ನಾಳೆ ಮೈಸೂರಿನ ಜೆಎಸ್‍ಎಸ್ ವಿಜ್ಞಾನ, ತಾಂತ್ರಿಕ ವಿವಿ ದ್ವಿತೀಯ ಘಟಿಕೋತ್ಸವ
ಮೈಸೂರು

ನಾಳೆ ಮೈಸೂರಿನ ಜೆಎಸ್‍ಎಸ್ ವಿಜ್ಞಾನ, ತಾಂತ್ರಿಕ ವಿವಿ ದ್ವಿತೀಯ ಘಟಿಕೋತ್ಸವ

December 27, 2019

ಮೈಸೂರು, ಡಿ.26(ಆರ್‍ಕೆ)- ಡಿಸೆಂಬರ್ 28ರಂದು ಮೈಸೂರಿನ ಜೆಎಸ್‍ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾ ನಿಲಯದ ದ್ವಿತೀಯ ಘಟಿಕೋತ್ಸವ ನಡೆಯಲಿದೆ.

ಮಾನಸ ಗಂಗೋತ್ರಿಯ ಎಸ್‍ಜೆಸಿಇ ಕ್ಯಾಂಪಸ್‍ನಲ್ಲಿ ಶನಿವಾರ ಸಂಜೆ 4 ಗಂಟೆಗೆ ನಡೆಯಲಿರುವ ಕಾರ್ಯ ಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಾಜ್‍ಕುಮಾರ್ ಖತ್ರಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಘಟಿಕೋತ್ಸವ ಭಾಷಣ ಮಾಡುವರು.

ಸುತ್ತೂರು ಮಠಾಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ ಮಠ ಹಾಗೂ ತಾಂತ್ರಿಕ ಶಿಕ್ಷಣ ವಿಭಾಗದ ಸಲಹೆಗಾರ ಪ್ರೊ.ಎಂ. ಹೆಚ್.ಧನಂಜಯ ಭಾಗವಹಿಸುವರು.

ಘಟಿಕೋತ್ಸವ ಕುರಿತು ಮೈಸೂರಿನ ವಿನೋಬ ರಸ್ತೆಯಲ್ಲಿ ರುವ ದಿ ಕೋರಂ ಹೋಟೆಲಿನಲ್ಲಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಲ್.ಜವಹರ್ ನೇಸನ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕುಲಸಚಿವ ಪ್ರೊ.ಕೆ.ಎಸ್. ಲೋಕೇಶ್, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಕೆ.ಎನ್. ಉದಯಕುಮಾರ್ ಹಾಗೂ ಎಸ್‍ಜಿಸಿಇ ಪ್ರಾಂಶುಪಾಲ ಪ್ರೊ.ನಾಗಭೂಷಣ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

2018-19ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ 167 ಎಂ.ಟೆಕ್ ವಿದ್ಯಾರ್ಥಿಗಳು, 15 ಎಂ.ಎಸ್ಸಿ (ಕೆಮಿಸ್ಟ್ರಿ), 68 ಎಂಸಿಎ, 107 ಎಂಬಿಎ, 37 ಎಂಬಿಎ ಕಾರ್ಪೋರೇಟ್ ಫೈನಾನ್ಸ್, 21 ಎಂಬಿಎ ರೀಟೇಲ್ ಮ್ಯಾನೇಜ್‍ಮೆಂಟ್ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು.

ಒಟ್ಟು 22 ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಮಾಡು ತ್ತಿದ್ದು, ಆ ಪೈಕಿ 17 ರ್ಯಾಂಕ್ ವಿಜೇತರು ಹಾಗೂ ದತ್ತಿ ಬಹುಮಾನ ಗಳಿಸಿರುವ ವಿದ್ಯಾರ್ಥಿಗಳಿಗೆ ಪದಕಗಳನ್ನು ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುವುದು.

ಆಟೋಮೋಟಿವ್ ಎಲೆಕ್ಟ್ರಾನಿಕ್ಸ್‍ನಲ್ಲಿ ಟಿ.ಎಲ್.ಪೂಜಾ, ಬಿಎಂಎಸ್‍ಐಐನಲ್ಲಿ ಬಿ.ರಮ್ಯ, ಸಿವಿಲ್ ಇಂಜಿನಿಯ ರಿಂಗ್‍ನಲ್ಲಿ, ಕೆ.ಎನ್.ನಮ್ರತಾ, ಡೇಟಾ ಸೈನ್ಸ್‍ನಲ್ಲಿ ವಿ. ಪ್ರಜ್ವಲ್, ಇಎಸ್‍ಎಂನಲ್ಲಿ ಎಂಎಸ್ ಅನಂತಕೃಷ್ಣ, ಎನ್‍ವೈ ರಾನ್‍ಮೆಂಟಲ್ ಇಂಜಿನಿಯರಿಂಗ್‍ನಲ್ಲಿ ಪಿ.ಮಲ್ಲಿ ಕಾರ್ಜುನ, ಡಿ.ಎಸ್.ನಾಗರಾಜು, ಇಂಡಸ್ಟ್ರಿಯಲ್ ಎಲೆ ಕ್ಟ್ರಾನಿಕ್ಸ್‍ನಲ್ಲಿ ಕೆ.ಪಿ.ತೇಜಸ್ವಿ ಸೇರಿದಂತೆ ವಿವಿಧ ವಿಭಾಗ ಗಳಲ್ಲಿ ಹಲವರು ರ್ಯಾಂಕ್ ಗಳಿಸಿದ್ದಾರೆ. ಆರ್.ಗಣೇಶ್ ನಾಯಕ್, ಎಲ್.ಪ್ರಶಾಂತ್, ಪಿ.ಮಲ್ಲಿಕಾರ್ಜುನ್, ಟಿ.ಎಸ್. ರೋಹಿಣಿ ಹಾಗೂ ಪ್ರತಿಕಾ ಶೆಟ್ಟಿ ದತ್ತಿ ಪದಕ ಪಡೆದಿದ್ದಾರೆ. ವಿಶ್ವ ವಿದ್ಯಾನಿಲಯವು ತಾಂತ್ರಿಕ ಶಿಕ್ಷಣ ಕೋರ್ಸುಗಳನ್ನು ಪ್ರಸ್ತುತ ಸಮಾಜದ ಕೊರತೆ ನೀಗಿಸುವ ನಿಟ್ಟಿನಲ್ಲಿ ನೀಡು ತ್ತಿದ್ದು, ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡುತ್ತಿದೆ ಎಂದು ಪ್ರೊ.ಎಲ್.ಜವಹರ್ ನೇಸನ್ ತಿಳಿಸಿದರು.

Translate »