ಜೂ.29ರಂದು ಅಂಬಿ ಕಾವ್ಯ ನಮನ ಕವಿಗೋಷ್ಠಿ
ಮೈಸೂರು

ಜೂ.29ರಂದು ಅಂಬಿ ಕಾವ್ಯ ನಮನ ಕವಿಗೋಷ್ಠಿ

June 18, 2019

ಮೈಸೂರು: ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗದ ಸಂಯುಕ್ತ ಆಶ್ರಯದಲ್ಲಿ ಜೂ. 29 ರಂದು ಸಂಜೆ 4.30ಕ್ಕೆ 74ನೇ ವಸಂತಕ್ಕೆ ಕಾಲಿಟ್ಟ ಖ್ಯಾತ ಸಾಹಿತಿ, ಅಂಕಣಕಾರ ಪ್ರೊ. ಕೆ. ಭೈರವಮೂರ್ತಿ ಅವರಿಗೆ ಶುಭ ಹಾರೈಕೆ, ಹಿರಿಯ ಲೇಖಕ ಬಿ.ಪಿ. ಅಶ್ವತ್ಥನಾರಾಯಣ, ಅವರ `ಸಾಹಿತ್ಯ ಸಂಗಮ’, ಪತ್ರಕರ್ತ ರಂಗ ನಾಥ್ ಮೈಸೂರು ಅವರ `ಕನ್ನಡ ಗಾಂಧಿ’ ಕೃತಿಗಳ ಲೋಕಾರ್ಪಣೆ ಹಾಗೂ ದಿ. ಅಂಬ ರೀಶ್ ನೆನಪಿನ `ಅಂಬಿ ಕಾವ್ಯನಮನ’ ಕವಿ ಗೋಷ್ಠಿ ಆಯೋಜಿಸಲಾಗಿದೆ.

ಮೇಲುಕೋಟೆ ವಂಗೀಪುರ ನಂಬೀಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿ ರುವ ಸಮಾರಂಭವನ್ನು ಖ್ಯಾತ ಶಿಶುತಜ್ಞ ಡಾ. ಎಚ್.ಬಿ. ರಾಜಶೇಖರ್ ಉದ್ಘಾಟಿಸು ವರು. ಹೊಯ್ಸಳ ಕನ್ನಡ ಸಂಘದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆಯಲ್ಲಿ ರಂಗನಾಥ್ ಮೈಸೂರು ಅವರ `ಕನ್ನಡಗಾಂಧಿ’ ಕೃತಿಯನ್ನು ಹಿರಿಯ ವಿದ್ವಾಂಸ ಡಾ. ಮಳಲಿ ವಸಂತಕುಮಾರ್ ಹಾಗೂ ಬಿ.ಪಿ. ಅಶ್ವತ್ಥನಾರಾಯಣ ಅವರ `ಸಾಹಿತ್ಯ ಸಂಗಮ’ ಕೃತಿಯನ್ನು ಹಿರಿಯ ಲೇಖಕಿ, ವಿಶ್ರಾಂತ ಪ್ರಾಧ್ಯಾಪಕಿ ಡಾ.ಸಿ.ಜಿ. ಉಷಾದೇವಿ ಲೋಕಾರ್ಪಣೆ ಮಾಡಲಿದ್ದಾರೆ. ದಾಸ್ತಿ ಶಿಕ್ಷಣ ಸಂಸ್ಥೆಗಳ ಡಾ. ಡಿ.ತಿಮ್ಮಯ್ಯ, ಪ್ರೊ. ಕೆ. ಭೈರವಮೂರ್ತಿ ಅವರಿಗೆ ಶುಭ ಹಾರೈಕೆ ನುಡಿಗಳನ್ನು ಆಡಲಿದ್ದು, ಕನ್ನಡ ಹೋರಾಟಗಾರ ದಿವಂಗತ ಕನ್ನಡ ಯೋಧ ನಾ. ನಾಗಲಿಂಗಸ್ವಾಮಿ ಅವರ ಕುರಿತಾದ ವಿಶೇಷ ಉಪನ್ಯಾಸವನ್ನು ಪ್ರೊ. ಕೆ. ಭೈರವಮೂರ್ತಿ ನೀಡಲಿದ್ದಾರೆ.

ಇದೇ ಸಂದರ್ಭದಲ್ಲಿ ಕನ್ನಡ ಯೋಧ ನಾ.ನಾಗಲಿಂಗಸ್ವಾಮಿ ಅವರ ಧರ್ಮಪತ್ನಿ ಶ್ರೀಮತಿ ನಾಗಮ್ಮ, ಸಹವರ್ತಿ ಆಟೋ ಸತ್ಯ, ಯುವ ಕನ್ನಡ ಚಳವಳಿಗಾರ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯ ಅವರಿಂದ್ ಶರ್ಮ, ಕನ್ನಡ ಕ್ರಾಂತಿದಳದ ತೇಜಸ್ವಿಕುಮಾರ್ ಅವರನ್ನು ಸನ್ಮಾನಿಸಲಾಗುವುದು. ನಂತರ ಲೇಖಕಿ ಚಂಪಾವತಿ ಶಿವಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ `ಅಂಬಿ ಕಾವ್ಯನಮನ’ ಕವಿಗೋಷ್ಠಿ ಯನ್ನು ಯುವ ಪತ್ರಕರ್ತೆ ಶಿವರಂಜಿನಿ ಉದ್ಘಾಟಿಸಲಿದ್ದು, ಆಹ್ವಾನಿತ 25 ಕವಿಗಳು ಪಾಲ್ಗೊಳ್ಳಲಿದ್ದು, ಅಂಬರೀಶ್ ಕುರಿತಾದ ಕವಿತೆಗಳನ್ನು ವಾಚಿಸಲಿದ್ದಾರೆ.

ಅಂಬಿ ಕಾವ್ಯ ನಮನ ಕವಿಗೋಷ್ಠಿಗೆ ಆಹ್ವಾನ: ಜೂನ್ 29ರಂದು ನಾದಬ್ರಹ್ಮ ಸಭಾಂಗಣದಲ್ಲಿ ನಡೆಯಲಿರುವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ `ಅಂಬಿ ಕಾವ್ಯನಮನ’ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ. 9845791252 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Translate »