ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಲು ಸಿ-ವಿಜಿಲ್ ಆ್ಯಪ್ ಬಳಸಲು ಸಲಹೆ
ಕೊಡಗು

ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಲು ಸಿ-ವಿಜಿಲ್ ಆ್ಯಪ್ ಬಳಸಲು ಸಲಹೆ

April 11, 2019

ಮಡಿಕೇರಿ: ಸಿ-ವಿಜಿಲ್ ಮೊಬೈಲ್ ಆ್ಯಪ್ ಸದ್ಬಳಕೆ ಮಾಡಿ ಕೊಂಡು ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಲು ಸಾರ್ವಜನಿಕರು ಸಹ ಕರಿಸುವಂತೆ ಸ್ವೀಪ್ ಸಮಿತಿ ಅಧ್ಯಕ್ಷರಾದ ಕೆ.ಲಕ್ಷ್ಮಿಪ್ರಿಯಾ ಕೋರಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಹಣ, ಮದ್ಯ ಮತ್ತಿತರ ವಸ್ತುಗಳನ್ನು ಹಂಚಿ ಮತ ದಾರರಿಗೆ ಆಮಿಷ ಒಡ್ಡುವ ಪ್ರಕರಣಗಳನ್ನು ನಿಯಂತ್ರಿಸಲು ಚುನಾವಣಾ ಆಯೋಗ ಸಾರ್ವಜನಿಕ ಸ್ನೇಹಿ ಆ್ಯಪ್ ರೂಪಿಸಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳುವಂತಾಗ ಬೇಕು ಎಂದು ಅವರು ಹೇಳಿದರು. ಸಿ-ವಿಜಿಲ್ ಆ್ಯಪ್‍ನ ಮೂಲಕ ಚುನಾವಣಾ ಅಕ್ರಮಗಳ ಬಗ್ಗೆ ದೂರು ನೀಡಿದರೆ ಅಂಥ ವರ ಹೆಸರನ್ನು ಗೌಪ್ಯವಾಗಿ ಇಡಲಾಗು ವುದು. ಅಕ್ರಮಗಳಿಗೆ ಸಂಬಂಧಿತ ಛಾಯಾ ಚಿತ್ರ, ವೀಡಿಯೋ ಮತ್ತಿತರ ವಿವರಗಳನ್ನು ಆ್ಯಪ್ ಮೂಲಕ ಕಳುಹಿಸಿದ 15 ನಿಮಿಷ ದಲ್ಲಿ ಕ್ಷಿಪ್ರ ತನಿಖಾ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, 100 ನಿಮಿಷಗಳ ಒಳಗೆ ಮಾಹಿತಿ ನೀಡಲಾಗುತ್ತದೆ ಎಂದರು.

ಇನ್ನಷ್ಟು ಮಾಹಿತಿ: ಭಾರತ ಚುನಾ ವಣಾ ಆಯೋಗವು ಈ ಬಾರಿಯು ಲೋಕ ಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಹಾಗೂ ಅಭ್ಯರ್ಥಿಗಳ ಚುನಾ ವಣಾ ವೆಚ್ಚ ಕುರಿತು ನಿಗಾ ವಹಿಸಲು ಸಿ-ವಿಜಿಲ್ ಎಂಬ ಮೊಬೈಲ್ ಆ್ಯಪ್‍ನ್ನು ಪರಿಚಯಿಸಿದೆ. ನಾಗರಿಕರು ಸಿ-ವಿಜಿಲ್ ಆ್ಯಪ್ ಮೂಲಕ ದೂರು ದಾಖಲಿಸಿದ್ದಲ್ಲಿ ಸದರಿ ದೂರನ್ನು 100 ನಿಮಿಷದೊಳಗೆ ಇತ್ಯರ್ಥಗೊಳಿಸಲಾಗುವುದು.

ಸಿ-ವಿಜಿಲ್ ಆ್ಯಪ್‍ನ್ನು ಗೂಗಲ್ ಪ್ಲೇಸ್ಟೋರ್ ಮೂಲಕ ಡೌನ್‍ಲೋಡ್ ಮಾಡಿ ಕೊಂಡು ಫೋಟೋ ಅಥವಾ ವಿಡಿಯೋ ಮೂಲಕ ದೂರನ್ನು ದಾಖಲಿಸಬಹುದು. ಸಿ-ವಿಜಿಲ್ ಆ್ಯಪ್ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಿಂದಲೇ ಕಾರ್ಯಾಚರಣೆಯಲ್ಲಿದೆ. ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ನಿಯಮ ಉಲ್ಲಂ ಘನೆ ಮಾಡುವ ವ್ಯಕ್ತಿ, ಗುಂಪು, ಸ್ಥಳದ ಫೋಟೋ, ವೀಡಿಯೋಗಳನ್ನು ಈ ಆ್ಯಪ್‍ನಲ್ಲಿ ದಾಖಲಿಸಿ, ಜಿಲ್ಲಾ ಚುನಾ ವಣಾ ಘಟಕಕ್ಕೆ ನಾಗರಿಕರು ರವಾನಿ ಸಬಹುದು. ನಾಗರಿಕರು ಕಳುಹಿಸುವ ಈ ದೂರುಗಳು ಸಮೀಪದ ಜಿಲ್ಲಾ ಚುನಾ ವಣಾ ಆಯೋಗದ ಕಂಟ್ರೋಲ್ ರೂಂ ನಲ್ಲಿ ದಾಖಲಾಗುತ್ತದೆ. ಕಳುಹಿಸುವ ಫೋಟೋ ಅಥವಾ ವೀಡಿಯೋದಲ್ಲಿ ಚಿತ್ರೀಕರಿಸಿದ ಸ್ಥಳದ ಮಾಹಿತಿ ಜಿಪಿ ಆರ್‍ಎಸ್ ಮೂಲಕ ಚುನಾವಣಾ ಆಯೋ ಗಕ್ಕೆ ತಿಳಿಯುತ್ತದೆ. ದೂರಿನ ಸ್ಥಳ ಮಾಹಿ ತಿಯನ್ನು ಆಧರಿಸಿ ಆ ಸ್ಥಳಕ್ಕೆ ಸಮೀಪ ವಿರುವ ನೀತಿ ಸಂಹಿತೆ ನಿಗಾ ತಂಡದ ಅಧಿಕಾರಿಗೆ ದೂರು ರವಾನೆಯಾಗುತ್ತದೆ. ದೂರು ಬಂದ 5 ನಿಮಿಷದ ಅವಧಿಯೊ ಳಗೆ ಜಿಲ್ಲಾ ಕಂಟ್ರೋಲ್ ರೂಂ ಅಧಿಕಾರಿ ಗಳ ತಂಡಕ್ಕೆ ದೂರು ವರ್ಗಾಯಿಸುತ್ತಾರೆ.

ದೂರು ಕೈಗೆತ್ತಿಕೊಂಡ ಅಧಿಕಾರಿಗಳ ತಂಡ 100 ನಿಮಿಷಗಳ ಕಾಲಾವಧಿ ಯೊಳಗೆ ಪರಿಶೀಲನೆ ನಡೆಸಿ ವರದಿ ಸಲ್ಲಿ ಸುತ್ತದೆ. ದೂರು ದಾಖಲಾದ 100 ನಿಮಿಷದೊಳಗೆ ದೂರುದಾರ ನಾಗರಿಕ ನಿಗೆ ದೂರಿನ ತನಿಖೆಯ ಮಾಹಿತಿಯ ಸ್ಥಿತಿ ಸಿ-ವಿಜಿಲ್ ಆ್ಯಪ್ ಮೂಲಕ ರವಾ ನೆಯಾಗುತ್ತದೆ. ಈ ಎಲ್ಲಾ ಆನ್‍ಲೈನ್ ಬೆಳವಣಿಗೆಗಳ ಮೇಲೆ ಕೇಂದ್ರ ಚುನಾ ವಣಾ ಆಯೋಗ ಕಣ್ಣಿಟ್ಟಿರುತ್ತದೆ. ಮತ ದಾರರನ್ನು ಸೆಳೆಯಲು ಹಣ, ಮದ್ಯ ಹಂಚುವುದು, ಉಡುಗೊರೆ ನೀಡುವುದು, ಧಾರ್ಮಿಕ ಸ್ಥಳ, ಸಮುದಾಯ ಭವನ ಗಳಲ್ಲಿ ಮತ ಯಾಚಿಸುವುದು, ಧ್ವನಿ ವರ್ಧ ಕಗಳನ್ನು ಅನುಮತಿ ಇಲ್ಲದ ಸಮಯದಲ್ಲಿ ಬಳಸುವುದು ಕಂಡುಬಂದಲ್ಲಿ ಹಾಗೂ ಇತರೆ ಚಟುವಟಿಕೆಗಳ ಬಗ್ಗೆ ಪ್ರತಿಯೊ ಬ್ಬರೂ ಸಿ-ವಿಜಿಲ್ ಆ್ಯಪ್ ಮೂಲಕ ಚುನಾ ವಣಾ ಆಯೋಗಕ್ಕೆ ದೂರು ಸಲ್ಲಿಸಬಹುದು.

ದೂರು ನೀಡುವ ನಾಗರಿಕರು ತಮ್ಮ ಮೊಬೈಲ್ ನಂ. ಮತ್ತು ಹೆಸರು ನೊಂದಾ ಯಿಸಬೇಕು ಅಥವಾ ಅನಾಮಧೇಯ ರಾಗಿ ದೂರು ನೀಡಲು ಅವಕಾಶ ಕಲ್ಪಿ ಸಲಾಗಿದೆ. ನೋಂದಾಯಿತ ದೂರುದಾ ರರಿಗೆ ಮಾತ್ರ ಕ್ರಮ ಕೈಗೊಂಡಿರುವ ಬಗ್ಗೆ ಮಾಹಿತಿ ಲಭಿಸಲಿದೆ.

ಎಲ್ಲಾ ನಾಗರಿಕರು ಸಿ-ವಿಜಿಲ್ ಆ್ಯಪ್‍ನ್ನು ಡೌನ್‍ಲೋಡ್ ಮಾಡಿಕೊಂಡು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಸಿ-ವಿಜಿಲ್ ಆ್ಯಪ್ ಮೂಲಕ ದೂರು ದಾಖಲಿಸಬಹು ದಾಗಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷ ರಾದ ಕೆ.ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.

ರ್ಯಾಂಡ್‍ಮೈಸೇಷನ್ ಪ್ರಕ್ರಿಯೆ
ಮಡಿಕೇರಿ: ಲೋಕಸಭಾ ಚುನಾವಣೆ ಸಂಬಂಧ ಮಡಿಕೇರಿ-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ 22 ಮಂದಿ ಕಣದಲ್ಲಿರುವ ಹಿನ್ನೆಲೆ ಹೆಚ್ಚುವರಿ ವಿದ್ಯುನ್ಮಾನ ಮತಯಂತ್ರಗಳ ರ್ಯಾಂಡಮೈಸೇಷನ್ ಪ್ರಕ್ರಿಯೆಯು(ಸಮ್ಮಿಶ್ರಣ) ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಧ್ಯಕ್ಷತೆಯಲ್ಲಿ ಬುಧವಾರ ನಗರದ ಜಿಲ್ಲಾಡಳಿತ ಭವನ ರಾಷ್ಟ್ರೀಯ ಮಾಹಿತಿ ಕೇಂದ್ರದಲ್ಲಿ ನಡೆಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ವಿದ್ಯುನ್ಮಾನ ಮತ ಯಂತ್ರಗಳ ನೋಡಲ್ ಅಧಿಕಾರಿ ಇಬ್ರಾಹಿಂ, ರಾಷ್ಟ್ರೀಯ ಮಾಹಿತಿ ಕೇಂದ್ರದ ಅಧಿಕಾರಿ ಅಜಿತ್, ಹೇಮಂತ್ ಕುಮಾರ್ ಇತರರು ಪಾಲ್ಗೊಂಡಿದ್ದರು.

Translate »