ಮುಂದಿನ ವರ್ಷದಿಂದ ಮೈಸೂರು ವಿವಿ ಆಡಳಿತ ಪೂರ್ಣ ಡಿಜಿಟಲೀಕರಣ
ಮೈಸೂರು

ಮುಂದಿನ ವರ್ಷದಿಂದ ಮೈಸೂರು ವಿವಿ ಆಡಳಿತ ಪೂರ್ಣ ಡಿಜಿಟಲೀಕರಣ

September 17, 2019

ಮೈಸೂರು,ಸೆ.16(ಆರ್‍ಕೆ)- ಮುಂದಿನ ಶೈಕ್ಷಣಿಕ ವರ್ಷದಿಂದ ಮೈಸೂರು ವಿಶ್ವವಿದ್ಯಾನಿಲಯದ ಆಡಳಿತ ಸಂಪೂರ್ಣ ಡಿಜಿಟಲೀಕರಣವಾಗಲಿದೆ.ಕ್ರಾಫರ್ಡ್ ಭವನದ ಸಭಾಂಗಣದಲ್ಲಿ ಇಂದು ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಈ ಮಹ ತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಇನ್ನು ಮುಂದೆ ಕಾಗದದ ಮೂಲಕ ವ್ಯವಹರಿಸುವುದಕ್ಕೆ ತಿಲಾಂ ಜಲಿ ಇಟ್ಟು ಡಿಜಿಟಲೈಸ್ಡ್ ಪದ್ಧತಿಯಲ್ಲಿ ಆಡಳಿತ ನಡೆಸಲು ಸದಸ್ಯರು ಸಮ್ಮತಿಸಿದರು.

ಆಡಳಿತದಲ್ಲಿ ಪಾರದರ್ಶಕತೆ ತರಲು, ಕಡತಗಳ ಶೀಘ್ರ ವಿಲೇವಾರಿ, ಕಾಗದ ಪತ್ರಗಳಿಗೆ ತಗಲುವ ವೆಚ್ಚ ಹಾಗೂ ಅಕ್ರಮಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಡಿಜಿಟಲೈಸ್ಡ್ ಸಿಸ್ಟಂ ಅನ್ನು ಜಾರಿಗೆ ತರಲು ಉದ್ದೇ ಶಿಸಲಾಗಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ಪ್ರಸ್ತಾಪ ಮುಂದಿಟ್ಟರು.

ಇಡೀ ದೇಶವೇ ಕಂಪ್ಯೂಟರೀಕರಣವಾಗಿ, ಡಿಜಿ ಟಲೈಸ್ಡ್ ಆಗಿರುವುದರಿಂದ ವಿಶ್ವವಿದ್ಯಾನಿಲಯವು ಇನ್ನು ಮುಂದಾದರೂ ಕಾಗದ, ಕಡತಗಳ ವಿಲೇ ವಾರಿ ಮಾದರಿಯಿಂದ ಹೊರಬಂದು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕಿದೆ. ಆಡಳಿತದಲ್ಲಿ ಸುಧಾರಣೆ ತರುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಸದಸ್ಯರು ಮುಂದಿನ ಶೈಕ್ಷಣಿಕ ವರ್ಷ ದಿಂದ ಡಿಜಿಟಲೀಕರಣ ಆಡಳಿತ ನಡೆಸುವ ಪ್ರಸ್ತಾ ವನೆಯನ್ನು ಅನುಮೋದಿಸಿದರು.

ಸೆಂಟೆನರಿ ಮ್ಯೂಸಿಯಂ: ನೂರು ವರ್ಷ ತುಂಬಿ ರುವ ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸ ನಡೆದು ಬಂದ ಹಾದಿ, ಸಾಧನೆ, ಗುರಿ, ಮುಂದಿನ ಯೋಜನೆ ಗಳು, ಸಾಧಕರು, ಪರಂಪರೆಯನ್ನು ಬಿಂಬಿಸುವ ಹಾಗೂ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಸೆಂಟನರಿ ಮ್ಯೂಸಿಯಂ ಸಿದ್ಧಪಡಿಸಲು ಅಕಾಡೆಮಿಕ್ ಕೌನ್ಸಿಲ್ ಸಭೆ ಅನುಮೋದನೆ ನೀಡಿತು.

ಮಾನಸಗಂಗೋತ್ರಿ ಆವರಣದಲ್ಲಿ ಶತಮಾನೋ ತ್ಸವ ಸಂಗ್ರಹಾಲಯವನ್ನು ಮೂರು ತಿಂಗಳೊಳಗಾಗಿ ಆರಂಭಿಸಲು ಈಗಿನಿಂದಲೇ ತಯಾರಿ ನಡೆಸಿ ಎಂದೂ ಸದಸ್ಯರು ಕುಲಪತಿಗಳಿಗೆ ಸಲಹೆ ನೀಡಿದರು.

ಪ್ರತ್ಯೇಕ ಹಾಸ್ಟೆಲ್: ಸಂಶೋಧನಾ ವಿದ್ಯಾರ್ಥಿಗಳಿ ಗಾಗಿ ಮೈಸೂರು ವಿಶ್ವವಿದ್ಯಾನಿಲಯವು ಪ್ರತ್ಯೇಕ ಹಾಸ್ಟೆಲ್ ಕಟ್ಟಡಗಳನ್ನು ನಿರ್ಮಿಸಲು ಮುಂದಾಗಿದ್ದು, ತಕ್ಷಣವೇ ಟೆಂಡರ್ ಕರೆದು ಕಾಮಗಾರಿ ಆರಂಭಿ ಸಲು ಸಿದ್ಧತೆ ಮಾಡಲಾಗುವುದು ಎಂದು ಕುಲಪತಿ ಪ್ರೊ.ಹೇಮಂತ ಕುಮಾರ್ ತಿಳಿಸಿದರು.

ಬಯೋಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್ ಹಾಗೂ ಕನ್ನಡ ಬೋಧನೆಗೆ ಹೆಚ್ಚುವರಿ ತರಗತಿ ಕೊಠಡಿ ಗಳನ್ನು ಒದಗಿಸುವುದು ದೂರ ಶಿಕ್ಷಣಕ್ಕೆ ಪ್ರತ್ಯೇಕ ವ್ಯವಸ್ಥೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಭೆ ಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.

ಮಂಡ್ಯದ ಸೆಂಟ್ ಜೋಸೆಫ್ ಟೀಚರ್ಸ್ ಎಜುಕೇ ಷನ್, ಎಇಟಿ ಕಾಲೇಜ್ ಆಫ್ ಎಜುಕೇಷನ್ ಹಾಗೂ ಮಂಡ್ಯ ಕಾಲೇಜ್ ಆಫ್ ಎಜುಕೇಷನ್ ಸಂಸ್ಥೆಗಳಿಗೆ 50ರಿಂದ 100 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶಕ್ಕೆ ಷರತ್ತು ವಿಧಿಸಿ ಅನುಮತಿ ನೀಡುವುದು, ಪ್ರೊ.ನಾಗಪ್ಪ, ಪ್ರೊ.ಪಿ.ಕೆ.ಪಾಟೀಲ್ ಸೇರಿದಂತೆ ವಿವಿಧ ಪ್ರಾಧ್ಯಾ ಪಕರ ದತ್ತಿ ಸ್ಥಾಪನೆ ಅನುಮೋದನೆ ದೊರೆಯಿತು.

ಮೈಸೂರು ವಿಶ್ವವಿದ್ಯಾನಿಲಯದ 2018-19ನೇ ಸಾಲಿನ ವಾರ್ಷಿಕ ವರದಿಯನ್ನು ಸರ್ಕಾರಕ್ಕೆ ರವಾ ನಿಸುವ ಬಗೆಗಿನ ಪ್ರಸ್ತಾವಕ್ಕೆ ತೀವ್ರ ಆಕ್ಷೇಪ ವ್ಯಕ್ತಪ ಡಿಸಿದ ಪ್ರೊ. ನಾಗೇಂದ್ರಪ್ಪ ಅವರು 260 ಪುಟದ ವರದಿಯ 20 ಪುಟಗಳನ್ನು ಮಾತ್ರ ಗಮನಿಸಿ ದ್ದೇನೆ. ಅದರಲ್ಲಿ ಅನೇಕ ತಪ್ಪುಗಳಿವೆ. ಅವುಗಳನ್ನು ಸರಿಪಡಿಸುವವರೆಗೆ ಕಳುಹಿಸಬಾರದೆಂದು ಪಟ್ಟಿ ಹಿಡಿದರು. ಕುಲಸಚಿವ ಪ್ರೊ. ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ. ಮಹದೇವ, ಸದಸ್ಯರಾದ ಪ್ರೊ. ಸಿ. ಬಸವರಾಜು, ಪ್ರೊ. ಶಿವಕುಮಾರ್, ಪ್ರೊ. ಸದಾನಂದ ಎಂಕನವಾಡಿ, ಪ್ರೊ.ಟಿ.ಎಸ್. ದೇವ ರಾಜು, ಪ್ರೊ.ಶ್ರೀಕಂಠಸ್ವಾಮಿ, ಪ್ರೊ. ಸರಸ್ವತಿ, ಬಿ.ಎಸ್. ವಿಶ್ವನಾಥ್ ಸೇರಿದಂತೆ ಹಲವರು ಸಭೆ ಯಲ್ಲಿ ಹಾಜರಿದ್ದರು.

Translate »