ಮಡಿಕೇರಿ,ಆ.18-ವಿರಾಜಪೇಟೆ ತಾಲೂ ಕಿನ ಕೇರಳ ಗಡಿಗೆ ಸಮೀಪವಿರುವ ತೋರಾ ಗ್ರಾಮದಲ್ಲಿ ಭೂಕುಸಿತಕ್ಕೆ ಸಿಲುಕಿ ಮೃತ ಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಭೂಕುಸಿತಕ್ಕೆ ಸಿಕ್ಕಿ ನಾಪತ್ತೆಯಾದವರಿಗಾಗಿ 9ನೇ ದಿನವೂ ಶೋಧ ಕಾರ್ಯ ಮುಂದು ವರಿಸಿದ್ದ ಎನ್‍ಡಿಆರ್‍ಎಫ್‍ನ 10ನೇ ಬೆಟಾ ಲಿಯನ್ ಯೋಧರು ಮತ್ತು ಜಿಲ್ಲಾ ಪೊಲೀಸ್ ಸಿಬ್ಬಂದಿ, ಮಧ್ಯಾಹ್ನದ ವೇಳೆಗೆ ಹರೀಶ್ ಎಂಬವರ ಕುಟುಂಬ ಸದಸ್ಯ ರಾದ ಶಂಕರ (60) ಎಂಬವರ ದೇಹ ವನ್ನು ಹೊರಗೆತೆಯುವಲ್ಲಿ ಸಫಲರಾದರು.
ಕಳೆದ 9 ದಿನಗಳಿಂದ ಮೃತದೇಹ ಮಣ್ಣಿ ನಡಿಯಲ್ಲಿ ಹೂತು ಹೋಗಿದ್ದ ಹಿನ್ನೆಲೆ ಯಲ್ಲಿ ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆ ಯಾಗಿದೆ. ಮೃತದೇಹದ ಮೇಲಿದ್ದ ಬಟ್ಟೆ ಗಳಿಂದ ಮೃತರ ಕುಟುಂಬಸ್ಥರು ಇದು ನಾಪತ್ತೆಯಾಗಿದ್ದ ಶಂಕರ ಅವರ ಮೃತ ದೇಹವೆಂದು ದೃಢಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಇಂದಿಗೆ ಮಣ್ಣಿನಡಿ ಯಲ್ಲಿ ಸಿಲುಕಿದ್ದ ಮಮತ, ಲಿಖಿತ, ಅನು ಸೂಯ, ಅಪ್ಪು ಮತ್ತು ಶಂಕರ ಎಂಬವರ ಮೃತದೇಹಗಳು ಪತ್ತೆಯಾಗಿದ್ದು, ನಾಪತ್ತೆ ಯಾಗಿರುವ ಇತರ 4 ಮಂದಿಗಾಗಿ ಸೋಮ ವಾರವೂ ಶೋಧ ಕಾರ್ಯ ಮುಂದುವರಿ ಸಲಾಗುತ್ತದೆ ಎಂದು ಎನ್‍ಡಿಆರ್‍ಎಫ್‍ನ ಉನ್ನತ ಮೂಲಗಳು ಮಾಹಿತಿ ನೀಡಿವೆ. ಘಟನೆ ನಡೆದು 9 ದಿನ ಕಳೆದಿದ್ದರೂ ಕೂಡ ಸ್ಥಳದಲ್ಲಿ ಭಾರೀ ಪ್ರಮಾಣದ ಕೆಸರು ಮಣ್ಣು ತುಂಬಿರುವ ಹಿನ್ನೆಲೆಯಲ್ಲಿ ಬೃಹತ್ ಹಿಟಾಚಿ ಯಂತ್ರಗಳು ಹರಸಾಹಸದಿಂದಲೇ ಶೋಧ ಕಾರ್ಯ ನಡೆಸುತ್ತಿವೆ. ವಿಕೋಪದಲ್ಲಿ ಕೊಚ್ಚಿ ಬಂದಿರುವ ಮರದ ದಿಮ್ಮಿಗಳನ್ನು ಹಿಟಾಚಿ ಯಂತ್ರಗಳು ಕೆಸರಿನ ಮೇಲೆ ಹಾಕಿಕೊಂಡು ಮುಂದೆ ಸಾಗಬೇಕಾದ ಪರಿಸ್ಥಿತಿಯೂ ಘಟನಾ ಸ್ಥಳದಲ್ಲಿದೆ. ಹೀಗಾಗಿ ತೋರಾ ಗ್ರಾಮದಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ನಾಪತ್ತೆಯಾದವರಿಗಾಗಿ ನಡೆಯುತ್ತಿರುವ ಶೋಧ ಕಾರ್ಯವೂ ಅತ್ಯಂತ ಘೋರ ವಾಗಿ ಕಂಡು ಬರುತ್ತಿದೆ. ಭೂ ಮೇಲ್ಪದರದ ಗಟ್ಟಿ ಮಣ್ಣಿನವರೆಗೆ ಕೆಸರು ಮಣ್ಣನ್ನು ತೆರವು ಮಾಡಲಾಗುತ್ತಿದ್ದು, ಅಂದಾಜು 30ರಿಂದ 40 ಅಡಿಯಷ್ಟು ಮಣ್ಣಿನ ಅಡಿಯಲ್ಲಿ ಕೊಚ್ಚಿ ಹೋದ ಮನೆಗಳ ಅವಶೇಷಗಳು ಕಂಡು ಬರುತ್ತಿವೆ ಎನ್ನಲಾಗಿದೆ. ಶನಿವಾರದಂದು ಘಟನಾ ಸ್ಥಳದಲ್ಲಿ ಜಾನುವಾರುಗಳ ಕಳೇಬರ ಕೂಡ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನಾಪತ್ತೆಯಾದವರು ಮಣ್ಣಿನ ಅಡಿಯಲ್ಲಿ ಸಿಲುಕಿ ಮೃತಪಟ್ಟಿರುವ ಎಲ್ಲಾ ಲಕ್ಷಣ ಗಳಿವೆ ಎಂದು ಶಂಕಿಸಲಾಗಿದೆ.
ಮೈಸೂರು