ಸ್ವಚ್ಛ ಸರ್ವೇಕ್ಷಣೆ ಸಂಬಂಧ ರಾಜಮಾತೆ ಪ್ರಮೋದಾದೇವಿ ಒಡೆಯರ್ ಜೊತೆ ನಗರಪಾಲಿಕೆ ಅಧಿಕಾರಿಗಳ ಮಾತುಕತೆ
ಮೈಸೂರು

ಸ್ವಚ್ಛ ಸರ್ವೇಕ್ಷಣೆ ಸಂಬಂಧ ರಾಜಮಾತೆ ಪ್ರಮೋದಾದೇವಿ ಒಡೆಯರ್ ಜೊತೆ ನಗರಪಾಲಿಕೆ ಅಧಿಕಾರಿಗಳ ಮಾತುಕತೆ

December 27, 2019

ಮೈಸೂರು, ಡಿ.26(ವೈಡಿಎಸ್)-ಮೈಸೂರು ನಗರಪಾಲಿಕೆ ಸ್ವಚ್ಛ ಭಾರತ ಅಭಿಯಾನಕ್ಕೆ ಈಗಾಗಲೇ ಸಿದ್ಧತೆ ಆರಂಭಿ ಸಿದ್ದು, ಈ ಹಿನ್ನೆಲೆಯಲ್ಲಿ ನಗರಪಾಲಿಕೆ ಅಧಿಕಾರಿಗಳು ಗುರುವಾರ ಸಂಜೆ ಮೈಸೂರು ಅರಮನೆಯಲ್ಲಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಭೇಟಿ ಮಾಡಿ, ಸ್ವಚ್ಛ ಸರ್ವೇಕ್ಷಣೆ ರಾಯಭಾರಿಗಳಾಗು ವಂತೆ ಮನವಿ ಮಾಡಿದರು.

ನಂತರ ರಾಜಮಾತೆ ಪ್ರಮೋದಾದೇವಿ ಒಡೆಯರ್ ಮಾತನಾಡಿ, ಕೆಲವೇ ದಿನ ಗಳಲ್ಲಿ ಮೈಸೂರಲ್ಲಿ ಸ್ವಚ್ಛ ಸರ್ವೇಕ್ಷಣೆ ಆರಂಭವಾಗಲಿದ್ದು, ಸಾರ್ವಜನಿಕರ ಸಹ ಭಾಗಿತ್ವ ತುಂಬಾ ಮುಖ್ಯವಾಗಿದೆ. ಮೈಸೂ ರನ್ನು ಮತ್ತೆ ನಂ 1 ಸ್ಥಾನಕ್ಕೆ ಕೊಂಡೊಯ್ಯಲು ಸಹರಿಸಬೇಕು ಎಂದು ಮನವಿ ಮಾಡಿದರು.

ಸ್ವಚ್ಛ ಸರ್ವೇಕ್ಷಣೆ ರಾಯಭಾರಿಯಾಗ ಬೇಕೆಂದು ಕೇಳಿದ್ದು, ನಾನು ಕೆಲವು ದಿನಗಳು ಮೈಸೂರಲ್ಲಿ ಇರುವುದಿಲ್ಲ. ನಾನು ರಾಯ ಭಾರಿ ಆಗಲಿ, ಆಗದಿರಲಿ. ನನಗೆ ಬೇರೆ ಊರುಗಳಿಗಿಂತ ಮೈಸೂರೆಂದರೆ ಹೆಚ್ಚು ಪ್ರೀತಿ. ಹಾಗಾಗಿ ಮೈಸೂರಿನ ಯಾವುದೇ ಕೆಲಸಕ್ಕಾದರೂ ಸಹಕಾರ ನೀಡಲು ಸಿದ್ಧವಿದ್ದೇನೆ ಎಂದು ಹೇಳಿದರು.

ಸ್ವಚ್ಛ ಸರ್ವೇಕ್ಷಣೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಹೇಗಿರಬೇಕು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಗರಪಾಲಿಕೆ ಪ್ರತಿ ವರ್ಷವೂ ಸ್ವಚ್ಛತೆ ಕುರಿತು ಜನರಲ್ಲಿ ಜಾಗೃತಿ ಮೂಡಿ ಸುತ್ತಿದೆ. ಆದರೆ, ಪ್ಲಾಸ್ಟಿಕ್ ಬಳಕೆ ಇನ್ನೂ ಕಡಿಮೆಯಾಗಿಲ್ಲ. ಸಾರ್ವಜನಿಕರು ಪ್ಲಾಸ್ಟಿಕ್ ಬಳಸುವುದನ್ನು ಬಿಟ್ಟು ಪೇಪರ್, ಬಟ್ಟೆ ಬ್ಯಾಗ್‍ಗಳನ್ನು ಉಪಯೋಗಿಸಬೇಕು ಎಂದು ಹೇಳಿದರು.

ಮೇಯರ್ ಪುಷ್ಪಲತಾ ಜಗನ್ನಾಥ್ ಮಾತ ನಾಡಿ, 2020ರ ಜ.4ರಿಂದ ಸ್ವಚ್ಛ ಸರ್ವೇ ಕ್ಷಣೆ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಇಂದು ರಾಜಮಾತೆ ಪ್ರಮೋದಾದೇವಿ ಒಡೆ ಯರ್ ಅವರನ್ನು ಭೇಟಿ ಮಾಡಿ, ಸ್ವಚ್ಛ ಸರ್ವೇಕ್ಷಣೆ ರಾಯಭಾರಿಗಳಾಗುವಂತೆ ಮನವಿ ಮಾಡಿದ್ದೇವೆ. ಅವರು ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಜ.4ರಿಂದ ಸ್ವಚ್ಛ ಸರ್ವೇಕ್ಷಣೆ ಆರಂಭ ವಾಗಲಿದ್ದು, ಈಗಾಗಲೇ ಖ್ಯಾತ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರನ್ನು ಭೇಟಿ ಮಾಡಿ, ಆಹ್ವಾನಿಸಿದ್ದೇವೆ. ಮುಂದಿನ ದಿನ ಗಳಲ್ಲಿ ಪಾಲಿಕೆ ಸದಸ್ಯರೊಂದಿಗೆ ಸಭೆ ನಡೆಸಿ, ಕಳೆದ ಬಾರಿಯಂತೆ ಸಹಕಾರ ನೀಡಬೇ ಕೆಂದು ಮನವಿ ಮಾಡಲಾಗುವುದು. ಕಳೆದ ಬಾರಿ ಸ್ವಚ್ಛತೆಯಲ್ಲಿ 3ನೇ ಸ್ಥಾನದಲ್ಲಿ ಮೈಸೂರನ್ನು ಮೊದಲ ಸ್ಥಾನಕ್ಕೆ ತರಲು ಶ್ರಮಿಸಲಾಗುವುದು ಎಂದು ಹೇಳಿದರು.

ನಗರಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ (ರಮಣಿ), ಆರೋಗ್ಯಾಧಿಕಾರಿ ಗಳಾದ ಡಾ.ನಾಗರಾಜ್, ಡಾ.ಜಯಂತ್, ಪರಿಸರ ಇಂಜಿನಿಯರ್ ಮೈತ್ರಿ ಮತ್ತಿತ ರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Translate »