ಮೈಸೂರು, ಫೆ.5(ಪಿಎಂ)-ಮೈಸೂರಿನ `ಆರಭಿ’ ಸಾಂಸ್ಕøತಿಕ ಟ್ರಸ್ಟ್‍ನ ಪ್ರಥಮ ವಾರ್ಷಿಕೋತ್ಸವ ಹಾಗೂ `ಕರೋಕೆ’ ಗೀತ ಗಾಯನ ಕಾರ್ಯಕ್ರಮ ಫೆ.6ರಂದು ಜೆಎಲ್‍ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ನಡೆಯಲಿದೆ ಎಂದು ಟ್ರಸ್ಟ್‍ನ ಸಲಹಾ ಸಮಿತಿ ಅಧ್ಯಕ್ಷ ಪಿ.ಮಹೇಶ್ ಕುಮಾರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಂದು ಸಂಜೆ 5.30ಕ್ಕೆ `ವರುಷದ ಹರುಷ’ ಶೀರ್ಷಿಕೆಯ ಕಾರ್ಯಕ್ರಮದಲ್ಲಿ ಚಿತ್ರ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅತಿಥಿಯಾಗಿರುವರು. ಟ್ರಸ್ಟ್ ಅಧ್ಯಕ್ಷ ಡಾ.ಎನ್.ಕುಲದೀಪ್ ಅಧ್ಯಕ್ಷತೆ ವಹಿಸುವರು. ನಿನಾದ್ ಮ್ಯೂಸಿಕಲ್ ಟ್ರಸ್ಟ್ ಅಧ್ಯಕ್ಷರಾದ ಸಂಗೀತ ನಿರ್ದೇಶಕ ಎ.ಎಸ್.ಪ್ರಸನ್ನಕುಮಾರ್ ಅವರನ್ನು ಸನ್ಮಾನಿಸಲಾಗುವುದು. ಕರೋಕೆ ಗೀತ ಗಾಯನದಲ್ಲಿ ಟ್ರಸ್ಟ್‍ನ 10 ಸದಸ್ಯರು ವಿವಿಧ ಚಿತ್ರಗೀತೆಗಳನ್ನು ಸಾದರಪಡಿಸಲಿ ದ್ದಾರೆ. ಕಾರ್ಯಕ್ರಮಕ್ಕೆ ಪ್ರವೇಶ ಉಚಿತ ಎಂದು ಮಹೇಶ್ ಕುಮಾರ್ ವಿವರಿಸಿದರು. ಸಾಹಿತ್ಯ, ಸಂಗೀತ ಮತ್ತಿತರ ಕಲೆಗಳಲ್ಲಿ ಆಸಕ್ತಿ ಇರುವ, ಸಮಾನ ಮನಸ್ಕರಾದ ವಿವಿಧ ಇಲಾಖೆ ಹಾಗೂ ಕಂಪನಿಗಳ ನೌಕರರು ಸೇರಿ ವೃತ್ತಿಜೀವನದ ಒತ್ತಡ ನಿವಾರಣೆಗಾಗಿ 2019ರಲ್ಲಿ ಈ ಟ್ರಸ್ಟ್ ಆರಂಭಿಸಿದ್ದಾರೆ. ಟ್ರಸ್ಟ್‍ನಿಂದ ಈವರೆಗೆ 4 ಕಾರ್ಯಕ್ರಮ ನಡೆಸಲಾಗಿದೆ. ಮುಂದೆ ಬೃಹತ್ ಸಂಗೀತ ಕಾರ್ಯಕ್ರಮ ಏರ್ಪಡಿಸುವ ಉದ್ದೇಶವಿದೆ ಎಂದರು. ಟ್ರಸ್ಟ್ ಪ್ರಚಾರ ಸಮಿತಿ ಅಧ್ಯಕ್ಷೆ ದಿವ್ಯಾ ಕೇಶವನ್ ಗೋಷ್ಠಿಯಲ್ಲಿದ್ದರು.