ಕೊಡವರನ್ನು ಎಸ್ಟಿಗೆ ಸೇರಿಸಲು ಸರ್ವ ಪ್ರಯತ್ನ
ಮೈಸೂರು

ಕೊಡವರನ್ನು ಎಸ್ಟಿಗೆ ಸೇರಿಸಲು ಸರ್ವ ಪ್ರಯತ್ನ

December 21, 2019

ಮೈಸೂರು,ಡಿ.20(ಆರ್‍ಕೆ)-ಕೊಡವರ ಕುಲಶಾಸ್ತ್ರ ಅಧ್ಯಯನ ನಡೆಸಿ, ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸರ್ವ ಪ್ರಯತ್ನ ಮಾಡುವುದಾಗಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕೊಡವ ನ್ಯಾಷನಲ್ ಕೌನ್ಸಿಲ್(ಸಿಎನ್‍ಸಿ) ಪದಾಧಿ ಕಾರಿಗಳಿಗೆ ಭರವಸೆ ನೀಡಿದರು.

ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ನೇತೃತ್ವದಲ್ಲಿ ಸಂಘಟನೆಯ ಪದಾಧಿಕಾರಿ ಗಳು ಶುಕ್ರವಾರ ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿರುವ ಕಚೇರಿಯಲ್ಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಭೇಟಿ ಮಾಡಿ, ಕೊಡವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎನ್.ಯು. ನಾಚಪ್ಪ, ಕೊಡವ ಸಂಸ್ಕøತಿ, ಆಚಾರ-ವಿಚಾರ, ಭಾಷೆ, ಆಹಾರ ಪದ್ಧತಿ, ಆರಾಧನೆ, ಶವ ಸಂಸ್ಕಾರ, ಉಡುಪು ಹಾಗೂ ಜೀವನ ಶೈಲಿ ಸಂಪೂರ್ಣವಾಗಿ ಬುಡಕಟ್ಟು ಸಮು ದಾಯದಂತೆಯೇ ಇದೆ. ನಮ್ಮ ಅಸ್ತಿತ್ವದ ಬಗ್ಗೆ ಆತಂಕವಿರುವು ದರಿಂದ ನಮಗೆ ಭದ್ರತೆ ಬೇಕಾಗಿದೆ ಎಂದರು. ನಮ್ಮ ಸಮು ದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಅದಕ್ಕೆ ಪೂರಕವಾಗಿ ಸಮರ್ಪಕವಾದ ಕುಲ ಶಾಸ್ತ್ರ ಅಧ್ಯಯನ ನಡೆಸಬೇಕು ಎಂದರು.

ನಾಚಪ್ಪ ಅವರ ಮನವಿ ಆಲಿಸಿದ ಸಂಸದರು, ಕುಲಶಾಸ್ತ್ರ ಅಧ್ಯಯನ ನಡೆಸಿ ವರದಿ ಪಡೆದು ಕೊಡವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸರ್ವ ಪ್ರಯತ್ನ ನಡೆಸ ಲಾಗುವುದು ಎಂದು ಭರವಸೆ ನೀಡಿದರು.

ಸಿಎನ್‍ಸಿಯ ಪುಲ್ಲಂಗಡ ನಟೇಶ್, ಪುಲ್ಲೇರ ಕಾಳಪ್ಪ, ಕೆ.ಸುರೇಶ್, ಚಂಬಂಡ ಜಗತ್, ಬೆಪ್ಪಡಿಯಂಡ ಬಿದ್ದಪ್ಪ, ಮಂಡೆ ಪಂಡ ಮನೋಜ್, ಪಟ್ಟಮಾಡ ಕುಶಾ, ಅಪ್ಪನೆರಮಂಡ ಮನೋಜ್, ಮೈಸೂರು ಪಾಲಿಕೆ ಸದಸ್ಯ ಮಲ್ಲೇಟ್ಟಿರ ಸುಬ್ಬಯ್ಯ, ಮಚ್ಚಮಾಡ ಗಪ್ಪಣ್ಣ, ಇನ್ನಿತರರಿದ್ದರು.

Translate »