ರಾಜಕೀಯ ಲಾಭಕ್ಕಾಗಿ ಸಿಎಎ ವಿಚಾರದಲ್ಲಿ ಗೊಂದಲ-ಗಲಭೆ ಸೃಷ್ಟಿಸುತ್ತಿರುವ ವಿಪಕ್ಷಗಳು
ಮೈಸೂರು

ರಾಜಕೀಯ ಲಾಭಕ್ಕಾಗಿ ಸಿಎಎ ವಿಚಾರದಲ್ಲಿ ಗೊಂದಲ-ಗಲಭೆ ಸೃಷ್ಟಿಸುತ್ತಿರುವ ವಿಪಕ್ಷಗಳು

December 27, 2019

ಮೈಸೂರು, ಡಿ.26(ಪಿಎಂ)- `ಪೌರತ್ವ ತಿದ್ದುಪಡಿ ಕಾಯ್ದೆ’ ವಿಚಾರ ವನ್ನು ವಿಪಕ್ಷಗಳು ರಾಜ ಕೀಯ ಲಾಭಕ್ಕಾಗಿ ಬಳಸಿ ಕೊಳ್ಳುತ್ತಿವೆ ಎಂದು ಆರೋಪಿಸಿರುವ ಮಾಜಿ ಸಚಿವ ಎ.ಹೆಚ್.ವಿಶ್ವ ನಾಥ್, ಅಧಿಕಾರ ಕಳೆದು ಕೊಂಡ ಕಾರಣಕ್ಕೆ ಈ ವಿಚಾರದಲ್ಲಿ ರಾಜ ಕೀಯ ಮಾಡದೇ ಸಹಿಷ್ಣುತೆ ಕಾಯ್ದು ಕೊಳ್ಳಬೇಕು ಎಂದು ಕಾಂಗ್ರೆಸ್, ಜೆಡಿಎಸ್ ನಾಯಕರನ್ನು ಛೇಡಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಆಫ್ಘಾನಿಸ್ತಾನ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಿಂದ ಅಕ್ರಮವಾಗಿ ದೇಶಕ್ಕೆ ಬಂದವರಿಗೆ ಮಾತ್ರವೇ ಕಾಯ್ದೆ ಯಿಂದ ತೊಂದರೆಯಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಇದು ದೇಶದ ಹಿತ ದೃಷ್ಟಿಯಿಂದ ಜಾರಿಗೊಳಿಸಿದ ಕಾಯ್ದೆ. ಜನತಂತ್ರ ವ್ಯವಸ್ಥೆಯಲ್ಲಿ ಅಧಿಕಾರ ಕಳೆದು ಕೊಳ್ಳುವುದು ಹಾಗೂ ಪಡೆದುಕೊಳ್ಳುವುದು ಸಾಮಾನ್ಯ ಸಂಗತಿ. ಹೀಗಾಗಿ ಅಧಿಕಾರ ಕಳೆದುಕೊಂಡವರು ಈ ವಿಚಾರದಲ್ಲಿ ರಾಜಕೀಯ ಮಾಡದೇ ಸಹಿಷ್ಣುತೆ ಕಾಯ್ದು ಕೊಳ್ಳಬೇಕು ಎಂದು ಛೇಡಿಸಿದರು.

`ರಾಷ್ಟ್ರದ ಐಕ್ಯತೆ ಹಾಗೂ ಭದ್ರತೆ’ ಎಂಬುದು ಕಾಂಗ್ರೆಸ್‍ನ ಘೋಷ ವಾಕ್ಯ. ಈ ಘೋಷ ವಾಕ್ಯವನ್ನು ಯಾವಾಗಲೂ ನೆಹರು ಹಾಗೂ ಇಂದಿರಾಗಾಂಧಿ ಹೇಳುತ್ತಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಇಂದು ತನ್ನ ಘೋಷ ವಾಕ್ಯವನ್ನೇ ಮರೆತಂತಿದೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಸಂಬಂಧ ಜನತೆಯನ್ನು ಉದ್ರೇಕಗೊಳಿಸಿ ರಾಜಕೀಯ ಲಾಭ ಪಡೆಯುವ ಷಡ್ಯಂತ್ರ ನಡೆಯುತ್ತಿದೆ. ಈ ಕಾಯ್ದೆ ಹೊಸದೇನಲ್ಲ. 1955ರಲ್ಲೇ ಈ ಕಾಯ್ದೆ ಜಾರಿಗೊಂಡಿದ್ದು, ನೆಹರು ಹಾಗೂ ಇಂದಿರಾ ಗಾಂಧಿ ಯವರು ಮಾಡಿದ ಕಾನೂನಿನ ಮುಂದು ವರೆದ ಭಾಗವಷ್ಟೇ ಎಂದರು.

ಇಂತಹ ಮಹತ್ವದ ಕಾಯ್ದೆ ಜಾರಿಯಾದ ಸಂದರ್ಭದಲ್ಲಿ ಜನತೆಗೆ ತಿಳುವಳಿಕೆ ಕೊಡು ವುದು ನಮ್ಮ ಜವಾಬ್ದಾರಿ. ಆದರೆ ಇದಕ್ಕೆ ಬದಲು ಜನತೆಯನ್ನು ಉದ್ರೇಕಗೊಳಿಸಿ ಅಶಾಂತಿ ಸೃಷ್ಟಿಸುವ ಕೆಲಸವಾಗುತ್ತಿದೆ. ಜನತೆಯನ್ನು ಎತ್ತಿಕಟ್ಟಿ ರಾಷ್ಟ್ರವನ್ನು ಬಲ ಹೀನ ಮಾಡಲಾಗುತ್ತಿದೆ. ಜೊತೆಗೆ ಮುಸ್ಲಿಂ ಸಮುದಾಯವನ್ನು ಆತಂಕಕ್ಕೆ ಒಳಗಾಗು ವಂತೆ ಮಾಡಲಾಗಿದೆ. ಮುಸ್ಲಿಂ ಸಮುದಾಯ ದಲ್ಲಿರುವ ಚಿಂತಕರು, ವಿದ್ಯಾವಂತರು ಕಾಯ್ದೆ ನೈಜತೆ ಬಗ್ಗೆ ತಿಳುವಳಿಕೆ ಮೂಡಿಸುವ ಮಹತ್ವದ ಜವಾಬ್ದಾರಿಯನ್ನು ಇಂದು ನಿಭಾಯಿಸಬೇಕಿದೆ ಎಂದು ತಿಳಿಸಿದರು.

ಜಾತಿ ಹಾಗೂ ಧರ್ಮದ ಆಧಾರದಲ್ಲಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ನೀಡುತ್ತ ಬಂದಿದೆ. ಹಲವು ಕಾನೂನು ರೂಪಿಸಲಾ ಗಿದೆ. ಹೀಗಾಗಿ ಈ ವಿಚಾರದಲ್ಲಿ ಜಾತಿ ಇಲ್ಲವೇ ಧರ್ಮದ ಹೆಸರು ಬಳಕೆ ಮಾಡಿಕೊಂಡು ವಿನಾಕಾರಣ ಗೊಂದಲ ಸೃಷ್ಟಿಸಬಾರದು. ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧ ಲೋಕ ಸಭೆ ಹಾಗೂ ರಾಜ್ಯಸಭೆಯಲ್ಲಿ ಸುದೀರ್ಘ ಚರ್ಚೆಯಾಗಿದೆ. ಆದರೆ ಕಾಂಗ್ರೆಸ್ ನಾಯಕ ರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಈ ಚರ್ಚೆಯಲ್ಲಿ ಪಾಲ್ಗೊಳ್ಳಲಿಲ್ಲ. 1979ರಲ್ಲಿ ಸೋನಿಯಾ ಗಾಂಧಿಯವರಿಗೆ ದೇಶದ ಪೌರತ್ವ ಸಿಕ್ಕಿತು ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಶಿವಣ್ಣ, ಬಿಜೆಪಿ ಮುಖಂಡ ಹೆಚ್.ವಿ.ರಾಜೀವ್ ಮತ್ತಿತರರು ಸುದ್ದಿಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.

Translate »