.
ಗರುಡ ಪಕ್ಷಿ ಬರಲಿಲ್ಲ: ಚಿಕ್ಕ ರಥೋತ್ಸವ ನಡೆಯುವ ಸಮಯಕ್ಕೆ ಸರಿಯಾಗಿ ಗರುಡ ಪಕ್ಷಿ ತೇರಿನ ಮೇಲೆ ಹಾರಾ ಡುತ್ತಿತ್ತು. ಆದರೆ, ಕಳೆದ ಎರಡು ವರ್ಷ ದಿಂದಲೂ ದೇವಾಲಯ ಜಿರ್ಣೋದಾರ ಕಾಮಗಾರಿ ನಡೆಯುತ್ತಿರುವುದರಿಂದ ತೇರು ನಡೆದಿಲ್ಲ. ಈ ಕಾರಣದಿಂದ ಗರುಡ ಪಕ್ಷಿ ಭಕ್ತರಿಗೆ ದರ್ಶನ ನೀಡಲಿಲ್ಲ.