ಗನ್‍ಮನ್ ನಾಗೇಶ್ ಗುಂಡ್ಲುಪೇಟೆ ಪೊಲೀಸರ ವಶಕ್ಕೆ
ಮೈಸೂರು

ಗನ್‍ಮನ್ ನಾಗೇಶ್ ಗುಂಡ್ಲುಪೇಟೆ ಪೊಲೀಸರ ವಶಕ್ಕೆ

August 19, 2019

ಮೈಸೂರು,ಆ.18(ಆರ್‍ಕೆ)- ಉದ್ಯಮಿ ಓಂಪ್ರಕಾಶ್ ಸೇರಿ ಅವರ ಕುಟುಂಬದ ಐವರ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗನ್‍ಮನ್ ಓರ್ವನನ್ನು ಗುಂಡ್ಲುಪೇಟೆ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಶುಕ್ರವಾರ ಮುಂಜಾನೆ ಗುಂಡ್ಲುಪೇಟೆಯ ಊಟಿ ರಸ್ತೆಯಲ್ಲಿರುವ ಸರ್ಕಾರಿ ಐಟಿಐ ಕಾಲೇಜು ಎದು ರಿನ ಜಮೀನೊಂದರಲ್ಲಿ ತಂದೆ ನಾಗರಾಜ ಭಟ್ಟಾ ಚಾರ್ಯ, ತಾಯಿ ಹೇಮಲತಾ, ಪತ್ನಿ ನಿಹಾರಿಕ (ನಿಖಿತಾ) ಹಾಗೂ ಪುತ್ರ ಆರ್ಯಕೃಷ್ಣರನ್ನು 0.32 ಮ್ಯಾಗ್‍ಜಿನ್ ಪಿಸ್ತೂಲ್‍ನಿಂದ ಹಣೆಗೆ ಗುಂಡಿಟ್ಟು ಕೊಂದು ತಾನೂ ಬಾಯಿ ಮೂಲಕ ತಲೆಗೆ ಗುಂಡು ಹೊಡೆದುಕೊಂಡು ಓಂಪ್ರಕಾಶ್ ಆತ್ಮಹತ್ಯೆ ಮಾಡಿ ಕೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರುವ ಗುಂಡ್ಲುಪೇಟೆ ಪೊಲೀಸರು. ತನಿಖೆ ಚುರುಕು ಗೊಳಿಸಿದಾಗ ಘಟನಾ ಸ್ಥಳದಲ್ಲಿ ಸಿಕ್ಕಿದ್ದ ಪಿಸ್ತೂಲ್ ಓಂಪ್ರಕಾಶ್ ಅವರಿಗೆ ಗನ್‍ಮನ್ ಆಗಿ ಕೆಲಸ ಮಾಡು ತ್ತಿದ್ದ ನಾಗೇಶ್ ಎಂಬುವರಿಗೆ ಸೇರಿದ್ದು ಎಂಬುದು ತಿಳಿಯಿತು. ನಾಗೇಶ್ ಗನ್ ಲೈಸನ್ಸ್ ಹೊಂದಿದ್ದು ಆತನೇ ವೆಪನ್ ಬಳಸುತ್ತಿದ್ದ. ಗನ್ ಪರವಾನಗಿ ಹೊಂದಿಲ್ಲದ ಓಂಪ್ರಕಾಶ್, ಘಟನೆ ನಡೆ ಯುವ ಹಿಂದಿನ ದಿನವಷ್ಟೇ ನಾಗೇಶ್ ಅವರಿಂದ ಪಿಸ್ತೂಲ್ ಅನ್ನು ಪಡೆದುಕೊಂಡಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.

ಗನ್‍ಲೈಸನ್ಸ್ ಮಾಲೀಕ ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದಂತೆಯೇ ನಾಗೇಶನನ್ನು ವಶಕ್ಕೆ ಪಡೆದ ಗುಂಡ್ಲುಪೇಟೆ ಸರ್ಕಲ್ ಇನ್‍ಸ್ಪೆಕ್ಟರ್ ಹೆಚ್.ಆರ್.ಬಾಲ ಕೃಷ್ಣ, ಆತನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಮಾಜಿ ಸೈನಿಕರು: ಉದ್ಯಮಿ ಬಳಿ ಗನ್‍ಮನ್ ಗಳಾಗಿ ಕೆಲಸ ಮಾಡುತ್ತಿದ್ದ ನಾಗೇಶ್ ಮತ್ತು ಇನ್ನಿ ಬ್ಬರು ಮಾಜಿ ಸೈನಿಕರಾಗಿದ್ದು, ದೃಢಕಾಯ ಶರೀರ ಹೊಂದಿದ್ದಾರೆ. ಎಲ್ಲರಿಗೂ ಗನ್ ಪರವಾನಗಿ ಮಂಜೂರಾಗಿದೆ. ಕಳೆದ 7 ತಿಂಗಳಿಂದ ಮೂವರು ಮಾಜಿ ಸೈನಿಕರು ಓಂಪ್ರಕಾಶ್ ಬಳಿ ಗನ್‍ಮನ್ ಗಳಾಗಿ ರಕ್ಷಣಾ ಕೆಲಸ ಮಾಡುತ್ತಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.

ತಲಾ 35,000 ರೂ. ಸಂಬಳ: ಗನ್‍ಮನ್‍ಗಳಾಗಿ ಪಾಳಿಯಂತೆ ದಿನದ 24 ಗಂಟೆಯೂ ಕೆಲಸ ಮಾಡು ತ್ತಿದ್ದ ಮೂವರಿಗೂ ಓಂಪ್ರಕಾಶ್ ತಿಂಗಳಿಗೆ ತಲಾ 35,000 ರೂ.ನಂತೆ ಸಂಬಳ ಕೊಟ್ಟು ಊಟ-ತಿಂಡಿ ಸೌಲಭ್ಯವನ್ನೂ ಒದಗಿಸಿ ಚೆನ್ನಾಗಿ ನೋಡಿಕೊಳ್ಳುತ್ತಿ ದ್ದರು. ಯಾವುದಕ್ಕೂ ಕೊರತೆ ಮಾಡದ ಕಾರಣ, ಆ ಮೂವರು ಗನ್‍ಮನ್‍ಗಳು ಓಂಪ್ರಕಾಶರನ್ನು `ನಮ್ಮ ಬಾಸ್’ ಎಂದೇ ಎಲ್ಲರ ಬಳಿ ಸಂಬೋಧಿಸುತ್ತಿದ್ದರಂತೆ.

ಶ್ರೀಮಂತ ಉದ್ಯಮಿಯಂತೆ ಶೋ: ಬೆಲೆಬಾಳುವ ಶರ್ಟ್, ಪ್ಯಾಂಟ್, ಶೂಗಳನ್ನೇ ಧರಿಸುತ್ತಿದ್ದ 35 ವರ್ಷದ ಓಂಪ್ರಕಾಶ್, ಐಷಾರಾಮಿ ಕಾರುಗಳಲ್ಲೇ ಸುತ್ತಿ ಮೂವರು ಗನ್‍ಮನ್‍ಗಳೊಂದಿಗೆ ಓಡಾಡಿ ಕೊಂಡು ಶ್ರೀಮಂತ ಉದ್ಯಮಿಯಂತೆ ಶೋ ಮಾಡಿ ಗಮನ ಸೆಳೆಯುತ್ತಿದ್ದ ಎಂಬುದೂ ಸಹ ವಿಚಾ ರಣೆಯಿಂದ ತಿಳಿದು ಬಂದಿದೆ.

ಕೋಟ್ಯಾಂತರ ರೂ. ಸಾಲ: ತಾನು ಬಲು ದೊಡ್ಡ ಉದ್ಯಮಿ ಎಂಬುದನ್ನು ಸಾದರಪಡಿಸಲು ಮೈಸೂರು, ಬೆಂಗಳೂರು, ಮಂಗಳೂರು ನಗರದ ಐಷಾರಾಮಿ ಸ್ಟಾರ್ ಹೋಟೆಲ್‍ಗಳಲ್ಲೇ ಉಳಿದುಕೊಳ್ಳುತ್ತಿದ್ದ ಆತ, ಸಿನೆಮಾ ತೆಗೆಯುವುದು, ಡೇಟಾ ಬೇಸ್ ಕಂಪನಿ ಮೂಲಕ ಸಾಫ್ಟ್‍ವೇರ್ ಡೆವಲಪ್ ಮಾಡುವುದು, ರಿಯಲ್ ಎಸ್ಟೇಟ್ ಬಿಸಿನೆಸ್ ಮೇಲೆ 500 ಕೋಟಿ ರೂ. ತೊಡಗಿಸಿದ್ದೇನೆಂದು ಹೇಳಿ ಸಣ್ಣಪುಟ್ಟ ಉದ್ಯಮಿಗಳಿಂದ ಸುಮಾರು 88 ಕೋಟಿ ರೂ.ಗಳಷ್ಟು ಹಣ ವಸೂಲು ಮಾಡಿದ್ದಾರೆ ಎಂಬ ವಿಷಯವೂ ಪೊಲೀಸರಿಗೆ ತಿಳಿದಿದೆ.

ಮನೆಯನ್ನೂ ಮಾರಿದ್ದಾರೆ: ತಾನು ಆರಂಭಿಸಿದ್ದ ಎಲ್ಲಾ ಬಿಸಿನೆಸ್‍ಗಳೂ ಕೈಹತ್ತದ ಕಾರಣ ಉಂಟಾದ ನಷ್ಠ ನಿರ್ವಹಿಸಲು ಓಂಪ್ರಕಾಶ್ ಮೊದಲು ಮೈಸೂರಿನ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದೆದುರಿನಲ್ಲಿ ನಡೆಯುತ್ತಿದ್ದ ಡೇಟಾ ಬೇಸ್ ಸಾಫ್ಟ್‍ವೇರ್ ಕಂಪನಿಯನ್ನು ದುಬೈ ಮೂಲಕ ಇಂಜಿನಿಯರ್‍ರೊಬ್ಬರಿಗೆ ಮಾರಿ ಬಂದ ಹಣದಲ್ಲಿ ಸಿಬ್ಬಂದಿ ಬಾಕಿ ಸಂಬಳ ಹಾಗೂ ತೀವ್ರ ಒತ್ತಡ ಹೇರುತ್ತಿದ್ದ ವ್ಯಕ್ತಿಗಳ ಸಾಲ ತೀರಿಸಿದ್ದರಂತೆ.

ಕಡೆಗೆ ಸಾಲಗಾರರ ಕಾಟ ತಡೆಯಲಾರದೆ, ಮೈಸೂರಿನ ದಟ್ಟಗಳ್ಳಿಯ ಗ್ರಾವಿಟಿ ಲೈನ್‍ನಲ್ಲಿ 30×40 ಅಡಿ ವಿಸ್ತೀಣದ ಡೊಪ್ಲೆಕ್ಸ್ ಮನೆಯನ್ನೂ ಒಂದೂವರೆ ತಿಂಗಳ ಹಿಂದೆ ಮಂಡ್ಯ ನಗರದ ನಂದೀಶ ಎಂಬುವರಿಗೆ ಮಾರಾಟ ಮಾಡಿ ಮನೆ ಖಾಲಿ ಮಾಡಲು ಸಮಯಾವಕಾಶ ಪಡೆದಿದ್ದ ಓಂಪ್ರಕಾಶ್‍ಗೆ ನಂದೀಶ ಸಹ ಖಾಲಿ ಮಾಡುವಂತೆ ಒತ್ತಡ ಹೇರುತ್ತಿದ್ದ ಎಂದೂ ವಿಚಾರಣೆಯಿಂದ ತಿಳಿದು ಬಂದಿದೆ.

ಕೇವಲ 48,000 ರೂ: ಮೈಸೂರಿನ ಹೆಚ್‍ಡಿಎಫ್‍ಸಿ, ಕೆನರಾ ಹಾಗೂ ಎಸ್‍ಬಿಐ ಬ್ಯಾಂಕ್‍ಗಳ ಓಂಪ್ರಕಾಶ್ ಅವರ ಖಾತೆಗಳಲ್ಲಿ ಒಟ್ಟು ಕೇವಲ 48,000 ರೂ. ಬ್ಯಾಲನ್ಸ್ ಇದೆ ಎಂಬುದು ತನಿಖಾಧಿಕಾರಿಗಳು ಪರಿಶೀಲನೆ ನಡೆಸಿದಾಗ ತಿಳಿದು ಬಂದಿದೆ. ಅಮಾಯಕರಿಂದ ಪಡೆದಿದ್ದ ಹಣವನ್ನೆಲ್ಲಾ ಓಂಪ್ರಕಾಶ್ ಉಳಿಸದೆ ಐಷಾ ರಾಮಿ ಜೀವನಕ್ಕಾಗಿ ಮನಸೋ ಇಚ್ಛೆ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.

Translate »