ಅಮಿತಾಬ್ ಶೋನಲ್ಲಿ ಕೋಟಿ ಗೆದ್ದ ಅಂಗನವಾಡಿ ಕಾರ್ಯಕರ್ತೆ
ಮೈಸೂರು

ಅಮಿತಾಬ್ ಶೋನಲ್ಲಿ ಕೋಟಿ ಗೆದ್ದ ಅಂಗನವಾಡಿ ಕಾರ್ಯಕರ್ತೆ

September 17, 2019

ಮುಂಬೈ,ಸೆ.16-ಟಿವಿಯಲ್ಲಿ ಬಿತ್ತರ ವಾಗುವ ಕೆಲವು ಕಾರ್ಯಕ್ರಮಗಳು ಜನಸಾಮಾನ್ಯರ ಮೇಲೆ ಭಾರಿ ಪ್ರಭಾವ ಬೀರುವ ಕಾರ್ಯಕ್ರಮಗಳಾಗಿವೆ. ಈ ಪೈಕಿ ಕೌನ್ ಬನೇಗಾ ಕರೋಡ್ ಪತಿ (ಕೆಬಿಸಿ) ಗಮನಾರ್ಹ ಕಾರ್ಯಕ್ರಮ ವಾಗಿದ್ದು, ಸಾಮಾನ್ಯರನ್ನು ಕೋಟ್ಯಧಿ ಪತಿಯನ್ನಾಗಿ, ಲಕ್ಷಾಧಿಪತಿಗಳನ್ನಾಗಿಸುವ ಈ ಕಾರ್ಯಕ್ರಮ ಜನಸಾಮಾನ್ಯರಲ್ಲಿ ಭಾರಿ ಕ್ರೇಜ್ ಸೃಷ್ಟಿಸಿದೆ.

ಪ್ರಸ್ತುತ ಪ್ರಸಾರವಾಗುತ್ತಿರುವ 11 ನೇ ಆವೃತ್ತಿಯಲ್ಲಿ ಬಿಹಾರದ ಸನೋಜ್ ರಾಜ್ ಕೋಟಿ ರೂ. ಗೆದ್ದು ಮೊದಲ ಕೋಟ್ಯಾ ಧೀಶ್ವರ ಎಂಬ ದಾಖಲೆ ನಿರ್ಮಿಸಿದ್ದಾರೆ. ಹೊಸದಾಗಿ ಓರ್ವ ಮಹಿಳೆ ಕೋಟಿ ರೂಪಾಯಿ ಗೆದ್ದು ದಾಖಲೆ ಸೃಷ್ಟಿಸಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಬಬಿತಾ ತಾಡೆ ಎಂಬ ಮಹಿಳೆ ಕೆಬಿಸಿಯಲ್ಲಿ ಕೋಟಿ ರೂಪಾಯಿ ಗೆದ್ದುಕೊಂಡಿದ್ದು… ಏಳು ಕೋಟಿ ರೂಪಾಯಿ ಪ್ರಶ್ನೆಯನ್ನು ಎದುರಿಸುತ್ತಿ ದ್ದಾರೆ. ಈ ಕ್ರಮದಲ್ಲಿ ಬಬಿತಾ, ಮಾತನಾಡಿ ನಾನು ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಕೆಲಸ ಮಾಡಿ ತಿಂಗಳಿಗೆ 1,500 ರೂ. ಮಾತ್ರ ಸಂಪಾ ದಿಸುತ್ತೇನೆ. ಶಾಲೆಯಲ್ಲಿ ಮಕ್ಕಳಿಗಾಗಿ ಕಿಚಡಿ ಮಾಡಿಕೊಡುತ್ತೇನೆ. ಇಷ್ಟು ದೊಡ್ಡ ಮೊತ್ತದ ಹಣ ಗಳಿಸುತ್ತೇನೆ ಎಂಬುದನ್ನು ನಾನು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.

ಇಲ್ಲಿ ಗೆದ್ದ ಹಣದಿಂದ ನೀವು ಏನು ಮಾಡ ಬೇಕು ಎಂದು ಬಯಸುತ್ತಿರೀ.. ಎಂಬ ಬಿಗ್ ಬೀ ಪ್ರಶ್ನೆಗೆ .. ಒಂದು ಫೋನ್ ಖರೀದಿಸು ತ್ತೇನೆ. ಪ್ರಸ್ತುತ, ನಮ್ಮ ಮನೆಯಲ್ಲಿರುವುದು ಒಂದು ಫೆÇೀನ್ ಮಾತ್ರ ಹಾಗಾಗಿ, ಮತ್ತೊಂದು ಖರೀದಿಸುತ್ತೇನೆ ಎಂಬ ಆಕೆಯ ಉತ್ತರ ಕೇಳಿದ ಕೇಳಿದ ಅಮಿತಾಬ್ ಬಚ್ಚನ್ ಆಶ್ಚರ್ಯಚಕಿತರಾದರು. ಏಕೆಂದರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹೆಚ್ಚಿನ ಮಂದಿ ಗೆಲುವು ಸಾಧಿಸಿ.. ಮನೆ ಖರೀದಿಸುತ್ತೇನೆ.. ಸಾಲ ತೀರಿಸುತ್ತೇನೆ ಎಂದು ಹೇಳುತ್ತಾರೆ. ಆದರೆ ಬಬಿತಾ ಮಾತ್ರ ತದ್ವಿ ರುದ್ಧವಾಗಿ ಫೆÇೀನ್ ಖರೀದಿಸಿಸುತ್ತೇನೆ ಎಂದಾಗ ಅಮಿತಾಬ್ ಬಚ್ಚನ್ ದಿಗ್ಬ್ರಮೆಗೊಳಗಾದರು

Translate »