ನರ್ಸ್ ಕೊಲೆ ಪ್ರಕರಣ: ಭಗ್ನಪ್ರೇಮಿಗೆ  ಜೀವಾವಧಿ ಸಜೆ, 75 ಸಾವಿರ ರೂ. ದಂಡ
ಮಂಡ್ಯ

ನರ್ಸ್ ಕೊಲೆ ಪ್ರಕರಣ: ಭಗ್ನಪ್ರೇಮಿಗೆ ಜೀವಾವಧಿ ಸಜೆ, 75 ಸಾವಿರ ರೂ. ದಂಡ

January 17, 2019

ಮಂಡ್ಯ:ನಾಲ್ಕು ವರ್ಷಗಳ ಹಿಂದೆ ಪ್ರೀತಿ, ಮದುವೆಗೆ ನಿರಾಕ ರಿಸಿದ ಯುವತಿಯನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಗ್ನಪ್ರೇಮಿ ಯೊಬ್ಬನಿಗೆ ಮಂಡ್ಯ ಜಿಲ್ಲಾ ಸತ್ರನ್ಯಾಯಾ ಲಯ ಜೀವಾವಧಿ ಶಿಕ್ಷೆ ಹಾಗೂ 75 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಚಂದ ಗಾಲು ಗ್ರಾಮದ ಉಮೇಶ್ (28) ಎಂಬಾತನೇ ಜೀವಾವಧಿ ಶಿಕ್ಷೆಗೆ ಒಳಗಾದ ಭಗ್ನಪ್ರೇಮಿ.

ಪ್ರಕರಣದ ಹಿನ್ನೆಲೆ: ಮಂಡ್ಯ ತಾಲೂಕಿನ ಚಂದಗಾಲು ಗ್ರಾಮದ ಉಮೇಶ್ ಅದೇ ಗ್ರಾಮದ ಪ್ರತಿಮಾ ಎಂಬ ಯುವತಿಯನ್ನು ಪ್ರೀತಿ ಮಾಡುವಂತೆ ಹಾಗೂ ತನ್ನನ್ನೆ ಮದುವೆ ಯಾಗುವಂತೆ ಪೀಡಿಸುತ್ತಿದ್ದ. ಮಂಡ್ಯದ ಖಾಸಗಿ ನರ್ಸಿಂಗ್ ಹೋಂನಲ್ಲಿ ನರ್ಸ್ ಕೆಲಸ ಮಾಡಿಕೊಂಡಿದ್ದ ಆಕೆ ಇದಕ್ಕೆ ನಿರಾಕರಿ ಸಿದರೂ ನಿತ್ಯವೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ, ವಿಷಯ ಪ್ರತಿಮಾ ಅವರ ಮನೆಯವರಿಗೆ ತಿಳಿದು, ಉಮೇಶನಿಗೆ ಬುದ್ದಿ ಮಾತು ಸಹ ಹೇಳಿದ್ದರು. ಈ ನಡುವೆ ಪ್ರತಿಮಾ ಅವರಿಗೆ ಬೇರೊಂದು ಯುವಕನ ಜೊತೆ ನಿಶ್ಚಿತಾರ್ಥವೂ ಆಗಿತ್ತು. ಇದ ರಿಂದ ಕುಪಿತಗೊಂಡ ಉಮೇಶ್, 2015ರ ಜೂ.13ರಂದು ಮಂಡ್ಯದ ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ಪ್ರತಿಮಾ ಪುಸಲಾಯಿಸಿ ಟಾಟಾ ಏಸ್ ವಾಹನದಲ್ಲಿ ಕರೆದೊಯ್ದು, ಆಕೆ ಮೇಲೆ ಹಲ್ಲೆ ಮಾಡಿ, ತನ್ನ ಕರವಸ್ತ್ರದಿಂದ ಆಕೆಯ ಗುತ್ತಿಗೆಯನ್ನು ಬಿಗಿದು ಕೊಲೆ ಮಾಡಿದ್ದ. ಅನುಮಾನ ಬರಬಾರದೆಂದು ಆಕೆಯ ಶವವನ್ನು ಯಲಿಯೂರು ಸಮೀಪ ವಿಸಿ.ನಾಲೆಯಲ್ಲಿ ಎಸೆದು ತಲೆಮರೆಸಿಕೊಂಡಿದ್ದ. ಪ್ರಕರಣ ತನಿಖೆ ನಡೆಸಿದ ಮಂಡ್ಯ ಗ್ರಾಮಾಂತರ ಪೊಲೀಸರು ಉಮೇಶನ ಕೃತ್ಯವನ್ನು ಪತ್ತೆಹಚ್ಚಿ ನ್ಯಾಯಾಲಯಕ್ಕೆ ದೋಷಾ ರೋಪಣಾ ಪಟ್ಟಿ ಸಲ್ಲಿಸಿದ್ದರು.

ಮಂಡ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶÀ ಹೆಚ್.ಜಿ. ವಿಜಯಕುಮಾರ್‍ವಾದ-ಪ್ರತಿವಾದ ಆಲಿಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಉಮೇಶ್‍ಗೆ ಜೀವಾವಧಿ ಶಿಕ್ಷೆ ಮತ್ತು 75 ಸಾವಿರ ರೂ. ದಂಡ ವಿಧಿಸಿ ಕೋರ್ಟ್ ತೀರ್ಪು ನೀಡಿದೆ. ಸರ್ಕಾರಿ ಅಭಿಯೋಜಕ ಹೆಚ್.ಇ.ಚಿನ್ನಪ್ಪ ವಾದ ಮಂಡಿಸಿದ್ದರು.

Translate »