ಪೊನ್ನಂಪೇಟೆ ತಾಲೂಕು ರಚನೆ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರಿಗೆ ಮನವಿ
ಕೊಡಗು

ಪೊನ್ನಂಪೇಟೆ ತಾಲೂಕು ರಚನೆ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರಿಗೆ ಮನವಿ

February 21, 2019

ಪೊನ್ನಂಪೇಟೆ: ಇಲ್ಲಿನ ನಾಗರಿಕ ವೇದಿಕೆಯ ಪದಾಧಿಕಾರಿಗಳು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಪೊನ್ನಂಪೇಟೆ ತಾಲೂಕು ರಚನೆ ಸಂಬಂಧ ಸಹಕಾರ ನೀಡುವಂತೆ ಮನವಿ ಮಾಡಿದರು.

ಬೆಂಗಳೂರಿನ ದೇವೇಗೌಡರ ನಿವಾಸದಲ್ಲಿ ಮಾಜಿ ಪ್ರಧಾನಿಯನ್ನು ಭೇಟಿ ಮಾಡಿದ ವೇದಿಕೆಯ ಪದಾಧಿಕಾರಿಗಳು. ಕಳೆದ 10 ವರ್ಷಗಳಿಂದ ಪೊನ್ನಂಪೇಟೆ ತಾಲೂಕು ರಚನೆಗೆ ಬೇಕಾದ ಎಲ್ಲಾ ಸೌಕರ್ಯಗಳು ಪೊನ್ನಂಪೇಟೆಯಲ್ಲಿದ್ದು, ನ್ಯಾಯಾಲಯ, ನೋಂದಣಾಧಿಕಾರಿ ಕಚೇರಿ, ನಾಡ ಕಚೇರಿ ಸೇರಿದಂತೆ ವಿವಿಧ ಇಲಾಖಾ ಕಚೇರಿಗಳು ಇಲ್ಲಿವೆ. ಆದ್ದರಿಂದ ಪೊನ್ನಂಪೇಟೆ ತಾಲೂಕು ರಚನೆಗೆ ಘೋಷಿಸಲು ಶಿಫಾರಸ್ಸು ಮಾಡುವಂತೆ ಮನವಿ ಮಾಡಿದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮಿನಿ ಪೆÇನ್ನಪ್ಪ ಮಾತನಾಡಿ, ಪೆÇನ್ನಂಪೇಟೆ ಸ್ವತಂತ್ರ ಪೂರ್ವ ಹಾಗೂ ಸ್ವತಂತ್ರ ನಂತರವೂ ಕಿಗ್ಗಟ್ ನಾಡು ತಾಲೂಕು ಆಗಿದ್ದರ ಬಗ್ಗೆ ಮಾಹಿತಿ ನೀಡಿ, ಇದೀಗ ಕೊಡಗು ಕಳೆದ ವರ್ಷದ ಅತಿವೃಷ್ಠಿಯಿಂದ ಜನತೆ ಅಪಾರ ಆಸ್ತಿ- ಪಾಸ್ತಿ ನಷ್ಟ ಅನುಭವಿಸುತ್ತಿದ್ದು, ಸರಕಾರದ ಸೌಲಭ್ಯವನ್ನು ಪಡೆಯಲು ಸೂಕ್ತ ದಾಖಲಾತಿಗಳನ್ನು ಪಡೆಯುವಲ್ಲಿ ಪರಿತಪಿಸುತ್ತಿದ್ದಾರೆ ಎಂದು ವಿವರಿಸಿದರು.

ತಮ್ಮ ನಿವಾಸಕ್ಕೆ ಆಗಮಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಲೋಕೋಪಯೋಗಿ ಇಲಾಖಾ ಮಂತ್ರಿ ರೇವಣ್ಣ ಹಾಗೂ ನೀರಾವರಿ ಮಂತ್ರಿ ಪುಟ್ಟರಾಜು ರವರೊಂದಿಗೆ ದೇವೆಗೌಡರು ಈ ಕುರಿತು ಚರ್ಚಿಸಿದರು. ನಂತರ ಮುಖ್ಯಮಂತ್ರಿಗಳು ತಾವು ಕೆಲವೇ ದಿನಗಳಲ್ಲಿ ಕೊಡಗಿಗೆ ಭೇಟಿ ನೀಡುತ್ತಿದ್ದು, ಕೊಡಗಿನ ನೂತನ 2 ತಾಲೂಕು ಗಳ ಬಗ್ಗೆ ತಾವು ಸಕಾರಾತ್ಮವಾಗಿ ಸ್ಪಂಧಿಸುವ ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಾಗರಿಕ ವೇದಿಕೆಯ ಅಧ್ಯಕ್ಷ ಪೆÇಕ್ಕಳಚಂಡ ಪೂಣಚ್ಚ, ಹಿರಿಯ ಸದಸ್ಯರುಗಳಾದ ಚೆಪ್ಪುಡಿರ ಪೆÇನ್ನಪ್ಪ, ಮೂಕಳೇರ ಕುಶಾಲಪ್ಪ, ಎರ್ಮು ಹಾಜಿ, ಕಾನೂನು ಸಲಹೆಗಾರ ವಕೀಲ ಮತ್ರಂಡ ಅಪ್ಪಚ್ಚು ಇತರರು ಉಪಸ್ಥಿತರಿದ್ದರು.

Translate »