ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಎ.ಹೆಚ್.ವಿಶ್ವನಾಥ್ ಗುದ್ದಲಿ ಪೂಜೆ
ಮೈಸೂರು

ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಎ.ಹೆಚ್.ವಿಶ್ವನಾಥ್ ಗುದ್ದಲಿ ಪೂಜೆ

December 3, 2018

ಹುಣಸೂರು:  ತಾಲೂಕಿನ ಬಿಳಿಕೆರೆ ಹೋಬಳಿ ಶಾಂತಿ ಪುರದಲ್ಲಿ ಅಲ್ಪಸಂಖ್ಯಾತ ಇಲಾಖೆಯಿಂದ  25 ಲಕ್ಷ ರೂ. ವೆಚ್ಚದ ಕಾಂಕ್ರಿಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಶಾಸಕ ಎ.ಹೆಚ್. ವಿಶ್ವನಾಥ್ ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಸಮಾರಂಭ ಉದ್ದೇಶಿಸಿ ಮಾತ ನಾಡಿದ ಅವರು, ಚುನಾವಣಾ ಪೂರ್ವ ದಲ್ಲಿ ಗ್ರಾಮಸ್ಥರಿಗೆ ನೀಡಿದ್ದ ಭರವಸೆಯಂತೆ ಪ್ರಥಮ ಹಂತದಲ್ಲಿ ಗ್ರಾಮ ಪರಿಮಿತಿಯಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ನಿರ್ಮಿ ಸಲಾಗುತ್ತಿದೆ. ಈ ಭಾಗದ ರಸ್ತೆಗಳ ಅಭಿ ವೃದ್ಧಿಗೂ ಕ್ರಮ ಕೈಗೊಳ್ಳಲಾಗುವುದು. ಕಳೆದ ವರ್ಷ ಕುಟ್ಟುವಾಡಿ ಕೆರೆ ಏರಿ ಮೇಲಿನ ರಸ್ತೆ ನಿರ್ಮಾಣ ಕಾಮಗಾರಿ ಕಳಪೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಈ ಬಗ್ಗೆ ದಾಖಲೆ ಹಾಗೂ ಸ್ಥಳ ಪರಿಶೀಲನೆ ನಡೆಸ ಲಾಗುವುದು ಎಂದು ತಿಳಿಸಿದರು.

ಶಾಂತಿಪುರಕ್ಕೆ ಮಧಾಹ್ನ ಬಸ್ ರದ್ದತಿ ಯಾಗಿರುವ ಬಗ್ಗೆ ಸ್ಥಳದಿಂದಲೇ ಡಿಪೋ ಮ್ಯಾನೇಜರ್‍ಗೆ ಕರೆಮಾಡಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದ ಶಾಸಕರು, ತಾಲೂಕಿನ ಸಾರಿಗೆ ಸಮಸ್ಯೆಗಳ ಬಗ್ಗೆ ಶೀಘ್ರವೇ ಹುಣಸೂರಿನಲ್ಲಿ ಸಾರಿಗೆ ಅದಾಲತ್ ನಡೆಸಲಾಗುವುದು ಎಂದರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಸರ್ಕಾರ ತಾಲೂಕಿಗೆ ಸಾಕಷ್ಟು ಅನುದಾನ ನೀಡಲು ಉದ್ದೇಶಿಸಿದ್ದು, ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ ಶಾಸಕರು, ಡಿ.8ರಂದು ಪಟ್ಟಣದಲ್ಲಿ ನಡೆಯುವ ಹುಣಸೂರು ಹಬ್ಬಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುವಂತೆ ಮನವಿ ಮಾಡಿದರು.

ಜಿಪಂ ಸದಸ್ಯ ಎಂ.ಬಿ.ಸುರೇಂದ್ರ ಮಾತ ನಾಡಿ, ಶಾಸಕರು ಈಗಾಗಲೇ ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ 96.50 ಕೋಟಿ ರೂ. ಅನುದಾನ ತಂದಿದ್ದು, ಹಲವಾರು ಕಾಮಗಾರಿ ಗಳೊಂದಿಗೆ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ತಿಳಿಸಿದರು.

ಗ್ರಾಮದ ಮುಖಂಡ ಅರುಳಪ್ಪ ಶಿವ ಪುರ ರಸ್ತೆ ಡಾಂಬರೀಕರಣ, ಪಕ್ಕದ ಕಾಡು ವಡ್ಡರಗುಡಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಬೇಕು. ಶಾಂತಿ ಪುರ ಕೆರೆ ಸಾಕಷ್ಟು ಒತ್ತುವರಿಯಾಗಿದ್ದು, ತೆರವುಗೊಳಿಸಿ ಕಾಲುವೆ ದುರಸ್ತಿ ಮಾಡಿಸ ಬೇಕು. ಈ ಭಾಗದ ಜಮೀನು ದುರಕಾಸ್ತು ಆಗುತ್ತಿಲ್ಲ, ಈ ಬಗ್ಗೆ ಗಮನ ಹರಿಸ ಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಉಯಿಗೊಂಡನ ಹಳ್ಳಿ ಗ್ರಾಪಂ ಅಧ್ಯಕ್ಷ ಮಂಚೇಗೌಡ, ತಾಪಂ ಸದಸ್ಯೆ ಸರಸ್ವತಿ, ಜಿಲ್ಲಾ ಹಾಪ್‍ಕಾಮ್ಸ್ ಅಧ್ಯಕ್ಷ ಸೂರ್ಯಕುಮಾರ್, ಸ್ಥಳೀಯ ಚರ್ಚ್ ಫಾದರ್ ಸಂತೋಷ್‍ಕುಮಾರ್, ತಾಲೂಕು ಕ್ರೈಸ್ತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಾರ್ಜ್ ಮಾತನಾಡಿದರು. ನಗರಸಭಾ ಸದಸ್ಯೆ ಸುನಿತಾ ಜಯರಾಮೇಗೌಡ, ಎಪಿಎಂಸಿ ಸದಸ್ಯ ಸುರೇಶ್, ಗ್ರಾಮದ ಯಜಮಾನ ಅಂತೋಣಿ ರಾಜಣ್ಣ, ಮುಖಂಡರಾದ ಬಲವೇಂದ್ರ, ದೇವೇಂದ್ರ, ಕನÀಕರಾಜು, ಪಾಪೇಗೌಡ, ಭೂಸೇನಾ ನಿಗಮದ ಎಇಇ ರಮೇಶ್, ಗುತ್ತಿಗೆದಾರ ವೆಂಕಟೇಶ್ ಸೇರಿದಂತೆ ಅನೇಕರಿದ್ದರು.

Translate »