ನಾಳೆ `ಏರ್ ಶೋ’
ಮೈಸೂರು

ನಾಳೆ `ಏರ್ ಶೋ’

October 1, 2019

ಮೈಸೂರು,ಸೆ.30 (ಎಸ್‍ಪಿಎನ್)- ನಾಡಹಬ್ಬ ದಸರಾ ಸಂಭ್ರಮ ಕಣ್ತುಂಬಿಕೊಳ್ಳಲು ಅ.2ರಂದು 11.30ಕ್ಕೆ ಲೋಹದ ಹಕ್ಕಿಗಳ ಕಲರವ ಹಾಗೂ ಯೋಧರ ಸಾಹಸ ದಸರಾ ಸಡಗರ-ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲಿದೆ.ಈಗಾಗಲೇ ಮೈಸೂರಿನ ಹಲವು ವೇದಿಕೆಗ ಳಲ್ಲಿ ಸಾಂಸ್ಕøತಿಕ ಚಟುವಟಿಕೆ ಗಳು, ನಗರದ ಸೌಂದರ್ಯ ಹೆಚ್ಚಿಸಿರುವ ದೀಪಾಲಂಕಾರದಿಂದ ಮೈಸೂರು ನಳನಳಿಸುತ್ತಿದೆ.

ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನ ದಲ್ಲಿ ಜಿಲ್ಲಾಡಳಿತ ಹಾಗೂ ಭಾರ ತೀಯ ವಾಯುಪಡೆ ಸಹಯೋಗ ದಲ್ಲಿ ಸಾಹಸಮಯ `ಏರ್ ಶೋ’ ಆಯೋಜಿಸಲಾಗಿದ್ದು, ಇದರ ಸದುಪಯೋಗವನ್ನು ಪ್ರವಾಸಿ ಗರು ಪಡೆದುಕೊಳ್ಳುವಂತೆ ದಸರಾ ವಿಶೇಷಾಧಿಕಾರಿ ಅಭಿ ರಾಂ ಜಿ.ಶಂಕರ್ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದ್ದಾರೆ. ಐಎಂಎಫ್ ಯೋಧರು ಸುಮಾರು 40 ನಿಮಿಷ ಏರ್ ಶೋ ನಡೆಸಲಿದ್ದಾರೆ. ಪೆಟಲ್ ರಾಪಿಂಗ್, ಸ್ಲಿಥರಿಂಗ್ ಹಾಗೂ ಸ್ಕೈಡೈವಿಂಗ್ ಸಾಹಸಗಳನ್ನು ಮಾಡಲಿದ್ದಾರೆ. ಇದಕ್ಕೆ ಈಗಾಗಲೇ ರಿಹರ್ಸಲ್ ಕೂಡ ಮಾಡಿಕೊಳ್ಳಲಾಗುತ್ತಿದೆ. ವಾಯುಪಡೆ ಸಿಬ್ಬಂದಿಯ ಒಪ್ಪಿಗೆ ಮೇರೆಗೆ ಸ್ಥಳಕ್ಕೆ ಆಂಬ್ಯುಲೆನ್ಸ್ ಹಾಗೂ ಅಗ್ನಿಶಾಮಕ ದಳ ಸೇವೆಯನ್ನು ಸನ್ನದ್ಧ ಸ್ಥಿತಿಯಲ್ಲಿಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು. ಏರ್ ಶೋ ನಡೆಯುವ ಸ್ಥಳದಲ್ಲಿ ಧೂಳು ಏಳದ್ದಂತೆ, ನೀರು ಪ್ರೋಕ್ಷಣೆ ಮಾಡಿಸಲಾಗುತ್ತಿದೆ. ಇಲ್ಲಿಗೆ ಬರುವ ಜನ ಸಾಮಾನ್ಯರು ತಿಂಡಿ-ತಿನಿಸುಗಳನ್ನು ತರಬಾರದು ಹಾಗೂ ಏರ್ ಶೋ ಕಮಾಂಡರ್‍ಗಳು ಬಂದಾಗ ಅಲ್ಲಿ ಮಕ್ಕಳು ಫೋಟೋ ತೆಗೆದುಕೊಳ್ಳಲು ಮುಂದಾಗಬಾರದು. ಇಂತಹ ಘಟನೆಗಳನ್ನು ತಡೆಯಲು ಪೊಲೀಸ್ ಸಿಬ್ಬಂದಿಗೆ ಕಟ್ಟಿನಿಟ್ಟಿನ ಸೂಚನೆ ನೀಡಲಾಗಿದೆ.

ಕಾರ್ಯಕ್ರಮ ನಿಗಧಿತ ಸಮಯಕ್ಕೆ ಆರಂಭವಾಗುವುದರಿಂದ ಸಾರ್ವಜನಿಕರು ಮುಂಚಿತವಾಗಿ ಬರಬೇಕು. ಯುವಕರಲ್ಲಿ ಸ್ಫೂರ್ತಿ ತುಂಬಲು ಏರ್ ಶೋ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಉಪಯುಕ್ತತೆ ಬಗ್ಗೆ ತಿಳಿದುಕೊಳ್ಳುವಂತೆ ಪ್ರವಾಸಿಗರು ಮತ್ತು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಆದರೆ, ಏರ್ ಶೋ ತಾಲೀಮ, ಹೆಲಿಕಾಪ್ಟರ್ ನಿಲುಗಡೆ, ಏರ್ ಶೋ ತಂಡದ ಸದಸ್ಯರ ಮಾಹಿತಿ ಹಾಗೂ ವಾಯುಪಡೆಯ ಮಾಹಿತಿಗಳನ್ನು ನೀಡುವುದಿಲ್ಲ ಎಂದು ಪತ್ರಿಕಾಗೋಷ್ಠಿಗೂ ಮುನ್ನವೇ ಜಿಲ್ಲಾಧಿಕಾರಿಗಳು ಪತ್ರಕರ್ತರಿಗೆ ಮಾಹಿತಿ ರವಾನಿಸಿದರು.ಗೋಷ್ಠಿಯಲ್ಲಿ ನಿವೃತ್ತ ವಿಂಗ್ ಕಮಾಂಡರ್ ಶ್ರೀ ಕುಮಾರ್, ಸ್ಕ್ವಾಡ್ರನ್ ಲೀಡರ್ ನಿತೀಶ್, ಮುಡಾ ಆಯುಕ್ತ ಪಿ.ಎಸ್.ಕಾಂತರಾಜ್, ಡಿಸಿಪಿ ಮುತ್ತರಾಜು ಉಪಸ್ಥಿತರಿದ್ದರು.

Translate »