ಸಮಾಜದ ಅನಿಷ್ಟ ಆಚರಣೆಗಳ ವಿರುದ್ಧ ಅಂಬಿಗರ ಚೌಡಯ್ಯ ನಿಷ್ಠುರವಾದಿಯಾಗಿದ್ದರು: ಮೈಸೂರಲ್ಲಿ ಅಂಬಿಗರ ಚೌಡಯ್ಯರ ಜಯಂತಿ
ಮೈಸೂರು

ಸಮಾಜದ ಅನಿಷ್ಟ ಆಚರಣೆಗಳ ವಿರುದ್ಧ ಅಂಬಿಗರ ಚೌಡಯ್ಯ ನಿಷ್ಠುರವಾದಿಯಾಗಿದ್ದರು: ಮೈಸೂರಲ್ಲಿ ಅಂಬಿಗರ ಚೌಡಯ್ಯರ ಜಯಂತಿ

January 22, 2020

ಮೈಸೂರು, ಜ.21(ಪಿಎಂ)- ಅಸಮಾ ನತೆ, ಅಸ್ಪøಶ್ಯತೆ, ಮೌಢ್ಯ ಹಾಗೂ ಕಂದಾ ಚಾರ ಖಂಡಿಸಿ ಸಮಾಜ ಸುಧಾರಣೆಗೆ ಮಹತ್ವದ ಕೊಡುಗೆ ನೀಡಿದ ಶರಣರ ಪೈಕಿ ಅಂಬಿಗರ ಚೌಡಯ್ಯ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದವರು. ಅವರು ಸಮಾಜ ಅನಿಷ್ಟಗಳನ್ನು ನಿಷ್ಠುರವಾಗಿ ಕಠಿಣ ಶಬ್ದಗಳಲ್ಲಿ ಟೀಕಿಸಿದ್ದಾರೆ ಎಂದು ಚಿಂತಕ ಬಿ.ಕುಮಾರಸ್ವಾಮಿ ತಿಳಿಸಿದರು.

ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡ ಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂ ತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯರ ಜಯಂತಿಯಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

ನಾಡಿನಲ್ಲಿ ಉನ್ನತ ಬದಲಾವಣೆಯ ಪರ್ವ ಕಾಲ 12ನೇ ಶತಮಾನದಲ್ಲಿ ಉದಯಿ ಸಿತು. ಜಾತಿ ವ್ಯವಸ್ಥೆ, ಮೇಲು-ಕೀಳು ಹಾಗೂ ಅಸಮಾನತೆ ತಾಂಡವವಾಡು ತ್ತಿದ್ದ ಸಮಾಜವನ್ನು ಸರಿ ದಾರಿಗೆ ತರಲು ಶರಣರು ಅಪಾರವಾಗಿ ಶ್ರಮಿಸಿದರು. ಶರಣರ ಪೈಕಿ ಅಂಬಿಗರ ಚೌಡಯ್ಯ ತಮ್ಮ ನಿಷ್ಠುರ ನುಡಿಗಳಿಂದ ವಿಶಿಷ್ಟ ಸ್ಥಾನ ಅಲಂ ಕರಿಸಿದ್ದರು. ಸಮಾಜದ ಅನಿಷ್ಟಗಳನ್ನು ಅವರು ಖಂಡಿಸುತ್ತಿದ್ದ ರೀತಿ ಅತೀ ಕಠೋರ ವಾಗಿರುತ್ತಿತ್ತು ಎಂದು ತಿಳಿಸಿದರು.

ವಿರೂಪಾಕ್ಷ ಹಾಗೂ ಪಂಪಾದೇವಿ ದಂಪತಿ ಪುತ್ರರಾದ ಅಂಬಿಗರ ಚೌಡಯ್ಯ ಜಾತಿ ವ್ಯವಸ್ಥೆ ಪ್ರಬಲವಾಗಿದ್ದನ್ನು ಕಂಡು ಉಗ್ರವಾಗಿ ಖಂಡಿಸಿದ್ದರು. ವಚನ ಅಂದರೆ ಪ್ರತಿಜ್ಞೆ ಹಾಗೂ ನುಡಿದಂತೆ ನಡೆಯು ವುದು ಎನ್ನುವುದಾಗಿದೆ. ಹೀಗಾಗಿ ವಚನ ಕಾರರು ನುಡಿದಂತೆ ನಡೆದ ಹಿನ್ನೆಲೆಯಲ್ಲಿ ಅವರ ವಿಚಾರಧಾರೆ ವಚನಗಳಾಗಿ ಮೂಡಿ ಬಂದಿವೆ. ಅಲ್ಲಮಪ್ರಭುಗಳ ಅಧ್ಯಕ್ಷತೆ ಯಲ್ಲಿ ನಡೆಯುತ್ತಿದ್ದ ಅನುಭವ ಮಂಟ ಪದ ಕಲಾಪ ಅಂಬಿಗರ ಚೌಡಯ್ಯರಿಗೆ ಅತ್ಯಂತ ಪ್ರಿಯವಾದ ಸ್ಥಳವಾಗಿತ್ತು. ಇಲ್ಲಿ 350ಕ್ಕೂ ಹೆಚ್ಚು ಮಂದಿ ವಚನಕಾರರು ಸೇರುತ್ತಿದ್ದರು ಎಂದರು.

ಅಂಬಿಗರ ಚೌಡಯ್ಯ ಯಾರ ಮುಲಾ ಜಿಗೂ ಒಳಗಾಗದೇ ಸಮಾಜದ ಅನಿಷ್ಟ ಪದ್ಧತಿಗಳ ವಿರುದ್ಧ ದನಿ ಎತ್ತುತ್ತಿದ್ದರು. ಸಂಸ್ಕøತ ಭಾಷೆ ವಿರಾಜಮಾನವಾಗಿದ್ದ ಕಾಲ ದಲ್ಲಿ ವಚನಕಾರರು ಕನ್ನಡ ಭಾಷೆಗೆ ಸ್ಥಾನ ಮಾನ ತಂದುಕೊಟ್ಟರು. ಶರಣರು ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಅನುಭವ ಮಂಟಪದಲ್ಲಿ ಶೋಷಿತ ಸಮುದಾಯ ಗಳನ್ನು ಮುಖ್ಯ ವಾಹಿನಿಗೆ ತರಬೇಕು ಹಾಗೂ ಅಸಮಾನತೆಯನ್ನು ತೊಡೆದು ಹಾಕ ಬೇಕೆಂದು ಘೋಷಣೆ ಮಾಡಲಾಗಿತ್ತು ಎಂದು ತಿಳಿಸಿದರು.

ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತ ನಾಡಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ, ಅಸಮಾನತೆ ಹಾಗೂ ಕಂದಾಚಾರ ಗಳಿಂದ ಜಡ್ಡುಗಟ್ಟಿದ ಸಮಾಜಕ್ಕೆ ಅಂಬಿ ಗರ ಚೌಡಯ್ಯ ಮಾತುಗಳು ಚಿಕಿತ್ಸಕವಾಗಿ ದ್ದವು. ಅವರ ವಿಚಾರಧಾರೆ ಅರಿತು ಸಮ ಸಮಾಜ ನಿರ್ಮಿಸುವ ಕರ್ತವ್ಯ ನಮ್ಮದಾ ಗಿದೆ ಎಂದರು. ಜಯಂತಿ ಉದ್ಘಾಟಿಸಿದ ಮೈಸೂರು ಉಪವಿಭಾಗಾಧಿಕಾರಿ ವೆಂಕಟ ರಾಜು ಅಂಬಿಗರ ಚೌಡಯ್ಯರ ಚಿತ್ರಪಟಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅರ್ಧಕ್ಕರ್ಧ ಆಸನಗಳು ಖಾಲಿ: ನಿಗದಿತ ಸಮಯಕ್ಕಿಂತ ಒಂದು ತಾಸು ತಡವಾಗಿ ಕಾರ್ಯಕ್ರಮ ಆರಂಭಿಸಲಾಯಿತು. ಜೊತೆಗೆ ಕಲಾಮಂದಿರದ ಅರ್ಧಕ್ಕರ್ಧ ಆಸನಗಳು ಖಾಲಿಯಾಗಿದ್ದವು. ಸಭಿಕರ ಕೊರತೆ ಯಿಂದ ಭಣಗುಡುವ ಸನ್ನಿವೇಶದಲ್ಲಿ ಮಹ ನೀಯರ ಬಹುತೇಕ ಜಯಂತಿ ಕಾರ್ಯ ಕ್ರಮಗಳು ನಡೆಯುತ್ತಿರುವುದು ಇತ್ತೀಚೆಗೆ ಸಾಮಾನ್ಯ ಸಂಗತಿ ಎನ್ನುವಂತಾಗಿದೆ. ಪಾಲಿಕೆ ಸದಸ್ಯರಾದ ರಂಗಸ್ವಾಮಿ, ಸತೀಶ್, ಎಂ.ಎಸ್.ಶೋಭಾ, ಮುಜರಾಯಿ ಇಲಾಖೆ ತಹಸೀಲ್ದಾರ್ ಯತಿರಾಜ್ ಮತ್ತಿತರರು ಹಾಜರಿದ್ದರು.

Translate »