ಪ್ರಧಾನಿ ಮೋದಿ ಮೇಲೆ ಉಗ್ರರ ದಾಳಿ ಸಾಧ್ಯತೆ: ಗುಪ್ತಚರ ಇಲಾಖೆ ಎಚ್ಚರಿಕೆ
ಮೈಸೂರು

ಪ್ರಧಾನಿ ಮೋದಿ ಮೇಲೆ ಉಗ್ರರ ದಾಳಿ ಸಾಧ್ಯತೆ: ಗುಪ್ತಚರ ಇಲಾಖೆ ಎಚ್ಚರಿಕೆ

December 21, 2019

ನವದೆಹಲಿ,ಡಿ.20-ರಾಜಧಾನಿಯಲ್ಲಿ ಡಿ.22ರಂದು ಬಿಜೆಪಿಯ ಬೃಹತ್ ಸಮಾ ವೇಶದ ವೇಳೆ ಪಾಕಿಸ್ತಾನ ಮೂಲದ ಉಗ್ರರ ಗುಂಪುಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಸಂಸ್ಥೆಗಳು ವರದಿ ನೀಡಿವೆ.

ದೆಹಲಿಯ ಅನಧಿಕೃತ ಕಾಲೋನಿಗಳನ್ನು ಅಧಿಕೃತಗೊಳಿಸುವ ಕೇಂದ್ರ ಸರ್ಕಾರದ ಉದ್ದೇಶದ ಕುರಿತು ಬಿಜೆಪಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಡಿ. 22ರಂದು ಬೃಹತ್ ಸಮಾವೇಶ ಆಯೋಜಿಸಿದೆ. ಈ ವೇಳೆ ಉಗ್ರರ ಗುಂಪುಗಳು ಮೋದಿ ಅವ ರನ್ನು ಗುರಿಯನ್ನಾಗಿರಿಸಿಕೊಂಡು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಸಂಸ್ಥೆಗಳು ಎಸ್‍ಪಿಜಿ ಹಾಗೂ ದೆಹಲಿ ಪೆÇಲೀಸರಿಗೆ ಎಚ್ಚರಿಕೆ ನೀಡಿವೆ.

ಭಯೋತ್ಪಾದನಾ ಸಂಘಟನೆ ಜೈಶ್ ಎ ಮೊಹಮ್ಮದ್‍ನ ಉಗ್ರರು ಭಾರತದಲ್ಲಿ ಸೇರಿಕೊಳ್ಳುತ್ತಿದ್ದು, ರಾಮಲೀಲಾ ಮೈದಾನ ದಲ್ಲಿ ಭಾರಿ ಸಂಖ್ಯೆಯ ಜನರು ಮತ್ತು ಮಾಧ್ಯಮ ಪ್ರತಿನಿಧಿ ಗಳು ಸೇರಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ವಿರುದ್ಧ ದಾಳಿ ನಡೆಸಲು ಸಿದ್ಧತೆ ನಡೆಸಿವೆ ಎಂಬ ಮಾಹಿತಿ ಹಂಚಿಕೊಂಡಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, ಎನ್‍ಡಿಎ ಸರ್ಕಾರದ ವಿವಿಧ ಸಚಿವರು ಮತ್ತು ಮುಖ್ಯಮಂತ್ರಿ ಗಳು ಈ ಸಮಾವೇಶದಲ್ಲಿ ಭಾಗವಹಿಸಲಿ ದ್ದಾರೆ. ರಾಮಲೀಲಾ ಮೈದಾನದಲ್ಲಿ ಭದ್ರತೆ ವ್ಯವಸ್ಥೆಯನ್ನು ನೋಡಿಕೊಳ್ಳುವ ಜವಾ ಬ್ದಾರಿ ದೆಹಲಿ ಪೆÇಲೀಸರು ಮತ್ತು ಎಸ್‍ಪಿಜಿ ಎರಡರ ಮೇಲೆಯೂ ಇದೆ.

‘ಸೆಕ್ಯುರಿಟಿ ಅರೇಂಜ್‍ಮೆಂಟ್ ಇನ್ ಎ ಡೆಮಾಕ್ರಟಿಕ್ ಪಾಲಿಟಿ’ ಶೀರ್ಷಿಕೆಯ ಪುಸ್ತಕ ದಲ್ಲಿ ಉಲ್ಲೇಖಿಸಿರುವಂತೆ ಬಿಗಿಭದ್ರತೆಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಗುಪ್ತಚರ ಸಂಸ್ಥೆ ಹೇಳಿದೆ. ಇತ್ತೀ ಚಿನ ಪೌರತ್ವ ತಿದ್ದುಪಡಿ ಕಾಯ್ದೆ, ಅಯೋಧ್ಯಾ ತೀರ್ಪು, 370ನೇ ವಿಧಿ ರದ್ದತಿ ಮತ್ತು ಭಾರತೀಯ ವಾಯು ಪಡೆಯು ಪಾಕಿಸ್ತಾನದ ಮಿಲಿಟರಿಯೇತರ ನೆಲೆಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಿದ ಘಟನೆಗಳು ಪ್ರಧಾನಿಮೋದಿ ಅವರಿಗೆ ಜೀವ ಬೆದರಿಕೆ ಒಡ್ಡಲು ಹೊಸ ಅಂಶಗಳಾಗಿವೆ. ಪಾಕಿ ಸ್ತಾನ ಮೂಲದ ಉಗ್ರ ಸಂಘಟನೆಗಳು ದಾಳಿ ನಡೆಸುವ ಸಾಧ್ಯತೆಗಳನ್ನು ಅಲ್ಲಗಳೆಯು ವಂತಿಲ್ಲ ಎಂದು ಎಚ್ಚರಿಕೆ ನೀಡಿವೆ.

Translate »