ಮುಕ್ತ ವಿವಿ ಸಂಬಂಧ ರಾಜ್ಯಪಾಲರ ಹೇಳಿಕೆಗೆ ವಿಶ್ರಾಂತ ಕುಲಪತಿ  ಪ್ರೊ. ಕೆ.ಎಸ್.ರಂಗಪ್ಪ ಸ್ವಾಗತ
ಮೈಸೂರು

ಮುಕ್ತ ವಿವಿ ಸಂಬಂಧ ರಾಜ್ಯಪಾಲರ ಹೇಳಿಕೆಗೆ ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ಸ್ವಾಗತ

December 3, 2018

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮಾನ್ಯತೆ ನವೀ ಕರಣ ಲೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಪಾಲರ ಹೇಳಿಕೆಯನ್ನು ವಿಶ್ರಾಂತ ಕುಲ ಪತಿ ಪ್ರೊ.ಕೆ.ಎಸ್.ರಂಗಪ್ಪ ಸ್ವಾಗತಿಸಿದ್ದಾರೆ.

ಕೆ.ಎಸ್.ಒಯು. ಘಟಿಕೋತ್ಸವ ಭವ ನದ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಭಾಗವಹಿಸಿದ್ದ ರಾಜ್ಯಪಾಲ ವಜುಬಾಯಿ ವಾಲ ಅವರು ತಮ್ಮ ಭಾಷಣದಲ್ಲಿ, ಮುಕ್ತ ವಿವಿಗೆ ಮಾನ್ಯತೆ ನವೀಕರಣಗೊಳ್ಳದೆ ಉಂಟಾದ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿ `ಈ ಹಿಂದಿನ ಕುಲಪತಿ ಯುಜಿಸಿ ಜತೆಗೆ ಸರಿಯಾದ ರೀತಿ ಪತ್ರ ವ್ಯವಹಾರ ನಡೆಸಲು ವಿಫಲರಾದ ಕಾರಣ ಮಾನ್ಯತೆ ಸಮಸ್ಯೆ ಉದ್ಭವಿಸಿತ್ತು. ಆದರೆ ಹಾಲಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಅವರ ಸತತ ಪ್ರಯತ್ನದ ಫಲವಾಗಿ ಈಗ ಮತ್ತೆ ಮಾನ್ಯತೆ ಲಭಿಸಿದೆ ‘ ಎಂದಿದ್ದರು.

ರಾಜ್ಯಪಾಲರ ಈ ಹೇಳಿಕೆಯನ್ನು ಸ್ವಾಗತಿಸಿರುವ ವಿಶ್ರಾಂತ ಕುಲಪತಿ ಪೆÇ್ರ.ಕೆ.ಎಸ್. ರಂಗಪ್ಪ, ನನ್ನ ಅವಧಿಯಲ್ಲಿ ವಿಶ್ವವಿದ್ಯಾನಿಲಯಕ್ಕೆ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ. ನನ್ನ ಕುಲಪತಿ ಅವಧಿ ಮುಗಿದ ಬಳಿಕ 6 ತಿಂಗಳುಗಳ ಕಾಲ ಯುಜಿಸಿ ಮಾನ್ಯತೆ ಇತ್ತು. ಆದರೆ ಆನಂತರ ಯುಜಿಸಿ ಮಾನ್ಯತೆ ಸಮಸ್ಯೆ ಎದುರಾಯಿತು. ಈ ಅಂಶವನ್ನು ಹಲವಾರು ಬಾರಿ ನಾನೇ ಸ್ವತಃ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದೆ. ಇದೀಗ ಇದೇ ಮೊದಲ ಬಾರಿಗೆ ಖುದ್ದು ರಾಜ್ಯಪಾಲರು ಇದೇ ಅಂಶವನ್ನು ಉಲ್ಲೇಖಿಸಿರುವುದು ಸ್ವಾಗತಾರ್ಹ. ಆ ಮೂಲಕವಾದರೂ ಅನಗತ್ಯವಾಗಿ ನನ್ನ ವಿರುದ್ಧ ಟೀಕೆ ಮಾಡುತ್ತಿದ್ದವರು ಸತ್ಯ ತಿಳಿದುಕೊಂಡರೆ ಸಾಕು ಎಂದು ಪೆÇ್ರ. ಕೆ.ಎಸ್.ರಂಗಪ್ಪ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಕ್ತ ವಿವಿ ಆವರಣ ಹಾಗೂ ಘಟಿಕೋತ್ಸವ ಭವನದ ಬಗೆಗೂ ರಾಜ್ಯಪಾಲರು ಬಹಿರಂಗವಾಗಿಯೇ ಮೆಚ್ಚುಗೆ ವ್ಯಕ್ತಪಡಿಸಿರುವುದಕ್ಕೆ ಪ್ರೊ.ರಂಗಪ್ಪ ಸಂತಸ ವ್ಯಕ್ತಪಡಿಸಿ, ಮುಕ್ತ ವಿವಿಗೆ ಹೊಸರೂಪ ನೀಡಬೇಕು ಎಂಬುದೇ ಕುಲಪತಿಯಾಗಿದ್ದ ನನ್ನ ಕನಸಾ ಗಿತ್ತು. ಈ ನಿಟ್ಟಿನಲ್ಲಿ ಎದುರಾದ ಹಲವಾರು ತೊಡಕು, ಟೀಕೆಗಳಿಗೆ ಕಿವಿಗೊಡದೆ ವಿಶ್ವವಿದ್ಯಾ ನಿಲಯಕ್ಕೆ ಹೊಸ ರೂಪ ನೀಡಿದ್ದೆ. ಘಟಿಕೋತ್ಸವ ಭವನ ಸಹ ಸಂಪೂರ್ಣ ನಿರ್ಮಾಣ ಗೊಂಡು ಇಂಟೀರಿಯರ್ಸ್ ಕೆಲಸ ಮಾತ್ರ ಬಾಕಿ ಉಳಿದಿತ್ತು. ಅದನ್ನು ಪೂರ್ಣಗೊಳಿಸಿ ಭವನ ಉದ್ಘಾಟಿಸಬೇಕು ಎನ್ನುವಷ್ಟರಲ್ಲಿ ನನ್ನ ಅವಧಿ ಪೂರ್ಣಗೊಂಡಿತ್ತು. ಹಾಗಾಗಿ ಲೋಕಾರ್ಪಣೆಗೊಂಡಿರಲಿಲ್ಲ. ಇದೀಗ ರಾಜ್ಯಪಾಲರು ಭವನ ಉದ್ಘಾಟಿಸಿ ಮೆಚ್ಚುಗೆ ಮಾತುಗಳನ್ನಾಡಿರುವುದು ಸಾರ್ಥಕವಾದಂತಾಗಿದೆ ಎಂದಿದ್ದಾರೆ.

Translate »