ನಕಲಿ ದಾಖಲೆ ಸೃಷ್ಟಿಸಿ ಖಾತೆ ಬದಲಾವಣೆ ಆರೋಪ: ಪ್ರತಿಭಟನೆ
ಮೈಸೂರು

ನಕಲಿ ದಾಖಲೆ ಸೃಷ್ಟಿಸಿ ಖಾತೆ ಬದಲಾವಣೆ ಆರೋಪ: ಪ್ರತಿಭಟನೆ

August 29, 2019

ಮೈಸೂರು,ಆ.28(ಆರ್‍ಕೆಬಿ)-ನಂಜನಗೂಡಿನ ಕತ್ವಾಡಿಪುರ ಗ್ರಾಮದ 97/2ಎ, 97/3 ಜಮೀನಿನ ನಕಲಿ ದಾಖಲಾತಿ ಸೃಷ್ಟಿಸಿ, ಖಾತೆ ಮಾಡಿಸಿಕೊಂಡಿರುವ ಗ್ರಾಮದ ಶ್ರೀನಿವಾಸ ಹಾಗೂ ಇದಕ್ಕೆ ಸಹಕಾರ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ನಕಲಿ ಖಾತೆಯನ್ನು ವಜಾ ಮಾಡಿ ನಮ್ಮ ಆಸ್ತಿ ನಮಗೆ ಸಿಗುವಂತೆ ಮಾಡಿಕೊಡಿ ಎಂದು ಕತ್ವಾಡಿಪುರ ಗ್ರಾಮದ ನಾಗಮ್ಮ, ಗೌರಮ್ಮ ಕುಟುಂಬದವರು ಗ್ರಾಮಸ್ಥರೊಂದಿಗೆ   ಬುಧವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ನಮ್ಮ ಅಸಲಿ ದಾಖಲೆಗಳನ್ನು ಪರಿಶೀಲಿಸಬೇಕು. ನಕಲಿ ದಾಖಲೆಗಳನ್ನು ವಜಾ ಮಾಡ ಬೇಕು. ನಕಲಿ ದಾಖಲೆ ಸೃಷ್ಟಿಗೆ ಸಹಕಾರ ನೀಡಿದ ಕಂದಾಯ ಇನ್ಸ್‍ಪೆಕ್ಟರ್ ಮತ್ತು ಗ್ರಾಮ ಲೆಕ್ಕಿಗನನ್ನು ಕೂಡಲೇ ವಜಾ ಮಾಡಿ, ಕಾನೂನು ಕ್ರಮ ಕೈಗೊಳ್ಳಬೇಕು. ನಕಲಿ ದಾಖಲೆ ಯಿಂದ ಖಾತೆ ಮಾಡಿಕೊಂಡಿರುವ ಶ್ರೀನಿವಾಸ ಮತ್ತು ಕುಟುಂಬದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಕ್ರಮವಾಗಿ ನಿರ್ಮಾಣವಾಗುತ್ತಿರುವ ವೇಬ್ರಿಡ್ಜ್ ಅನ್ನು ತೆರವುಗೊಳಿಸಬೇಕು. ನಮ್ಮ ಜಮೀನು ನಮಗೆ ಉಳಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನಾಗಮ್ಮ, ಗೌರಮ್ಮ ಕುಟುಂಬದವರು, ಗ್ರಾಮಸ್ಥರು ಭಾಗವಹಿಸಿದ್ದರು

Translate »