ರೈತ ಚಳವಳಿಗಾರರ ವಿರುದ್ಧ ಭ್ರಷ್ಟಾಚಾರ ಆರೋಪ; ಪಾರದರ್ಶಕ ನೀತಿಗೆ ಚಿಂತನೆ
ಮೈಸೂರು

ರೈತ ಚಳವಳಿಗಾರರ ವಿರುದ್ಧ ಭ್ರಷ್ಟಾಚಾರ ಆರೋಪ; ಪಾರದರ್ಶಕ ನೀತಿಗೆ ಚಿಂತನೆ

February 6, 2020

ರೈತ ಮುಖಂಡರ ಆಸ್ತಿ ಘೋಷಣೆ ನೀತಿ ಅಳವಡಿಕೆ: ಬಡಗಲಪುರ ನಾಗೇಂದ್ರ
ಮೈಸೂರು, ಫೆ.5(ಎಸ್‍ಪಿಎನ್)-ಇತ್ತೀಚೆಗೆ ರೈತ ಚಳವಳಿಗಾರರ ಮೇಲೆ ಭ್ರಷ್ಟಾ ಚಾರ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ. ಈ ಆರೋಪದಿಂದ ಮುಕ್ತರಾಗಲು ಹಾಗೂ ಸಂಘಟನೆಯಲ್ಲಿ ಪಾರದರ್ಶಕ ನೀತಿ ಅಳವಡಿಸಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲ ಪುರ ನಾಗೇಂದ್ರ ಅಭಿಪ್ರಾಯಪಟ್ಟರು.

ಈ ಬಗ್ಗೆ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ರೈತ ಸಂಘಟನೆ ಯಲ್ಲಿ ಶಿಸ್ತು ಮೂಡಿಸುವ ದೃಷ್ಟಿಯಿಂದÀ ರಾಜ್ಯ ಮತ್ತು ಜಿಲ್ಲಾ ಹಂತದ ರೈತ ಮುಖಂಡರು ಇನ್ಮುಂದೆ ತಮ್ಮ ಆಸ್ತಿ ಘೋಷಣೆ ಮಾಡು ವುದು ಕಡ್ಡಾಯಗೊಳಿಸುವ ನೀತಿ ಅಳವಡಿಸಿ ಕೊಳ್ಳಲಾಗುವುದು ಎಂದರು.

ಇತ್ತೀಚೆಗೆ ಗಾಂಧಿ ಟೋಪಿಯಂತೆ, ಹಸಿರು ಟವಲ್ ಸಹ ದುರುಪಯೋಗವಾಗುತ್ತಿದೆ. ಪ್ರಸ್ತುತ ರೈತ ಚಳವಳಿಯಲ್ಲಿ ಸ್ವಜನ ಪಕ್ಷಪಾತ, ಸ್ವಾರ್ಥಕ್ಕೆ ಸಂಘಟನೆ ಬಲಿಕೊಡುವುದನ್ನು ತಪ್ಪಿಸಲು ಈ ಮಾರ್ಚ್ ಒಳಗೆ ಸಂಘದ ಹೊಸ ಬೈಲಾ ರಚಿಸಿ ಜಾರಿಗೆ ತರಲಾಗುವುದು. ಇದನ್ನು ಪ್ರತಿಯೊಬ್ಬ ರೈತ ಮುಖಂ ಡರು, ಪದಾಧಿಕಾರಿಗಳು ಪಾಲಿಸುವ ಬಗ್ಗೆ ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ರೈತ ಸಮ್ಮಿಲನ ಕಾರ್ಯಕ್ರಮದಲ್ಲಿ ಘೋಷಣೆ ಮಾಡಲಾಗಿದೆ ಎಂದು ವಿವರಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಅವೈಜ್ಞಾನಿಕ ನೀತಿಯಿಂದ ರೈತರು ತಮ್ಮ ಜಮೀನುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ರೈತರ ಮಕ್ಕಳು ಉದ್ಯೋಗ ವಿಲ್ಲದೆ ಗ್ರಾಮ ತೊರೆಯುತ್ತಿದ್ದಾರೆ. ಎಲ್ಲಾ ಸಮಸ್ಯೆಗಳನ್ನು ಅವಲೋಕಿಸಿಯೇ ರೈತ ಸಂಘಟನೆಗೆ ಹೊಸ ರೂಪ ನೀಡಲು ಮುಂದಾಗಿರುವುದಾಗಿ ಎಂದು ಹೇಳಿದರು.

Translate »