174.58 ಕೋಟಿ ಗುರಿಯಲ್ಲಿ 110 ಕೋಟಿ ಆಸ್ತಿ ತೆರಿಗೆ ಸಂಗ್ರಹ
ಮೈಸೂರು

174.58 ಕೋಟಿ ಗುರಿಯಲ್ಲಿ 110 ಕೋಟಿ ಆಸ್ತಿ ತೆರಿಗೆ ಸಂಗ್ರಹ

December 27, 2019

ಮೈಸೂರು,ಡಿ.26(ಆರ್‍ಕೆ)-ಆರ್ಥಿಕ ಸಂಪ ನ್ಮೂಲ ಕ್ರೋಢೀಕರಿಸುವ ಸಲುವಾಗಿ ಬಾಕಿ ಉಳಿದಿರುವ ಆಸ್ತಿ ತೆರಿಗೆ ವಸೂಲಿ ಮಾಡಲು ಮೈಸೂರು ಮಹಾನಗರ ಪಾಲಿಕೆಯು ಕ್ಷಿಪ್ರ ಕಾರ್ಯಾಚರಣೆ ಆರಂಭಿಸಿದೆ.

ಮೈಸೂರು ನಗರ ನಿವಾಸಿಗಳಿಗೆ ಕುಡಿ ಯುವ ನೀರು, ರಸ್ತೆ, ಚರಂಡಿ, ಒಳಚರಂಡಿ, ಸ್ವಚ್ಛತೆ, ಸಾರ್ವಜನಿಕ ಶೌಚಾಲಯ, ಉದ್ಯಾನವನ, ವಿದ್ಯುತ್, ಬೀದಿದೀಪದಂತಹ ಮೂಲ ಸೌಲಭ್ಯ ನಿರ್ವಹಿಸುವ ಜವಾ ಬ್ದಾರಿ ಹೊಂದಿರುವ ಮೈಸೂರು ಮಹಾ ನಗರಪಾಲಿಕೆಯು ಆರ್ಥಿಕವಾಗಿ ಸದೃಢ ವಾಗಲು ಕರ್ನಾಟಕ ಪೌರನಿಗಮಗಳ ಅಧಿ ನಿಯಮ 1976ರ ಕಲಂ 147, ಅನುಸೂಚಿ 111, ನಿಯಮ 27ರಂತೆ ತೆರಿಗೆ ವಸೂಲಾತಿ ಯನ್ನು ಪರಿಣಾಮಕಾರಿಯಾಗಿ ಮಾಡು ವುದು ಅನಿವಾರ್ಯವಾಗಿದೆ. ಅದರಂತೆ ಮೈಸೂರಿನ ಎಲ್ಲಾ 9 ವಲಯ ಕಚೇರಿಗಳಲ್ಲಿ ಪಾಲಿಕೆ ಆಯುಕ್ತರ ಮೇಲುಸ್ತುವಾರಿಯಲ್ಲಿ ಓರ್ವ ನೋಡಲ್ ಅಧಿಕಾರಿಯನ್ನೊಳ ಗೊಂಡಂತೆ 10 ಮಂದಿಯ ತಂಡಗಳನ್ನು ರಚಿಸಲಾಗಿದೆ ಎಂದು ನಗರಪಾಲಿಕೆ ಉಪ ಆಯುಕ್ತ (ಕಂದಾಯ) ಟಿ.ಬಿ. ಕುಮಾರ ನಾಯಕ್ ತಿಳಿಸಿದ್ದಾರೆ.

ತಂಡದಲ್ಲಿ ವಲಯ ಆಯುಕ್ತರು, ಅಭಿ ವೃದ್ಧಿ ಅಧಿಕಾರಿ, ಸಹಾಯಕ ಕಂದಾಯಾ ಧಿಕಾರಿ, ವಾರ್ಡ್ ಕಂದಾಯ ಪರಿಶೀಲಕ, ವಾರ್ಡ್ ಇಂಜಿನಿಯರ್, ವರ್ಕ್ ಇನ್ ಸ್ಪೆಕ್ಟರ್ ಹಾಗೂ ಅಭಯ ತಂಡದ ಸಿಬ್ಬಂದಿ ಗಳಿರುತ್ತಾರೆ. ಅವರು ಬಾಕಿ ಉಳಿಸಿಕೊಂಡಿ ರುವವರ ಮನೆಗಳಿಗೆ ಭೇಟಿ ನೀಡುವರ ಲ್ಲದೆ, ಆಸ್ತಿ ತೆರಿಗೆ ಪಾವತಿಸದಿದ್ದರೆ ಮನೆ ಮುಂದೆ ತಮಟೆ ಬಾರಿಸಿ ಡಂಗೂರ ಕೂಗಿ ಸುವರು ಹಾಗೂ ಪಾವತಿಸದಿದ್ದರೆ ಅಂತಿಮ ವಾಗಿ ನಿಯಮದಂತೆ ಮನೆ ಯನ್ನು ಜಪ್ತಿ ಮಾಡುತ್ತಾರೆ ಎಂದು ಅವರು ತಿಳಿಸಿದರು.

ಮೈಸೂರು ನಗರದಲ್ಲಿ ಪಾಲಿಕೆ ವ್ಯಾಪ್ತಿಗೆ 1,58,156 ಸಾಮಾನ್ಯ ಆಸ್ತಿಗಳು ಹಾಗೂ 25,379 ಕಂದಾಯ ಆಸ್ತಿಗಳು ಸೇರಿ ಒಟ್ಟು 1,83,535 ಸ್ವತ್ತುಗಳು ಬರುತ್ತದೆ. ಸಾಮಾನ್ಯ ಸ್ವತ್ತುಗಳ ಪೈಕಿ 13,972 ನಿವೇ ಶನಗಳು, 1,34,871 ಮನೆಗಳು ಹಾಗೂ 1,34,871 ವಾಣಿಜ್ಯ ಸ್ವತ್ತುಗಳಿವೆ.

ಡಿಸೆಂಬರ್ 21ರವರೆಗೆ 1,60,07,859 ರೂ. ಗುರಿ ಇದ್ದು, ಆ ಪೈಕಿ 105.58 ಕೋಟಿ ರೂ. ತೆರಿಗೆ ವಸೂಲಿ ಮಾಡಲಾಗಿದೆ. 55.19 ಕೋಟಿ ರೂ. ಬಾಕಿ ಬರಬೇಕಾಗಿದೆ. 25,379 ಕಂದಾಯ ಸ್ವತ್ತುಗಳ ಪೈಕಿ 2,613 ನಿವೇ ಶನಗಳು, 22,269 ವಸತಿಗಳು ಹಾಗೂ 497 ವಾಣಿಜ್ಯ ಆಸ್ತಿಗಳಿಂದ 13,98,65, 809 ರೂ. ಬೇಡಿಕೆ ಇದ್ದು, 4,70,85,890 ರೂ. ತೆರಿಗೆ ಸಂಗ್ರಹಿಸಲಾಗಿದ್ದು, 9, 27,29,000 ರೂ. ಬಾಕಿ ಇದೆ. ಮೈಸೂರು ನಗರದಲ್ಲಿ 80 ಸರ್ಕಾರಿ ಕಟ್ಟಡಗಳಿಂದಲೂ ತೆರಿಗೆ ಬರಬೇಕಾಗಿದ್ದು, ವಸೂಲಾತಿಗೆ ಅಧಿಕಾರಿಗಳು ಕ್ರಮ ವಹಿಸಿದ್ದಾರೆ. ಅತೀ ಹೆಚ್ಚಿನ ಪ್ರಮಾ ಣದ ತೆರಿಗೆ ಬಾಕಿ ಉಳಿಸಿಕೊಂಡಿರುವವ ರಿಂದ ವಸೂಲಾತಿ ಕಾರ್ಯಾಚರಣೆ ಆರಂಭಿಸ ಲಾಗಿದೆ. ಕಳೆದ ಮೂರೂವರೆ ವರ್ಷಗಳಿಂದ 82 ಲಕ್ಷ ರೂ. ತೆರಿಗೆ ಬಾಕಿ ಉಳಿಸಿ ಕೊಂಡಿದ್ದ ಬಿ.ಎನ್.ರಸ್ತೆಯ ಮೈಸೂರು ಹೋಟೆಲ್ ಕಾಂಪ್ಲೆಕ್ಸ್ ಕಟ್ಟಡ ಮಾಲೀಕರಿಂದ ಡಿ.23ರಂದು 82 ಲಕ್ಷ ರೂ.ಗಳ ಚೆಕ್ ಅನ್ನು ಪಡೆದುಕೊಳ್ಳಲಾಗಿದೆ ಎಂದು ಕಂದಾಯ ಉಪ ಆಯುಕ್ತರು ತಿಳಿಸಿದ್ದಾರೆ.

Translate »