ವಿನಾಶದ ಅಂಚಿನಲ್ಲಿ ಪ್ರಾಣಿ, ಪಕ್ಷಿ ಸಂತತಿ
ಮೈಸೂರು

ವಿನಾಶದ ಅಂಚಿನಲ್ಲಿ ಪ್ರಾಣಿ, ಪಕ್ಷಿ ಸಂತತಿ

October 22, 2018

ಮೈಸೂರು:  ಪರಿ ಸರದ ಮೇಲೆ ಮಾನವನ ಅಟ್ಟಹಾಸ ದಿಂದಾಗಿ ಇಂದು ಪರಿಸರ ಸಮತೋ ಲನ ತಪ್ಪಿದ್ದು, ಇದರಿಂದ ವಾತಾವರಣ, ಪ್ರಾಣಿ ಪಕ್ಷಿಗಳ ಸಂತತಿ ಕ್ಷೀಣಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಕಲಾ ಮಂದಿರ ಸುಚಿತ್ರಾ ಆರ್ಟ್ ಗ್ಯಾಲರಿಯಲ್ಲಿ ಭಾನುವಾರ ಆಯೋಜಿಸಿದ್ದ `ಪ್ರಾಣಿಗಳ ಅಳಿವು-ಉಳಿವು’ ಚಿತ್ರಕಲಾ ಪ್ರದರ್ಶನ ಗಮನ ಸೆಳೆಯಿತು.
ವಿಶ್ವ ಪ್ರಾಣಿ ದಿನ ಹಾಗೂ ವನ್ಯ ಪ್ರಾಣಿ ಸಪ್ತಾಹದ ಅಂಗವಾಗಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಕಲಾಕೂಟದ ಆಶ್ರಯದಲ್ಲಿ ಶಿಕ್ಷಕ ಮತ್ತು ಕಲಾವಿದ ಯು.ಜಿ.ಮೋಹನ್‍ಕುಮಾರ್ ಆರಾಧ್ಯ ರಚಿಸಿದ ಚಿತ್ರಗಳ ಪ್ರದರ್ಶನ ದಲ್ಲಿ ನಾಶವಾದ ಅನೇಕ ಪ್ರಾಣಿ, ಪಕ್ಷಿಗಳ ಬಗೆಗಿನ ಚಿತ್ರಗಳಿದ್ದವು. ಭವಿಷ್ಯದಲ್ಲಿ ಪ್ರಾಣಿ, ಪಕ್ಷಿಗಳ ಸಂತತಿ ನಾಶದ ಎಚ್ಚರಿಕೆ ಯನ್ನು ನೀಡಿತು.

ಇಂದು ಹುಡುಕಿದರೂ ಸಿಗದ ಪಪ್ ಮೀನು, ಕ್ಯುಬಾನ್ ಮಕಾವ್ ಪಕ್ಷಿ, ತಾಸ್ಮೇನಿಯನ್ ಹುಲಿ, ಸಮುದ್ರ ಗುಬ್ಬಿ, ಕೆರೆಬಿಯನ್ ಮಾಂಕ್ ಸೀಲ್ ಇತ್ಯಾದಿ ಪ್ರಾಣಿ, ಪಕ್ಷಿಗಳ ಸಂಕುಲದ ನಾಶವನ್ನು ಕಲಾವಿದ ತಮ್ಮ ಕಲಾಕುಂಚದ ಮೂಲಕ ಸೂಕ್ಷ್ಮವಾಗಿ ಚಿತ್ರಿಸಿ ಗಮನ ಸೆಳೆದಿದ್ದಾರೆ. ಪ್ರಾಣಿಗಳು ಕಾಡಿನಿಂದ ನಾಡಿಗೆ ಲಗ್ಗೆ ಇಡು ತ್ತಿರುವ ಕಾರಣಗಳನ್ನು ಚಿತ್ರದ ಮೂಲಕ ತಿಳಿಸಿಕೊಟ್ಟು ಎಚ್ಚರಿಸಿದ್ದಾರೆ. ಭವಿಷ್ಯದಲ್ಲಿ ಮಾನವನಿಗೆ ಸಂಕಷ್ಟ ಕಾದಿದೆ ಎಂಬ ಎಚ್ಚರಿಕೆ ಸಂದೇಶವನ್ನು ಅವರು ನೀಡಿದ್ದಾರೆ.
ಮರ ಗಿಡಗಳ ನಾಶದಿಂದ ಪಕ್ಷಿ ಸಂಕು ಲವೂ ನಾಶವಾಗುತ್ತಿದೆ. ಒಣಗಿದ ವೃಕ್ಷ ದಲ್ಲಿ ಭವಿಷ್ಯಕ್ಕಾಗಿ ಚಿಂತಿಸುತ್ತಿರುವ ಪಕ್ಷಿಗಳು, ಮೊಬೈಲ್ ಯುಗದಲ್ಲಿ ಗುಬ್ಬಿ ಗಿಲ್ಲ ಉಳಿಗಾಲ, ಕಾಣೆಯಾಗುತ್ತಿರುವ ಪಾಶ್ಚಾತ್ಯ ಕಪ್ಪು ಘೇಂಡಾಮೃಗ ಮೊದ ಲಾದ ಅನೇಕ ಚಿತ್ರಗಳು ಮಾನವನ ಪರಿ ಸರ ವಿರೋಧಿ ಕೃತ್ಯಕ್ಕೆ ಸಾಕ್ಷಿ ಎಂಬಂತಿವೆ.

ಮೈಸೂರಿನ ಚಾಮರಾಜೇಂದ್ರ ಮೃಗಾ ಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿದರು.ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷ ಎನ್.ಎಂ.ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಬಿಜಿವಿಎಸ್ ರಾಜ್ಯ ಸಮಿತಿ ಸದಸ್ಯ ಎಸ್.ವಜ್ರಮುನಿ, ಜೀವವಿಜ್ಞಾನ ಶಿಕ್ಷಕ ಎಂ. ಬಸವರಾಜು, ಕಲಾವಿದ ಯು.ಜಿ.ಮೋಹನ್‍ಕುಮಾರ್ ಆರಾಧ್ಯ sಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Translate »