ಪಪ್ಪಾಯ ವೈರಸ್ ರೋಗಕ್ಕೆ ಪರಿಹಾರೋಪಾಯದ ಸಂಶೋಧನೆ
ಮೈಸೂರು

ಪಪ್ಪಾಯ ವೈರಸ್ ರೋಗಕ್ಕೆ ಪರಿಹಾರೋಪಾಯದ ಸಂಶೋಧನೆ

June 18, 2019

ಉಷ್ಣವಲಯದ ಪ್ರಮುಖ ಹಣ್ಣಿನ ಬೆಳೆಗಳಲ್ಲಿ ಪಪ್ಪಾಯ(ಪರಂಗಿ) ಕೂಡ ಒಂದು. ಈ ಹಣ್ಣು ವಿಟಮಿನ್ ‘ಎ’ ಮತ್ತು ‘ಸಿ’ ಗಳ ಆಗರ.ಮಧುಮೇಹಿಗಳೂ ತಿನ್ನಬಹುದಾದ ಅಪರೂಪದ ರುಚಿಕರ ವಾದ, ಆರೋಗ್ಯಪೂರ್ಣವಾದ, ವರ್ಷ ಪೂರ್ತಿ ದೊರೆಯುವ ಹಣ್ಣು.

ಆದರೆ ಈ ಬೆಳೆಗೆ ತಗಲುವ ವೈರಸ್ ರೋಗ ಇದಕ್ಕೆ ಅತ್ಯಂತ ಮಾರಕವಾಗಿದ್ದು, ಬೆಳೆಯನ್ನು ಎಲ್ಲೇ ಬೆಳೆದರೂ ಆಕ್ರಮಣ ಮಾಡಿ ರೈತರಿಗೆ ಅಪಾರ ನಷ್ಟವನ್ನುಂಟು ಮಾಡಬಲ್ಲದಾಗಿದೆ. ಏಫಿಡ್ಸ್ ಹೇನುಗಳೆಂಬ ಕೀಟವು ಗಿಡದಿಂದ ಗಿಡಕ್ಕೆ ಪ್ರದೇಶದಿಂದ ಪ್ರದೇಶಕ್ಕೆ ಅತಿ ಶೀಘ್ರವಾಗಿ ಹರಡಬಲ್ಲ ಈ ರೋಗವು ಒಮ್ಮೆ ಬಂದರೆ ತಡೆಗಟ್ಟು ವುದು ಸಾಧ್ಯವೇ ಇಲ್ಲ. ಹಾಗೆ ಹೇಳುವು ದಾದರೆ ಯಾವ ವೈರಸ್ ರೋಗಕ್ಕೂ ಪ್ರಪಂ ಚದ ಯಾವ ದೇಶದಲ್ಲೂ ನಿಯಂತ್ರಣೋ ಪಾಯವಿಲ್ಲ. ಕೆಲವೇ ಬೆಳೆಗಳಲ್ಲಿ ವೈರಸ್ ರೋಗ ತಡೆದುಕೊಳ್ಳಬಲ್ಲ ವೈರಸ್ ನಿರೋಧಕ ತಳಿಗಳಿವೆಯಾದರೂ ಆ ಸೌಲಭ್ಯ ಪಪ್ಪಾಯ ಬೆಳೆಗೆ ಇಲ್ಲ.

ಈ ಕಾರಣದಿಂದಾಗಿ ಪಪ್ಪಾಯ ಬೆಳೆ ಯನ್ನು ಬೆಳೆಯುವ ಉತ್ಸಾಹ ಕ್ರಮೇಣ ಕಡಿಮೆಯಾಗುತ್ತಿದೆ. ಆದರೆ ಬೇಡಿಕೆ ಹೆಚ್ಚಾ ಗುತ್ತಿದೆ. ಇಂತಹ ಸಂದರ್ಭದಲ್ಲಿ ಮೈಸೂ ರಿನ ಡಾ.ವಸಂತಕುಮಾರ್‍ರವರು ಈ ಪಪ್ಪಾಯ ವೈರಸ್ ರೋಗಕ್ಕೆ ತಮ್ಮ ದೀರ್ಘ ಸಂಶೋಧನೆಯಿಂದ ಪರಿಹಾರೋಪಾಯ ವನ್ನು ಕಂಡು ಹಿಡಿದಿದ್ದಾರೆ. ಇದು ಈಗಾ ಗಲೇ ದೇಶದಾದ್ಯಂತ ರೈತರ ಹೊಲದಲ್ಲಿ ಪರಿಣಾಮಕಾರಿಯಾಗಿ ನಿಯಂತ್ರಿಸಿ, ಇದರ ಸಾಮಥ್ರ್ಯದ ಪರೀಕ್ಷೆಯಾಗಿರುವುದು ರೈತರಿಗೆ ಸಂತಸದ ಸಂಗತಿಯಾಗಿದೆ.

‘ಪವರ್ ಪ್ಲಸ್’ ಎಂಬ ದ್ರವರೂಪದ ಸಸ್ಯಾ ಧಾರಿತ ಉತ್ಪನ್ನವಾದ ಇದು ಗಿಡಗಳಿಗೆ ವೈರಸ್ ಅಲ್ಲದೆ ಇತರ ಕೀಟ, ರೋಗಗಳನ್ನೂ ನಿರೋ ಧಿಸುವ ಶಕ್ತಿಯನ್ನು ನೀಡಬಲ್ಲುದಾಗಿದೆ.

ಬೆಳೆಯ ವಿವಿಧ ಹಂತಗಳಲ್ಲಿ ನಿಯ ಮಿತವಾಗಿ ಇದನ್ನು ಸಿಂಪಡಿಸುವುದರಿಂದ ರೋಗಮುಕ್ತ ಬೆಳೆಯನ್ನು ಬೆಳೆಯ ಬಹು ದಾಗಿದೆ. ರೋಗ ಬಂದ ಗಿಡಗಳೂ (ಈ ಔಷಧೋಪಚಾರದಿಂದ) ಸಹ ರೋಗ ದಿಂದ ಚೇತರಿಸಿಕೊಂಡು ಉತ್ತಮ ಗುಣ ಮಟ್ಟದ ಇಳುವರಿ ನೀಡುವುದನ್ನು ಮೈಸೂ ರಿನ ಭೂದೇವಿ ಫಾರಂನಲ್ಲಿ ಪ್ರಾತ್ಯಕ್ಷಿಕೆ ಮಾಡಲಾಗಿದೆ.ಈ ಪ್ರಾತ್ಯಕ್ಷಿಕೆಯಲ್ಲಿ ರೋಗ ಬಂದ ಗಿಡಗಳ ಸಾಲು ಮತ್ತು ‘ಪವರ್ ಪ್ಲಸ್’ ಉಪಚಾರದಿಂದ ರೋಗಮುಕ್ತ ವಾದ, ಇಳುವರಿ ನೀಡುತ್ತಿರುವ ಗಿಡಗಳ ಅನೇಕ ಸಾಲುಗಳು ಈ ತಂತ್ರಜ್ಞಾನದ ಸಕಾರಾತ್ಮಕ ಫಲಿತಾಂಶಕ್ಕೆ ಸಾಕ್ಷಿಯಾಗಿವೆ. ಅಷ್ಟೇ ಅಲ್ಲದೆ 2 ವರ್ಷ ಕಳೆದರೂ ರೋಗ ಮುಕ್ತವಾಗಿ ಇನ್ನೂ ಉತ್ತಮ ಇಳುವರಿ ನೀಡುತ್ತಿರುವ ತಾಕು ಸಹ ಜೊತೆಗೇ ಇದೆ. ಈ ಪ್ರಾತ್ಯ ಕ್ಷಿಕೆಯನ್ನು ತೋಟಗಾರಿಕೆ ವಿಶ್ವವಿದ್ಯಾನಿಲ ಯದ ಕುಲಪತಿಗಳಾದಿಯಾಗಿ ಎಲ್ಲ ಸಂಬಂಧ ಪಟ್ಟ ವಿಜ್ಞಾನಿಗಳ ತಂಡ, ಹಾಗೂ ಭಾರ ತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ತಂಡ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಗಳಾದ ಪ್ರೊ.ರಂಗಪ್ಪ, ಪ್ರೊ. ಮೇವಾ ಸಿಂಗ್, ಪ್ರೊ.ಕೆ.ಎ.ರವೀಶ್, ಪ್ರೊ. ಶೇಖರ ಶೆಟ್ಟಿ, ಪ್ರೊ.ನಾಗೇಂದ್ರನ್‍ರವರೂ ಸಹ ಪರಿಶೀಲಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿ ದ್ದಾರೆ.

ಅಷ್ಟೇ ಅಲ್ಲದೆ ಹೆಸರಾಂತ ಕೃಷಿ ವಿಜ್ಞಾನಿಗಳಾದ ಪದ್ಮಭೂಷಣ ಪ್ರೊ.ಎಂ. ಮಹದೇವಪ್ಪನವರು ಭೇಟಿ ನೀಡಿ ಇದೊಂದು ಅದ್ಭುತವಾದ ಸಂಶೋಧನೆ, ಕೃಷಿ ಕ್ಷೇತ್ರಕ್ಕೆ ಒಂದು ಮಹತ್ತರ ಕೊಡುಗೆ ಎಂದು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರತಿದಿವಸವೂ ಈ ಪ್ರಾತ್ಯಕ್ಷಿಕೆ ವೀಕ್ಷಿಸಲು ರೈತರು, ವಿಜ್ಞಾನಿಗಳು, ಸಾರ್ವಜನಿಕರೂ ಭೇಟಿ ನೀಡುತ್ತಿದ್ದಾರೆ. (ಡಾ. ಕೆ.ವಸಂತ್‍ಕುಮಾರ್, ನಿರ್ದೇಶಕರು, ತಾಂತ್ರಿಕ, ಗ್ರೀನ್ ಲೈಫ್ ಸೈನ್ಸ್ ಟೆಕ್ನಾಲಜೀಸ್, ದೂ. 0821-2416923 ಅಥವಾ ಮೊಬೈಲ್ : 9845347884)

Translate »