ಡಿ.29ರಂದು ಅನನ್ಯ ಮಹೇಶ್ ಭರತನಾಟ್ಯ ರಂಗಪ್ರವೇಶ
ಮೈಸೂರು

ಡಿ.29ರಂದು ಅನನ್ಯ ಮಹೇಶ್ ಭರತನಾಟ್ಯ ರಂಗಪ್ರವೇಶ

December 27, 2019

ಮೈಸೂರು, ಡಿ.26(ಪಿಎಂ)-ಶ್ರೀ ನಿಮಿಷಾಂಬಾ ನೃತ್ಯ ಶಾಲೆಯ ಭರತನಾಟ್ಯ ಕಲಾ ವಿದೆ ಅನನ್ಯ ಮಹೇಶ್ ಅವರ ರಂಗಪ್ರವೇಶ ಕಾರ್ಯಕ್ರಮ ವನ್ನು ಡಿ.29ರಂದು ಸಂಜೆ 6ಕ್ಕೆ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಲಾಗಿದೆ ಎಂದು ನೃತ್ಯ ಶಾಲೆಯ ಸಂಸ್ಥಾಪಕರೂ ಆದ `ಆಪ್ತಮಿತ್ರ’ ಚಲನಚಿತ್ರ ಖ್ಯಾತಿಯ ವಿದ್ವಾನ್ ಶ್ರೀಧರ್ ಜೈನ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮ ದಲ್ಲಿ ಅತಿಥಿಗಳಾಗಿ ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ. ರಾಮದಾಸ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು. ಬಹುಮುಖ ಪ್ರತಿಭೆಯಾದ ಅನನ್ಯ ಅವರು ತಮ್ಮ ಐದನೇ ವಯಸ್ಸಿನಲ್ಲಿ ನೃತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಇದೀಗ ಭರತನಾಟ್ಯದಲ್ಲಿ ಸಾಧನೆ ಹಾದಿ ಕ್ರಮಿಸುತ್ತಿದ್ದಾರೆ ಎಂದು ತಿಳಿಸಿದರು. ಅನನ್ಯ ತಂದೆ ಎಂ.ಎನ್.ಮಹೇಶ್, ತಾಯಿ ಲತಾ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »