ಮಡಿಕೇರಿ,ಜ.20- ಕೊಡಗಿನ ಅಂಕಿತಾ ಸುರೇಶ್ ಅವರು ಭಾರತೀಯ ಹಿರಿಯ ಮಹಿಳಾ ಹಾಕಿ ತಂಡದ ಅಸಿಸ್ಟೆಂಟ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಇವರು ತರಬೇತಿ ಸದಸ್ಯರಾಗಿದ್ದು, ಜನವರಿ 21ರವರೆಗೆ ನಡೆಯುತ್ತಿರುವ ಹಾಕಿ ಪಂದ್ಯಾವಳಿಯ ಹಿರಿಯ ಹಾಕಿ ಆಟಗಾರರಿಗೆ ತರಬೇತಿ ನೀಡುತ್ತಿದ್ದಾರೆ.
ಜ.22 ರಂದು ನ್ಯೂಜಿಲ್ಯಾಂಡ್‍ಗೆ ತೆರಳಲಿರುವ ಭಾರ ತೀಯ ಹಾಕಿ ತಂಡದ (ಹಿರಿಯರ ಮಹಿಳಾ ಹಾಕಿ ತಂಡ) ಅಸಿಸ್ಟೆಂಟ್ ಕೋಚ್ ಆಗಿ ಅವರು ಕಾರ್ಯ ನಿರ್ವಹಿಸಲಿದ್ದಾರೆ. ನ್ಯೂಜಿಲೆಂಟ್ ಪ್ರವಾಸ ಜ.23 ರಿಂದ ಆರಂಭ ಗೊಂಡು ಫೆಬ್ರವರಿ 6ರವರೆಗೆ ನಡೆಯುತ್ತದೆ. ಮುಖ್ಯ ತರ ಬೇತುದಾರರಾದ ಸೋಜೆರೊ ಮರ್ಜಿನೆ ಮತ್ತು ಅನಾಲಿಟಿಕಲ್ ಕೋಚ್ ಜನ್ನೆಕೆ ಸ್ಕಾಪ್‍ಮ್ಯಾನ್ ನೇತೃತ್ವದ 26 ಸದಸ್ಯರನ್ನೊಳಗೊಂಡ ಭಾರತೀಯ ಹಾಕಿ ತಂಡದಲ್ಲಿ ಅಂಕಿತಾ ಅವರು ಒಬ್ಬರಾಗಿದ್ದಾರೆ.
ಮಡಿಕೇರಿ ನಿವಾಸಿ ಬಿ.ಎ. ಸುರೇಶ್ ಮತ್ತು ಬಿ.ಎಸ್. ಧರ್ಮ ವತಿ ದಂಪತಿ ಪುತ್ರಿಯಾದ ಹೊನ್ನಂಪಾಡಿ ಅಂಕಿತಾ ಸುರೇಶ್ ಅವರು ತಮ್ಮ ಸ್ಪೋಟ್ರ್ಸ್ ವೃತ್ತಿಯನ್ನು ಅಥ್ಲೆಟಿಕ್ ಮೂಲಕ ಆರಂಭಿಸಿ ದರು. ರಾಷ್ಟ್ರ ಮಟ್ಟದ ಅಥ್ಲೆಟಿಕ್‍ನ 3000 ಮೀಟರ್ ಮತ್ತು 5000 ಮೀಟರ್ ರನ್ನಿಂಗ್ ರೇಸ್‍ನಲ್ಲಿ ಚಿನ್ನದ ಪದಕ ಪಡೆದುಕೊಂಡಿ ದ್ದಾರೆ. ಮಡಿಕೇರಿಯ ಜೂನಿಯರ್ ಕಾಲೇಜಿನಲ್ಲಿ ವ್ಯಾಸಂಗ ಮಾಡು ತ್ತಿದ್ದ ಸಂದರ್ಭದಲ್ಲಿ ಹಾಕಿಯನ್ನು ಆರಿಸಿಕೊಂಡು ತರಬೇತಿಗಾಗಿ ಮಡಿಕೇರಿಯಲ್ಲಿರುವ ಎಸ್‍ಎಎಐ ಹಾಕಿ ಹಾಸ್ಟೆಲ್‍ಗೆ ಸೇರಿದ ನಂತರ ಹಾಕಿ ಕ್ರೀಡೆಯ ಬಗ್ಗೆ ಅವರಿಗೆ ಉತ್ಸಾಹ ಹೆಚ್ಚಾಯಿತು. ಅಂಕಿತಾ ಸುರೇಶ್ ಅವರು ರಾಷ್ಟ್ರ ಮಟ್ಟದಲ್ಲಿ ಕರ್ನಾಟಕವನ್ನು ಐದು ಬಾರಿ ಪ್ರತಿನಿಧಿಸಿದ್ದಾರೆ (ಎರಡು ಬಾರಿ ಹಿರಿಯರ ವಿಭಾಗ ಮತ್ತು ಮೂರು ಕಿರಿಯರ ವಿಭಾಗ). ವಿಶ್ವವಿದ್ಯಾನಿಲಯ ಮಟ್ಟದಲ್ಲಿ (ಮಂಗಳೂರು ವಿಶ್ವವಿದ್ಯಾಲಯ) 3 ಚಿನ್ನದ ಪದಕ ಮತ್ತು ಎರಡು ಕಂಚಿನ ಪದಕ (ಅಣ್ಣಾಮಲೈ ವಿಶ್ವವಿದ್ಯಾನಿಲಯ) ಪಡೆದಿದ್ದಾರೆ. ಅವರು ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಹಾಕಿ ಪಂದ್ಯಾವಳಿ ಯಲ್ಲಿ ಐದು ಬಾರಿ ಭಾಗವಹಿಸಿದ್ದಾರೆ.
ಹಾಕಿ ಇಂಡಿಯಾ ನೀಡುವ ಲೆವೆಲ್ -3 ಕೋಚಿಂಗ್ ಕೋರ್ಸ್‍ಗೆ ಆಯ್ಕೆಯಾಗಿರುವ ಕರ್ನಾಟಕದ ಐವರು ಮಹಿಳೆಯರಲ್ಲಿ ಅಂಕಿತಾ ಒಬ್ಬರಾಗಿದ್ದು, ಭಾರತದಿಂದ ಅದರಲ್ಲೂ ಕರ್ನಾಟಕದಿಂದ ಫೆಡರೇಷನ್ ಇಂಟರ್ ನ್ಯಾಷನಲ್ ಹಾಕಿ ವಲ್ರ್ಡ್ ಕಪ್ ವುಮೆನ್ಸ್ ಹಾಕಿ ತಂಡಕ್ಕೆ ಲೆವೆಲ್-2 ತಾಂತ್ರಿಕ ಅಧಿಕಾರಿಯಾಗಿ ಆಯ್ಕೆಯಾದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಪ್ರಸ್ತುತ ಅಂಕಿತಾ ಸುರೇಶ್ ಪೊನ್ನಂಪೇಟೆಯಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಹಾಕಿ ಕೋಚ್ ಆಗಿ ಹಾಗೂ ನ್ಯಾಷನಲ್ ಕೋಚ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಇ-ಫೈನಾನ್ಸ್ ಮತ್ತು ಜಿಮ್ ಇನ್ಸ್‍ಸ್ಟ್ರಕ್ಷನ್‍ನಲ್ಲಿ ಡಿಪ್ಲೋಮಾ ಸ್ನಾತಕೋತ್ತರ ಪದವೀಧರೆಯಾದ ಇವರು ಮಾಸ್ಟರ್ ಇನ್ ಕಾಮರ್ಸ್ ಮತ್ತು ಡಿಪ್ಲೋಮಾ ಇನ್ ಸ್ಪೋಟ್ರ್ಸ್ ಕೋಚಿಂಗ್ (ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಸ್ಪೋಟ್ರ್ಸ್) ಪದವಿ ಪಡೆದುಕೊಂಡಿದ್ದಾರೆ. ಅಂಕಿತಾ ಸುರೇಶ್ `ಮೈಸೂರು ಮಿತ್ರ’ನೊಂ ದಿಗೆ ಮಾತನಾಡಿ `ಮಡಿಕೇರಿಯ ಎಸ್‍ಎಐ ಹಾಕಿ ಹಾಸ್ಟೆಲ್‍ನಲ್ಲಿರುವ ಎನ್. ಮುತ್ತು ಕುಮಾರ್ ನನ್ನ ತರಬೇತುದಾರರಾಗಿದ್ದು, ಅವರು ನನ್ನ ಆದರ್ಶ ವ್ಯಕ್ತಿ ಮತ್ತು ಸ್ಫೂರ್ತಿಯಾಗಿದ್ದಾರೆ. ನನ್ನ ವೃತ್ತಿ ಜೀವನದ ಉದ್ದಕ್ಕೂ ಕೆಲಸ ಮಾಡಿದ ತರಬೇತುದಾರರಿಗೆ ಕೃತಜ್ಞ ಳಾಗಿರುತ್ತೇನೆ’ ಎಂದು ಪ್ರೀತಿಯಿಂದ ಹೇಳುತ್ತಾರೆ. ಅದರಲ್ಲೂ ಪೊನಚಣ್ಣ ಶ್ರೀನಿವಾಸ್ ಅವರು ನನಗೆ ಹಾಕಿ ತರಬೇತಿ ಕೊಟ್ಟಿದ್ದಕ್ಕೆ ಚಿರಋಣಿ ಯಾಗಿರುತ್ತೇನೆ ಎಂದು ವಿಶೇಷವಾಗಿ ಉಲ್ಲೇಖಿಸಿ ಹೇಳಿದ್ದಾರೆ.
ಹಾಕಿ ಇಂಡಿಯಾ ಮತ್ತು ಎಫ್‍ಐಹೆಚ್ ಹಾಕಿ ಅಕಾಡೆಮಿ ನಡೆಸಿದ ಹಾಕಿ ಇಂಡಿಯಾ ಲೆವೆಲ್-1, ಲೆವೆಲ್-2 ಮತ್ತು ಎಫ್‍ಐಹೆಚ್ ಲೆವೆಲ್-1, 2 ಮತ್ತು ಈಗ ಎಫ್‍ಐ ಹೆಚ್ ಲೆವೆಲ್ -3ಗೆ ಬಡ್ತಿ ಹೊಂದಿರುವುದಕ್ಕೆ ಹಾಕಿ ಕರ್ನಾಟಕದ ಬೆಂಬಲ ಮತ್ತು ಸಹಕಾರಕ್ಕೆ ಅಭಾರಿಯಾಗಿದ್ದೇನೆ ಎಂದು ಅವರು ಹೇಳಿದರು.