ಮೈಸೂರು, ಆ.28(ಆರ್‍ಕೆಬಿ)- ಮೈಸೂರಿನ ಇರ್ವಿನ್ ರಸ್ತೆ ಜನತಾ ಬಜಾರ್ ಹಿಂಭಾಗ 6ನೇ ಮುಖ್ಯ ರಸ್ತೆಯ ಖಾಸಗಿ ನಿವೇಶನವೊಂದು ಮೂತ್ರಾಲಯವಾಗಿ ಮಾರ್ಪಟ್ಟಿದ್ದು, ಇದರಿಂದ ಈ ಭಾಗದ ನಿವಾಸಿಗಳು, ಅಂಗಡಿಗಳವರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಈ ಪ್ರದೇಶದ ಜನರು ದೂರಿದ್ದಾರೆ.
ಜನತಾ ಬಜಾರ್ ಹಿಂಭಾಗ, ಖಾಸಗಿ ಆಸ್ಪತ್ರೆಗಳೂ ಇವೆ. ಸುತ್ತಲೂ ವಾಸದ ಮನೆ ಗಳಿವೆ. ಆದರೆ ಸಾರ್ವಜನಿಕರು ಜನತಾ ಬಜಾರ್ ಹಿಂಭಾಗದ ಖಾಲಿ ನಿವೇಶನ ವನ್ನು ಮೂತ್ರಾಲಯವಾಗಿ ಬಳಕೆ ಮಾಡಿ ಕೊಂಡಿದ್ದು, ಅಲ್ಲದೆ ಇತರೆಡೆಗಳಿಂದ ಅಂಗಡಿ, ಮನೆಗಳ ಕಸ ತಂದು ಇಲ್ಲಿಯೇ ಹಾಕಲಾಗುತ್ತಿದೆ. ಇದರಿಂದ ಈ ಪ್ರದೇ ಶದ ವಾತಾವರಣ ಮಲಿನವಾಗುತ್ತಿದೆ. ಗಬ್ಬು ನಾರುತ್ತಿದೆ. ಮಳೆಯಿಂದ ಈ ಜಾಗ ಮತ್ತಷ್ಟು ಮಲಿನವಾಗಿದ್ದು, ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಇದರಿಂದಾಗಿ ಸುತ್ತ ಲಿನ ನಿವಾಸಿಗಳಿಗೆ ಡೆಂಗ್ಯು, ಚಿಕುನ್ ಗುನ್ಯಾ ಭಯದಿಂದ ಕಾಲ ಕಳೆಯುತ್ತಿರುವುದಾಗಿ ಸುಂದರ್ ಎಂಬವರು ದೂರಿದ್ದಾರೆ.
ಈಗಾಗಲೇ ಹಲವು ಬಾರಿ ಮಹಾ ನಗರಪಾಲಿಕೆಗೆ ದೂರು ನೀಡಿದ್ದು, ಅವರು ಆಗಾಗ್ಗೆ ಬಂದು ಸ್ವಚ್ಛಗೊಳಿಸಿ ಹೋದರೂ ಸಾರ್ವಜನಿಕರು ಮತ್ತೆರಡೇ ದಿನದಲ್ಲಿ ಇಲ್ಲಿ ಗಲೀಜು ಮಾಡುವುದು ನಡೆಯುತ್ತಿದೆ. ಸನಿಹದಲ್ಲಿಯೆ ಎಸ್‍ಬಿಐ ಹಿಂಭಾಗದ ಗಲ್ಲಿಯಲ್ಲಿ ನಗರಪಾಲಿಕೆಯಿಂದ ಹಣ ಕೊಟ್ಟು ಬಳಸುವ ಶೌಚಾಲಯವಿದ್ದರೂ ಸಾರ್ವಜನಿಕರು ಇದನ್ನೇ ಶೌಚಾಲಯ ವನ್ನಾಗಿ ಬಳಸುತ್ತಿದ್ದಾರೆ. ಆದ್ದರಿಂದ ಇಲ್ಲಿ ಕಾಂಪೌಂಡ್ ಹಾಕಿಸಿ, ಹೇಸಿಗೆ ಮಾಡು ವವರ ವಿರುದ್ಧ ಕ್ರಮ ಕೈಗೊಳ್ಳುವಂತಾಗ ಬೇಕು ಎಂದು ಮನವಿ ಮಾಡಿದ್ದಾರೆ.