ಶಂಕಿತ ನಕ್ಸಲ್ ಮುಖಂಡ ರೂಪೇಶ್ ಕೋರ್ಟ್‍ಗೆ ಹಾಜರು
ಕೊಡಗು

ಶಂಕಿತ ನಕ್ಸಲ್ ಮುಖಂಡ ರೂಪೇಶ್ ಕೋರ್ಟ್‍ಗೆ ಹಾಜರು

April 11, 2019

ಮಡಿಕೇರಿ: ನಿಷೇಧಿತ ನಕ್ಸಲ್ ಸಂಘಟನೆಯ ಶಂಕಿತ ನಕ್ಸಲ್ ಮುಖಂಡ ರೂಪೇಶ್‍ನನ್ನು ಮಡಿಕೇರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜ ರುಪಡಿಸಲಾಯಿತು.

ಮಡಿಕೇರಿ ಜಿಲ್ಲಾ ಕೇಂದ್ರ ಕಾರಾಗೃಹ ದಲ್ಲಿದ್ದ ರೂಪೇಶ್‍ನನ್ನು ಕೇರಳ ಭಯೋ ತ್ಪಾದಕ ನಿಗ್ರಹ ದಳ, ಕೇರಳ ಪೊಲೀಸರು ಮತ್ತು ಕೊಡಗು ಪೊಲೀಸ್ ಕಮಾಂ ಡೊಗಳು ಶಸ್ತ್ರಸಜ್ಜಿತರಾಗಿ ಬಿಗಿ ಭದ್ರತೆ ಯಲ್ಲಿ ನ್ಯಾಯಾಲಯಕ್ಕೆ ಕರೆತಂದರು. ಪೊಲೀಸ್ ವಾಹನದಿಂದ ಕೆಳಗಿಳಿಯುತ್ತಿ ದ್ದಂತೆಯೇ ನಕ್ಸಲ್ ಪರ ಘೋಷಣೆ ಕೂಗಿದ ರೂಪೇಶ್, ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವಂತೆ ಘೋಷಣೆ ಮೊಳಗಿಸಿ, ನ್ಯಾಯಾಲಯ ಆವರಣ ಪ್ರವೇಶಿಸಿದ.

ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ವೀರಪ್ಪ.ವಿ.ಮಲ್ಲಾಪುರ ಅವರ ಮುಂದೆ ಹಾಜರಾದ ರೂಪೇಶ್, ಕೇರಳದಲ್ಲಿ ಏ.23 ರಿಂದ ಲೋಕಸಭಾ ಚುನಾವಣೆ ಆರಂಭ ವಾಗಲಿದೆ. ಮಾತ್ರವಲ್ಲದೇ, ಏ.29 ಮತ್ತು 30ರಂದು ತಮಿಳುನಾಡಿನ ನ್ಯಾಯಾ ಲಯದಲ್ಲೂ ನನ್ನ ಪ್ರಕರಣದ ವಿಚಾರಣೆ ನಡೆಯಲಿದೆ. ಮೇ ತಿಂಗಳಲ್ಲಿ ನ್ಯಾಯಾ ಲಯಕ್ಕೆ ಬೇಸಿಗೆ ರಜೆ ಕೂಡ ಇರಲಿದೆ. ಜೂನ್ ತಿಂಗಳಲ್ಲಿ ಮತ್ತೆ ನ್ಯಾಯಾಲಯದ ಕಲಾಪಗಳು ಆರಂಭವಾಗಲಿದೆ. ಇದರಿಂ ದಾಗಿ ನನ್ನ ಪ್ರಕರಣದ ವಿಚಾರಣೆ ತಡವಾ ಗುವುದರಿಂದ ಸಾಧ್ಯವಾದಷ್ಟು ಶೀಘ್ರವಾಗಿ ನನ್ನ ವಿಚಾರಣೆ ಆರಂಭಿಸಲು ಈ ತಿಂಗಳ ಒಳಗೆ ದಿನಾಂಕವನ್ನು ನಿಗಧಿ ಮಾಡು ವಂತೆ ಮನವಿ ಸಲ್ಲಿಸಿದ.

ಬಳಿಕ ಪ್ರತಿಕ್ರಿಯಿಸಿದ ನ್ಯಾಯಾಧೀಶ ವಿ.ಮಲ್ಲಾಪುರ, ಇಂದು ಸರಕಾರಿ ವಕೀಲರು ರಜೆಯಲ್ಲಿರುವುದರಿಂದ ಅವರ ವಾದ ಆಲಿಸಲು ಸಾಧ್ಯವಾಗಿಲ್ಲ. ಅವರಿಗೂ ತಮ್ಮ ನಿಲುವು ತಿಳಿಸಲು ಅವಕಾಶ ನೀಡಬೇಕಿರು ವುದರಿಂದ ಏ.27ಕ್ಕೆ ಪ್ರಕರಣದ ವಿಚಾ ರಣೆಯನ್ನು ಮುಂದೂಡಿದರು. ಬಳಿಕ ನ್ಯಾಯಾ ಲಯದಲ್ಲಿ ತನ್ನ ವಕೀಲರೊಂದಿಗೆ ಕೆಲಕಾಲ ಮಾತನಾಡಲು ಅವಕಾಶ ನೀಡಬೇಕೆಂದು ರೂಪೇಶ್ ಮನವಿ ಮಾಡಿದ. ಇದಕ್ಕೂ ನ್ಯಾಯ ಮೂರ್ತಿಗಳು ಅವಕಾಶ ನೀಡಿದರು.

ಬಳಿಕ ನ್ಯಾಯಾಲಯದ ಮುಖ್ಯ ದ್ವಾರ ದಿಂದ ಹೊರ ಬಂದ ರೂಪೇಶ್ ಮತ್ತೆ ನಕ್ಸಲ್ ಪರ ಘೋಷಣೆ ಕೂಗಿದ ಲೋಕ ಸಭೆ ಚುನಾವಣೆಗಳು ಕಾರ್ಪೋರೇಟ್ ಕಂಪೆನಿಗಳಿಗೆ ಮಾತ್ರವೇ ಸೀಮಿತವಾಗಿದೆ. ಈ ಚುನಾವಣೆಯನ್ನು ವಿರೋಧಿಸ ಬೇಕೆಂದು ಕರೆ ನೀಡಿದ್ದಲ್ಲದೇ, ನಕ್ಸಲ್ ಜಿಂದಾಬಾದ್ ಎಂದು ಘೋಷಣೆ ಕೂಗಿ ಪೊಲೀಸ್ ವಾಹನವೇರಿದ.

ಪ್ರಕರಣ ಹಿನ್ನೆಲೆ: ಶಂಕಿತ ನಕ್ಸಲ್ ಮುಖಂಡ ರೂಪೇಶ್ ವಿರುದ್ಧ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಬಗ್ಗೆ ಆರೋಪಗಳಿದ್ದು, ಒಟ್ಟು 38 ಪ್ರಕರಣಗಳಿವೆ. ಈತನ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ 2 ಪ್ರತ್ಯೇಕ ಪ್ರಕರಣಗಳೂ ದಾಖ ಲಾಗಿದೆ. 2010ರಲ್ಲಿ ಭಾಗಮಂಡಲ ವ್ಯಾಪ್ತಿಯ ಮುಂಡ್ರೋಟುವಿನ ಮಾಂಗುಡಿ ಮಲೆ ಎಂಬಲ್ಲಿ ಪ್ರತ್ಯಕ್ಷನಾಗಿ ಅಲ್ಲಿನ ಗ್ರಾಮ ಸ್ಥರಿಗೆ ಬೆದರಿಕೆ ಒಡ್ಡಿರುವ ಆರೋಪ ರೂಪೇಶ್ ಮೇಲಿದೆ. ಶಂಕಿತ ನಕ್ಸಲ್ ಮುಖಂಡ ರೂಪೇಶ್ ಮಡಿಕೇರಿ ಗ್ರಾಮಾಂ ತರ ಠಾಣೆಯಲ್ಲಿ ದಾಖಲಾಗಿರುವ 2 ಪ್ರತ್ಯೇಕ ಪ್ರಕರಣದ ವಿಚಾರಣೆಗಾಗಿ ಇದೀಗ 5ನೇ ಬಾರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾ ಯಿತು. ಬುಧವಾರ ವಿಚಾರಣೆ ನಡೆಸಿದ ಬಳಿಕ ಆರೋಪಿ ರೂಪೇಶನನ್ನು ಕೇರಳಕ್ಕೆ ಕರೆದೊಯ್ಯಲಾಯಿತು. ನ್ಯಾಯಾಲಯದ ಹೊರಭಾಗ ನಗರ ಠಾಣಾಧಿಕಾರಿ ಷಣ್ಮುಗ ನೇತೃತ್ವದಲ್ಲಿ ಬ್ಯಾರಿಕೇಡ್‍ಗಳನ್ನು ಅಳ ವಡಿಸಿ ಬಿಗಿ ಭದ್ರತೆ ಮಾಡಲಾಗಿತ್ತು.

Translate »