ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಶೃಂಗೇರಿಗೆ ಭೇಟಿ
ಮೈಸೂರು

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಶೃಂಗೇರಿಗೆ ಭೇಟಿ

December 27, 2019

ಚಿಕ್ಕಮಗಳೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಶರದ್ ಅರ ವಿಂದ್ ಬೋಬ್ಡೆ ಅವರು ಗುರು ವಾರ ಶೃಂಗೇ ರಿಗೆ ಭೇಟಿ ನೀಡಿ ಶಾರ ದಾಂಬೆಯ ದರ್ಶನ ಪಡೆದರು.

ಗುರುವಾರ ಬೆಳಿಗ್ಗೆ ದೆಹಲಿಯಿಂದ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ ಅವರು, ಉಡುಪಿ ಪೇಜಾ ವರ ಮಠಕ್ಕೆ ಭೇಟಿ ನೀಡಿ ಅಲ್ಲಿಂದ ಮಧ್ಯಾಹ್ನ 3 ಗಂಟೆ ವೇಳೆಗೆ ಶೃಂಗೇ ರಿಗೆ ಆಗಮಿಸಿದರು. ಶಾರದಾಂಬೆಯ ದರ್ಶನ ಪಡೆದ ನ್ಯಾಯಮೂರ್ತಿಗಳು, ಗುರುವಾರ ಶೃಂಗೇರಿ ಮಠದಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಶುಕ್ರವಾರ ಬೆಳಗ್ಗೆ 8:30ಕ್ಕೆ ಮಂಗಳೂರಿಗೆ ಹೋಗಿ ಅಲ್ಲಿಂದ 12 ಗಂಟೆಗೆ ದೆಹಲಿಗೆ ತೆರಳಲಿದ್ದಾರೆ.

ನ್ಯಾಯಮೂರ್ತಿಗಳ ಜೊತೆ, ಬಾಂಬೆ ಹೈಕೋರ್ಟಿನ ನ್ಯಾಯಮೂರ್ತಿ ಶ್ರೀಕೃಷ್ಣ, ಕರ್ನಾಟಕ ಹೈಕೋರ್ಟಿನ ರಿಜಿಸ್ಟ್ರಾರ್, ಚಿಕ್ಕಮಗಳೂರು ಹಾಗೂ ಶೃಂಗೇರಿ ನ್ಯಾಯಾಲಯದ ನ್ಯಾಯಮೂರ್ತಿ ಗಳು ಜೊತೆಗಿದ್ದರು. ನ್ಯಾಯಮೂರ್ತಿ ಗಳನ್ನು ಮಠದ ಆಡಳಿತಾಧಿಕಾರಿ ಗೌರಿ ಶಂಕರ್, ಡಿಸಿ ಬಗಾದಿ ಗೌತಮ್, ಎಸ್ಪಿ ಹರೀಶ್ ಪಾಂಡೆ ಸ್ವಾಗತಿಸಿದರು.

Translate »