ಇಂದಿನಿಂದ ಮೈಸೂರು-ಕಲಬುರ್ಗಿ ವಿಮಾನ ಹಾರಾಟ
ಮೈಸೂರು

ಇಂದಿನಿಂದ ಮೈಸೂರು-ಕಲಬುರ್ಗಿ ವಿಮಾನ ಹಾರಾಟ

December 27, 2019

ಮೈಸೂರು, ಡಿ.26(ಆರ್‍ಕೆ)-ಮೈಸೂರು-ಕಲಬುರ್ಗಿ ನಡುವೆ ಹೈದ ರಾಬಾದ್ ಮಾರ್ಗವಾಗಿ ವಿಮಾನ ಹಾರಾಟ ನಾಳೆ (ಡಿ.27)ಯಿಂದ ಆರಂಭ ವಾಗಲಿದೆ. ಶುಕ್ರವಾರ ಬೆಳಿಗ್ಗೆ 8.30 ಗಂಟೆಗೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಏರ್ ಇಂಡಿ ಯಾದ ಅಲಯನ್ಸ್ ಏರ್-72 ವಿಮಾನ ಮೊದಲ ಹಾರಾಟ ಆರಂಭಿಸಲಿದೆ ಎಂದು ವಿಮಾನ ನಿಲ್ದಾಣದ ನಿರ್ದೇ ಶಕ ಆರ್.ಮಂಜುನಾಥ ತಿಳಿಸಿದ್ದಾರೆ.

ಮೊದಲ ಟ್ರಿಪ್‍ನಲ್ಲಿ ಹೈದರಾಬಾದ್‍ಗೆ 25 ಹಾಗೂ ಕಲಬುರ್ಗಿ ನಗರಕ್ಕೆ 41 ಪ್ರಯಾಣಿಕರು ಟಿಕೆಟ್ ಬುಕ್ ಮಾಡಿ ದ್ದಾರೆ. ವಾಪಸ್ ಮೈಸೂರಿಗೆ ಬರುವ ವಿಮಾನಕ್ಕೂ ಉತ್ತಮ ಪ್ರತಿಕ್ರಿಯೆ ಇದೆ ಎಂದು ಏರ್ ಇಂಡಿಯಾದವರು ಮಾಹಿತಿ ನೀಡಿದ್ದಾರೆಂದು ಮಂಜುನಾಥ ತಿಳಿಸಿದ್ದಾರೆ.

Translate »