ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಧ್ಯಕ್ಷರಾಗಿ  ಪ್ರೊ.ಕೆ.ಎಸ್.ರಂಗಪ್ಪ ಅಧಿಕಾರ ಸ್ವೀಕಾರ
ಮೈಸೂರು

ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಧ್ಯಕ್ಷರಾಗಿ ಪ್ರೊ.ಕೆ.ಎಸ್.ರಂಗಪ್ಪ ಅಧಿಕಾರ ಸ್ವೀಕಾರ

April 2, 2019

ಮೈಸೂರು: ಮೈಸೂರು ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಸೋಮವಾರ ಕೊಲ್ಕತ್ತಾದಲ್ಲಿನ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ 2019ನೇ ಸಾಲಿನ ಇಂಡಿಯನ್ ಸೈನ್ಸ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.

ಈ ವೇಳೆ ಭಾರತೀಯ ವಿಜ್ಞಾನ ಕಾಂಗ್ರೆಸ್‍ನ ಪದಾಧಿಕಾರಿಗಳು, ಹಿಂದಿನ ಅಧ್ಯಕ್ಷರು ಸೇರಿದಂತೆ ಹಲವಾರು ಪ್ರಖ್ಯಾತ ವಿಜ್ಞಾನಿಗಳು ಹಾಜರಿದ್ದು, ಪ್ರೊ.ಕೆ.ಎಸ್. ರಂಗಪ್ಪ ಅವರಿಗೆ ಶುಭ ಕೋರಿದರು.

ಪ್ರೊ.ಕೆ.ಎಸ್.ರಂಗಪ್ಪ ಅವರು 1.4.2019 ರಿಂದ 31.3.2020ರವರೆಗೆ ಇಂಡಿಯನ್ ಸೈನ್ಸ್ ಕಾಂಗ್ರೆಸ್‍ನ ಅಧ್ಯಕ್ಷರಾಗಿ ಅಧಿಕಾರ ದಲ್ಲಿರುತ್ತಾರೆ. 15.3.2018ರಂದು ಮಣಿ ಪುರ ರಾಜಧಾನಿ ಇಂಫಾಲದಲ್ಲಿ ನಡೆದ ಇಂಡಿಯನ್ ಸೈನ್ಸ್ ಕಾಂಗ್ರೆಸ್‍ನ ಸರ್ವ ಸದಸ್ಯರ ಸಭೆಯಲ್ಲಿ ಪ್ರೊ.ಕೆ.ಎಸ್.ರಂಗಪ್ಪ ಅವರ ಆಯ್ಕೆಯನ್ನು ಘೋಷಿಸಲಾಗಿತ್ತು. ಅಖಿಲ ಭಾರತ ಮಟ್ಟದಲ್ಲಿ ಸದಸ್ಯರನ್ನು ಹೊಂದಿರುವ ಇಂಡಿಯನ್ ಸೈನ್ಸ್ ಕಾಂಗ್ರೆಸ್‍ನ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಚುನಾವಣೆ ನಡೆಸಲಾಗಿತ್ತು. ಮಾ.15, 2018ರಂದು ನಡೆದ ಸಭೆಯಲ್ಲಿ ಮತ ಎಣಿಕೆ ನಡೆಸ ಲಾಗಿತ್ತು. ಆಗ ಕರ್ನಾಟಕದ ರಸಾಯನ ಶಾಸ್ತ್ರ ವಿಜ್ಞಾನಿ, ಮೈಸೂರು ವಿವಿ ವಿಶ್ರಾಂತ ಕುಲಪತಿ ರಂಗಪ್ಪ ದಾಖಲೆ ಸಂಖ್ಯೆಯಲ್ಲಿ ಮತ ಪಡೆದು ಆಯ್ಕೆಗೊಂಡಿದ್ದಾರೆಂದು ಪ್ರಕಟಿಸಲಾಗಿತ್ತು. ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾ ವಣೆಯಲ್ಲಿ ಒಟ್ಟು 59 ಮಂದಿ ಮತ ಚಲಾಯಿ ಸಿದ್ದರು. ಈ ಪೈಕಿ 2 ಮತಗಳು ಅಸಿಂಧು ವಾಗಿದ್ದರೆ, ಉಳಿದ 57 ಮತಗಳು ಪ್ರೊ. ರಂಗಪ್ಪ ಅವರ ಪಾಲಾಗಿದ್ದು ವಿಶೇಷವಾಗಿತ್ತು. ಆ ಮೂಲಕ ಇಡೀ ಇಂಡಿಯನ್ ಸೈನ್ಸ್ ಕಾಂಗ್ರೆಸ್‍ನ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದ ಹೆಗ್ಗಳಿಕೆ ಪ್ರೊ.ಕೆ.ಎಸ್.ರಂಗಪ್ಪ ಅವರದ್ದು. ಈ ತನಕ ನಡೆದ ಚುನಾವಣೆ ಯಲ್ಲಿ ಯಾರೊಬ್ಬರೂ ಶೇ.100ರಷ್ಟು ಮತ ಗಳನ್ನು ಪಡೆದು ಆಯ್ಕೆಗೊಂಡಿರಲಿಲ್ಲ. ಆದರೆ ಕರ್ನಾಟಕದ ವಿಜ್ಞಾನಿ ಪ್ರೊ.ಕೆ.ಎಸ್. ರಂಗಪ್ಪ ಅವರು ಈಗ ಸೆಂಟ್ ಪರ್ಸೆಂಟ್ ಓಟು ಗಳಿಸಿ ನೂತನ ದಾಖಲೆ ನಿರ್ಮಿಸಿ ದ್ದಾರೆ.

ಪ್ರೊ.ಯು.ಆರ್.ರಾವ್, ಡಾ. ಕಸ್ತೂರಿ ರಂಗನ್, ಪ್ರೊ.ಸಿ.ಎನ್.ಆರ್.ರಾವ್ ಅವ ರಂತಹ ಘಟಾನುಘಟಿ ವಿಜ್ಞಾನಿಗಳು ಇಂಡಿ ಯನ್ ಸೈನ್ಸ್ ಕಾಂಗ್ರೆಸ್‍ನ ಅಧ್ಯಕ್ಷರುಗಳಾಗಿ ಆಯ್ಕೆಗೊಂಡಿದ್ದರು. ಇದೀಗ ಮತ್ತೊಮ್ಮೆ ಕರ್ನಾಟಕದ ವಿಜಾÐನಿ ಪ್ರೊ.ರಂಗಪ್ಪ ದಾಖಲೆ ಮೂಲಕ ಆಯ್ಕೆಗೊಂಡಿದ್ದು, ಕನ್ನಡಿಗರ ಸಂತಸವನ್ನು ಇಮ್ಮಡಿಗೊಳಿಸಿದೆ.

Translate »