ವಿರಾಜಪೇಟೆ: ದೇಶ ವಿದೇಶಗಳಲ್ಲಿ ಕೊಡಗಿನ ಹೆಣ್ಣುಮಕ್ಕಳು ಕ್ರೀಡೆ ಸೇರಿದಂತೆ ವಿವಿಧ ರಂಗದಲ್ಲಿ ಸಾಧನೆ ಮಾಡಿ ಉನ್ನತ ಸ್ಥಾನಕ್ಕೆ ಏರಿದ್ದಾರೆ. ಹಿಂದಿ ನಿಂದಲೂ ಕೊಡಗಿನಲ್ಲಿ ಹೆಣ್ಣು ಮಕ್ಕಳಿಗೆ ಮಹತ್ವದ ಸ್ಥಾನ ನೀಡಿದ ಹೆಗ್ಗಳಿಕೆ ಕೊಡವ ಜನಾಂಗದ್ದಾಗಿದೆ ಎಂದು ಅಖಿಲ ಕೊಡವ ಸಮಾಜದ ಪೊಮ್ಮಕ್ಕಡ ಪರಿ ಷತ್ ಅಧ್ಯಕ್ಷೆ ಬಾಚರಣೆಯಂಡ ರಾಣು ಅಪ್ಪಣ್ಣ ಹೇಳಿದರು.
ವಿರಾಜಪೇಟೆ ಅಖಿಲ ಕೊಡವ ಸಮಾಜದ ಸಭಾಂ ಗಣದಲ್ಲಿ ಆಯೋಜಿಸಲಾಗಿದ್ದ ‘ನಮ್ಮ ಸಂಸ್ಕøತಿ ಹಾಗೂ ಹೆಣ್ಣು ಮಕ್ಕಳು’ ಎಂಬ ವಿಚಾರ ಸಂಕಿರಣ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ರಾಣು ಅಪ್ಪಣ್ಣ, ಹಿಂದಿನ ಕಾಲದಿಂದಲೂ ಕೊಡಗಿನ ಮಾತೃ ಭಾಷೆ ಎಂಬ ಪದದ ಮಹತ್ವನ್ನು ತಾಯಂದಿಯರು ಅರಿತು ಕೊಂಡು ಭಾಷೆ, ಸಂಸ್ಕøತಿ, ಅಚಾರ-ವಿಚಾರ, ಪದ್ಧತಿ ಪರಂಪರೆಯನ್ನು ಉಳಿಸುವಂತಾಗಬೇಕು. ವಿಶ್ವದ ಭಾಷೆಯಲ್ಲಿ ಕೊಡವ ಭಾಷೆಯೂ ಒಂದು ಎಂದರು. ಅಖಿಲ ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿಕುಟ್ಟಿರ ಸುಬ್ರಮಣಿ ಅತಿಥಿ ಗಳಾಗಿ ಆಗಮಿಸಿ ಮಾತನಾಡಿದರು. ಚೇಂದೀರ ನಿರ್ಮಲ ಬೋಪಣ್ಣ ಅವರು ನಮ್ಮ ಸಂಸ್ಕøತಿ ಹಾಗೂ ಹೆಣ್ಣು ಮಕ್ಕಳು ಎಂಬ ಪ್ರಬಂಧ ಮಂಡಿಸಿದರು. ಬಳಿಕ ಸಮಾ ರಂಭದಲ್ಲಿ ದ್ವಿಭಾಷ ಸಾಹಿತಿ ಮಂಡೇಪಂಡ ಗೀತಾ ಮಂದಣ್ಣ ಹಾಗೂ ಪೊನ್ನಂಪೇಟೆಯ ನಿನಾದ ನೃತ್ಯ ಮತ್ತು ಸಂಗೀತ ಸಂಸ್ಥೆಯ ಚೇಂದಿರ ನಿರ್ಮಲ ಬೋಪಣ್ಣ ಅವರನ್ನು ಗೌರವಿಸಲಾಯಿತು.