ಮೈಸೂರು ವಿವಿಯಿಂದ ಗಾಂಧಿ ವಿಚಾರಧಾರೆ ಕುರಿತ ಕೃತಿಗಳ ಪ್ರಕಟಣೆ 
ಮೈಸೂರು

ಮೈಸೂರು ವಿವಿಯಿಂದ ಗಾಂಧಿ ವಿಚಾರಧಾರೆ ಕುರಿತ ಕೃತಿಗಳ ಪ್ರಕಟಣೆ 

September 17, 2019

ಮೈಸೂರು, ಸೆ.16(ಪಿಎಂ)- ಜಗತ್ತಿನ ಪ್ರಸ್ತು ತದ ಎಲ್ಲಾ ತಲ್ಲಣಗಳಿಗೆ ಗಾಂಧಿ ವಿಚಾರ ಧಾರೆಯಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದ್ದು, ಇದಕ್ಕೆ ಸಂಬಂಧಿಸಿದಂತೆ ಕೃತಿ ಗಳನ್ನು ಪ್ರಕಟಿಸುವ ಯೋಜನೆ ಮೈಸೂರು ವಿಶ್ವವಿದ್ಯಾನಿಲಯದ ಮುಂದಿದೆ ಎಂದು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ತಿಳಿಸಿದರು.

ಮೈಸೂರಿನ ಮಹಾರಾಜ ಕಾಲೇಜು ಶತ ಮಾನೋತ್ಸವ ಭವನದಲ್ಲಿ ಮೈಸೂರು ವಿವಿಯ ಹಿರಿಯ ವಿದ್ಯಾರ್ಥಿಗಳ ಸಂಘ, ರಾಷ್ಟ್ರೀಯ ಸೇವಾ ಯೋಜನೆ, ಗಾಂಧಿ ಭವನ, ಹೆಚ್.ಸಿ.ದಾಸಪ್ಪ ಸಾರ್ವಜನಿಕ ಸಂಸ್ಥೆ, ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗಾಂಧಿ ವಿಚಾರ ಪರಿಷತ್ ಸಂಯುಕ್ತಾ ಶ್ರಯದಲ್ಲಿ ಬಾ-ಬಾಪು 150ನೇ ಜನ್ಮ ವರ್ಷಾಚರಣೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ (ರಾಸೇಯೋ) ಸುವರ್ಣ ಸಂಭ್ರಮಾಚರಣೆ ಅಂಗವಾಗಿ `ಗಾಂಧಿ ವ್ಯಕ್ತಿ ವಿಚಾರಗಳ ಪ್ರಸ್ತುತತೆ’ ಕುರಿತಂತೆ ಸೋಮ ವಾರ ಹಮ್ಮಿಕೊಂಡಿದ್ದ ಒಂದು ದಿನದ ವಿಶ್ವ ವಿದ್ಯಾನಿಲಯ ಮಟ್ಟದ ವಿಚಾರ ಸಂಕಿ ರಣ ಉದ್ಘಾಟಿಸಿ ಅವರು ಮಾತನಾಡಿದರು.

ಮೈಸೂರು ವಿವಿಯ ಮಾನಸ ಗಂಗೋತ್ರಿ ಆವರಣದಲ್ಲಿ ಗಾಂಧಿ ಸ್ಮರಣೆಗಾಗಿ ಅವರ ಸಬರಮತಿ ಆಶ್ರಮ ಮಾದರಿ ಕಟ್ಟಡ ನಿರ್ಮಿಸ ಲಾಗಿದೆ. ಜೊತೆಗೆ ಗಾಂಧಿಯವರ ಹೋರಾಟ ಹಾಗೂ ಜೀವನಕ್ಕೆ ಸಂಬಂಧಿಸಿದಂತೆ 27 ಕಲಾಕೃತಿಗಳನ್ನು ಸ್ಥಾಪಿಸಲಾಗಿದೆ. ಇದೀಗ ಗಾಂಧಿ ವಿಚಾರಧಾರೆ ಕುರಿತ ಕೃತಿಗಳನ್ನು ಪ್ರಕ ಟಿಸುವ ಯೋಜನೆ ಕೈಗೆತ್ತಿಕೊಳ್ಳಲಾಗು ವುದು ಎಂದು ಹೇಳಿದರು.

ವಿಶ್ವಕವಿ ರವೀಂದ್ರನಾಥ ಟ್ಯಾಗೋರ್ ಅವರು ಗಾಂಧಿಯವರನ್ನು ಮಹಾತ್ಮ ಎಂದು ಹೆಮ್ಮೆಯಿಂದ ಕರೆದಿದ್ದಾರೆ. ಇಡೀ ಪ್ರಪಂಚ ದಲ್ಲಿ 250ಕ್ಕೂ ಹೆಚ್ಚು ಗಾಂಧಿ ಶಾಂತಿ ಸಂಶೋ ಧನಾ ಕೇಂದ್ರಗಳು ಸ್ಥಾಪನೆಯಾಗಿವೆ. ಅವರು ಕರ್ನಾಟಕಕ್ಕೆ 16 ಬಾರಿ ಭೇಟಿ ನೀಡಿದ್ದರು ಎಂದು ಸ್ಮರಿಸಿದರು.

`ಗಾಂಧಿ ಮತ್ತು ಶಿಕ್ಷಣ’ ಕುರಿತು ಮಾತ ನಾಡಿದ ಮೈಸೂರು ವಿವಿ ಸಂದರ್ಶಕ ಪ್ರಾಧ್ಯಾ ಪಕ ಪ್ರೊ.ಸಿ.ನಾಗಣ್ಣ, ಭಾರತ ಮರೆತಿದ್ದ ತನ್ನ ಗತಕಾಲದ ಇತಿಹಾಸದ ವೈಭವವನ್ನು ನೆನಪಿಸಿದವರು ಗಾಂಧಿ. `ನಿಮ್ಮ ಮನಸ್ಸಿನ ಹಾಗೂ ಆತ್ಮದ ಸ್ವಾತಂತ್ರ್ಯಕ್ಕೆ ಆದ್ಯತೆ ನೀಡಿ’ ಎಂಬ ಸಂದೇಶ ಸಾರುವ ಮೂಲಕ ಗಾಂಧೀಜಿ ಯವರು ನಮ್ಮೊಳಗಿನ ಪ್ರಜ್ಞೆಯನ್ನು ಜಾಗೃತ ಗೊಳಿಸಿದರು. ಶಿಕ್ಷಣವನ್ನು ಹೊಸದಾಗಿ ವ್ಯಾಖ್ಯಾನಿಸಿ ಮೌಲ್ಯಾಧಾರಿತ ಶಿಕ್ಷಣ ಎಂದರೆ ಹೇಗಿರಬೇಕೆಂದು ಅವರು ತಿಳಿಸಿ ಕೊಟ್ಟಿದ್ದಾರೆ ಎಂದು ಹೇಳಿದರು.

ರೈತನೊಬ್ಬ ಹೊಲ ಉತ್ತು, ಬೆಳೆ ಬೆಳೆ ಯುವ ಜ್ಞಾನ ಹೊಂದಿರುತ್ತಾನೆ. ಕೇವಲ ಸಹಿ ಮಾಡಲು ಬಾರದ ಕಾರಣಕ್ಕೆ ಅನಕ್ಷ ರಸ್ಥ ಎಂದು ರೈತರನ್ನು ಕರೆಯುವುದು ಎಷ್ಟು ಸರಿ ಎಂಬುದು ಗಾಂಧಿಯವರ ವಾದವಾ ಗಿದೆ. ಅಕ್ಷರ ವಿದ್ಯೆಯೇ ಸರ್ವಸ್ವವಲ್ಲ ಎಂದು ಗಾಂಧಿಯವರು ಪ್ರತಿಪಾದಿಸಿ, ಚಾರಿತ್ರ್ಯ ನಿರ್ಮಾಣವೇ ಶಿಕ್ಷಣದ ಮೂಲ ಉದ್ದೇಶ ವಾಗಬೇಕು ಎಂದು ಒತ್ತಿ ಹೇಳಿದ್ದಾರೆ. ಇಂದು ಗಾಂಧಿ ಪರಿಕಲ್ಪನೆಯ ಶಿಕ್ಷಣ ಪದ್ಧತಿ ಜಾರಿ ಗೊಳ್ಳುವುದು ಅನಿವಾರ್ಯವಾಗಿದೆ ಎಂದರು.

ವಿಶೇಷ ಉಪನ್ಯಾಸ ನೀಡಿದ ನವ ದೆಹಲಿಯ ಮಹಾತ್ಮ ಗಾಂಧಿ ನ್ಯಾಷನಲ್ ಮ್ಯೂಸಿಯಂ ನಿರ್ದೇಶಕ ಎ.ಅಣ್ಣಾಮಲೈ, ವಿವಿಧತೆಯಲ್ಲಿ ಏಕತೆ ಎಂಬುದು ಭಾರತದ ವೈವಿಧ್ಯತೆಯ ಸೌಂದರ್ಯ. ಇದು ನಿಜಕ್ಕೂ ನಮ್ಮ ಹೆಮ್ಮೆಯೇ ಸರಿ ಎಂದರಲ್ಲದೆ, ಗಾಂಧಿ ಯವರ ಕುರಿತ ಜೀವನ, ಸಾಧನೆ ಹಾಗೂ ಅವರ ವಿಚಾರಧಾರೆ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಶತ ಮಾನೋತ್ಸವ ಭವನದ ಹೊರಾವರಣ ದಲ್ಲಿ ಗಾಂಧಿಯವರ ಜೀವನ, ಸಾಧನೆ, ವ್ಯಕ್ತಿತ್ವ ಹಾಗೂ ಕಾರ್ಯಗಳನ್ನು ಪ್ರತಿಬಿಂಬಿಸುವ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸ ಲಾಗಿತ್ತು. ಮೈಸೂರು ವಿವಿ ಹಿರಿಯ ವಿದ್ಯಾರ್ಥಿ ಗಳ ಸಂಘದ ಅಧ್ಯಕ್ಷ ಡಾ.ವಸಂತ ಕುಮಾರ್ ತಿಮಕಾಪುರ ಅಧ್ಯಕ್ಷತೆ ವಹಿಸಿ ದ್ದರು. ಹೆಚ್.ಸಿ.ದಾಸಪ್ಪ ಸಾರ್ವಜನಿಕ ಸಂಸ್ಥೆ ಅಧ್ಯಕ್ಷ ಡಾ.ಕೆ.ಮಹದೇವ್, ಕಾರ್ಯ ದರ್ಶಿ ಸರೋಜ ತುಳಸೀದಾಸ್, ಮೈಸೂರು ವಿವಿ ರಾಸೇಯೋ ಸಂಯೋಜನಾಧಿಕಾರಿ ಡಾ.ಬಿ.ಚಂದ್ರಶೇಖರ್, ಗಾಂಧಿ ಭವನದ ನಿರ್ದೇಶಕ ಡಾ.ಎಂ.ಎಸ್.ಶೇಖರ್, ಗಾಂಧಿ ವಿಚಾರ ಪರಿಷತ್ ಅಧ್ಯಕ್ಷ ಪ.ಮಲ್ಲೇಶ್ ಮತ್ತಿತರರು ವೇದಿಕೆಯಲ್ಲಿದ್ದರು.

ಸಾಮಾಜಿಕ ಹೋರಾಟಗಾರ ಎಸ್.ಆರ್. ಹೀರೇಮಠ್, ಗಾಂಧಿವಾದಿ ಹಾಗೂ ರಂಗಕರ್ಮಿ ಪ್ರಸನ್ನ, ಮಾಜಿ ಶಾಸಕ ಪುಟ್ಟೇಗೌಡ ಸೇರಿದಂತೆ ಮತ್ತಿತರ ಗಣ್ಯರು ಹಾಗೂ ವಿವಿಧ ಕಾಲೇಜು ವಿದ್ಯಾರ್ಥಿ ಗಳು ಪಾಲ್ಗೊಂಡಿದ್ದರು.

 

Translate »