ಬನ್ನೂರು ಬಳಿ ಲಾರಿ ಹರಿದುಆಯಿಷ್ ಉದ್ಯೋಗಿ ಸಾವು
ಮೈಸೂರು

ಬನ್ನೂರು ಬಳಿ ಲಾರಿ ಹರಿದುಆಯಿಷ್ ಉದ್ಯೋಗಿ ಸಾವು

August 13, 2019

ಮೈಸೂರು,ಆ.12(ಆರ್‍ಕೆ)- ಶಿಂಷಾದ ರಮಣೀಯ ಸೌಂದರ್ಯ ಕಣ್ತುಂಬಿ ಕೊಳ್ಳಲು ಪತಿಯೊಂದಿಗೆ ಹೋಗುತ್ತಿದ್ದಾಗ ಬೈಕಿನಿಂದ ಬಿದ್ದ ವೇಳೆ ಲಾರಿ ಹರಿದ ಪರಿ ಣಾಮ ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (AIISH) ಉದ್ಯೋಗಿ ಸಾವನ್ನಪ್ಪಿರುವ ಘಟನೆ ಬನ್ನೂರು ಸಮೀಪ ಇಂದು ಬೆಳಿಗ್ಗೆ ಸಂಭವಿಸಿದೆ.

ಮೈಸೂರಿನ ಕುವೆಂಪುನಗರದ ಗಾನ ಭಾರತಿ ಹಿಂಭಾಗದ ನಿವಾಸಿ ಲೋಕೇಶ್ ಅವರ ಪತ್ನಿ ಶ್ರೀಮತಿ ಕವಿತಾ(37) ಸಾವ ನ್ನಪ್ಪಿದವರು. ಆಯಿಷ್‍ನಲ್ಲಿ ಕಳೆದ 10 ವರ್ಷಗಳಿಂದ ಆರ್ಟಿಸ್ಟ್ ಕಂ ಫೋಟೋ ಗ್ರಾಫರ್ ಆಗಿ ಸೇವೆ ಸಲ್ಲಿಸುತ್ತಿದ್ದ ಕವಿತಾ, ಧುಮ್ಮಿಕ್ಕುತ್ತಿರುವ ಕಾವೇರಿಯ ನೈಸರ್ಗಿಕ ರಮಣೀಯ ದೃಶ್ಯ ನೋಡಲೆಂದು ಪತಿ ಲೋಕೇಶ್ ಜೊತೆ ಬೈಕ್‍ನಲ್ಲಿ ಶಿವನ ಸಮುದ್ರದ ಬ್ಲಫ್‍ಗೆ ಹೋಗುತ್ತಿದ್ದರು.

ಮೈಸೂರಿನ ಕಾವೇರಿ ಗ್ರಾಮೀಣ ಬ್ಯಾಂಕ್ (ಕೆಜಿಬಿ) ಪ್ರಧಾನ ಕಚೇರಿಯಲ್ಲಿ ಸಿಸ್ಟಂ ಅಡ್ಮಿನ್ ಆಗಿ ಕೆಲಸ ಮಾಡುತ್ತಿರುವ ಪತಿ ಲೋಕೇಶ್‍ರೊಂದಿಗೆ ಜಲಪಾತ ನೋಡ ಲೆಂದು ಬಕ್ರೀದ್ ರಜಾ ದಿನವಾದ ಇಂದು ಬೈಕ್‍ನಲ್ಲಿ ಹೋಗುತ್ತಿದ್ದಾಗ ರಸ್ತೆ ದುರಸ್ತಿ ನಡೆಯುತ್ತಿದ್ದ ಕಾರಣ ಬನ್ನೂರು ಸೇತುವೆ ಬಳಿ ನಿಯಂತ್ರಣ ತಪ್ಪಿ, ಹಿಂದೆ ಕುಳಿತಿದ್ದ ಕವಿತಾ ಬಲ ಭಾಗಕ್ಕೆ ಬಿದ್ದರು. ಹಿಂದಿ ನಿಂದ ಬರುತ್ತಿದ್ದ ಟಿಪ್ಪರ್ ಲಾರಿ ತಕ್ಷಣವೇ ಅವರ ಮೇಲೆ ಹರಿದ ಪರಿಣಾಮ ತಲೆ ಸಂಪೂರ್ಣ ನಜ್ಜುಗುಜ್ಜಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದರು.

ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ ಬನ್ನೂರು ಠಾಣೆ ಪೊಲೀ ಸರು ಮಹಜರು ನಡೆಸಿ ದೇಹವನ್ನು ಬನ್ನೂರು ಸಾರ್ವಜನಿಕ ಆಸ್ಪತ್ರೆ ಶವಾಗಾರ ದಲ್ಲಿ ಮರಣೋತ್ತರ ಪರೀಕ್ಷೆ ನಂತರ ವಾರ ಸುದಾರರಿಗೆ ಒಪ್ಪಿಸಿದರು. ಪ್ರಕರಣ ದಾಖ ಲಿಸಿಕೊಂಡಿರುವ ಪೊಲೀಸರು, ಟಿಪ್ಪರ್ ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಕವಿತಾ ಅವರ ನಿಧನಕ್ಕೆ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದಾರೆ. ಕಳೆದ ಶುಕ್ರವಾರ ಮತ್ತು ಶನಿ ವಾರ ಸಂಸ್ಥೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಚ್ಚುಕಟ್ಟಾಗಿ ಫೋಟೋ ಗ್ರಫಿ ಕೆಲಸವನ್ನು ನಿರ್ವಹಿಸಿದ್ದ ಕವಿತಾ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.ಶಾರದದೇವಿನಗರ, ಟಿ.ಕೆ.ಲೇಔಟ್ ಹಾಗೂ ಇತ್ಯಾದಿ ಪ್ರದೇಶಗಳಿಗೆ ಈ ನೀರು ಸರಬರಾಜು ಆಗಲಿದೆ ಎಂದು ಅವರು ತಿಳಿಸಿದ್ದಾರೆ.

 

 

 

 

Translate »