ಏ.24, ರಾಷ್ಟ್ರ ಮಟ್ಟದ ಕಿರು ಚಲನಚಿತ್ರೋತ್ಸವ
ಮೈಸೂರು

ಏ.24, ರಾಷ್ಟ್ರ ಮಟ್ಟದ ಕಿರು ಚಲನಚಿತ್ರೋತ್ಸವ

April 21, 2019

ಮೈಸೂರು: ಮೈಸೂ ರಿನ ಬೋಗಾದಿಯ ಅಮೃತ ವಿದ್ಯಾ ಪೀಠಂನ ದೃಶ್ಯ ಸಂವಹನ ವಿಭಾಗದ ವತಿಯಿಂದ ಏ.24ರಂದು ರಾಷ್ಟ್ರಮಟ್ಟದ ಕಿರುಚಲನಚಿತ್ರೋತ್ಸವ `ಸಿನೆರಮಾ’ ಏರ್ಪಡಿಸಲಾಗಿದೆ ಎಂದು ವಿಭಾಗದ ಮುಖ್ಯಸ್ಥೆ ರಮ್ಯ ಕೆ.ಪ್ರಸಾದ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕಾಲೇಜಿನ ಆವರಣ ದಲ್ಲಿ ನಡೆಯಲಿರುವ ಒಂದು ದಿನದ ರಾಷ್ಟ್ರ ಮಟ್ಟದ ಕಿರು ಚಲನಚಿತ್ರೋತ್ಸವಕ್ಕೆ ಕಾಲೇ ಜಿನ ಸುಧಾಮಣಿ ಸಭಾಂಗಣದಲ್ಲಿ ಅಂದು ಬೆಳಿಗ್ಗೆ 9.30ಕ್ಕೆ ಕನ್ನಡ ಚಿತ್ರರಂಗದ ನಿರ್ದೇ ಶಕ ಬಿ.ಸುರೇಶ ಚಾಲನೆ ನೀಡಲಿದ್ದಾರೆ. ಬಳಿಕ ಬಿ.ಸುರೇಶ್ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದರು.

ಕಿರು ಚಲನಚಿತ್ರೋತ್ಸವಕ್ಕಾಗಿ ದೇಶದ ವಿವಿಧ ಭಾಗಗಳ ಒಟ್ಟು 54 ತಂಡಗಳು ನೋಂದಣಿ ಮಾಡಿಕೊಂಡು ಕಿರುಚಿತ್ರ ನಿರ್ಮಿಸಿ ಸಲ್ಲಿಕೆ ಮಾಡಿವೆ. ಪ್ರತಿ ಚಿತ್ರಕ್ಕೆ ಗರಿಷ್ಠ 20 ನಿಮಿಷದೊಳಗೆ ಅವಧಿ ನಿಗದಿ ಗೊಳಿಸಲಾಗಿತ್ತು. ಆಂಗ್ಲ ಭಾಷೆ ಹೊರತಾಗಿ ಸ್ಥಳೀಯ ಭಾಷಾ ಚಿತ್ರಗಳಿಗೆ ಆಂಗ್ಲಾ ಉಪ ಶೀರ್ಷಿಕೆಗಳನ್ನು ಕಡ್ಡಾಯಗೊಳಿಸಲಾಗಿತ್ತು. ಏ.24ರಂದು ನಡೆಯಲಿರುವ ಕಿರುಚಲನ ಚಿತ್ರೋತ್ಸವದಲ್ಲಿ 3 ಅತ್ಯುತ್ತಮ ಚಿತ್ರಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀತ ಬಹು ಮಾನ ನೀಡಲಾಗುವುದು. ಅಲ್ಲದೆ, 10 ಉತ್ತಮ ಚಿತ್ರಗಳನ್ನು ಅಂದು ಪ್ರದರ್ಶಿಸ ಲಾಗುತ್ತಿದೆ ಎಂದು ವಿವರಿಸಿದರು.

ಅಂದು ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಅತಿಥಿ ಯಾಗಿ ನಟಿ ಐಂದ್ರಿತಾ ರೇ ಪಾಲ್ಗೊಳ್ಳು ತ್ತಿದ್ದು, ಇದೇ ವೇಳೆ ಉತ್ತಮ ಚಿತ್ರ ನಿರ್ಮಾಣ ತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡ ಲಾಗುವುದು. ಇದರೊಂದಿಗೆ ಅತ್ಯುತ್ತಮ ನಿರ್ದೇಶನ, ಛಾಯಾಗ್ರಾಹಣ, ಸಂಕಲ ಹಾಗೂ ಅಭಿನಯಕ್ಕೂ ಪ್ರಶಸ್ತಿ ನೀಡ ಲಾಗುವುದು. ವಿಭಾಗದಿಂದ ಹಮ್ಮಿಕೊಂ ಡಿದ್ದ ರಾಷ್ಟ್ರಮಟ್ಟದ ಫೋಟೋಗ್ರಫಿ ಸ್ಪರ್ಧೆ ವಿಜೇತರಿಗೂ ಇದೇ ವೇಳೆ ಪ್ರಶಸ್ತಿ ನೀಡ ಲಾಗುವುದು. ಜೊತೆಗೆ ಫೋಟೋಗ್ರಫಿ ಹಾಗೂ ವಿಡೀಯೋಗ್ರಫಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದ್ದು, ಆಸಕ್ತರು ಮೊ.ಸಂ. 8848394715 ಅನ್ನು ಸಂಪ ರ್ಕಿಬಹುದು ಎಂದರು.

ಎನ್‍ಐಆರ್‍ಎಫ್‍ನಲ್ಲಿ 8ನೇ ಸ್ಥಾನ: ಕೇಂದ್ರ ಸರ್ಕಾರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಏ.8ರಂದು ಪ್ರಕಟಿಸಿರುವ 2019ನೇ ಸಾಲಿನ ನ್ಯಾಷನಲ್ ಇನ್ಸ್‍ಟಿ ಟ್ಯೂಷನಲ್ ರ್ಯಾಂಕಿಂಗ್ ಫ್ರೇಮ್ ವರ್ಕ್ ನಲ್ಲಿ (ಎನ್‍ಐಆರ್‍ಎಫ್) `ಅಮೃತ ವಿಶ್ವ ವಿದ್ಯಾಪೀಠಂ’ ವಿಶ್ವವಿದ್ಯಾನಿಲಯಗಳ ವಿಭಾಗ ದಲ್ಲಿ 8ನೇ ಸ್ಥಾನ ಗಳಿಸಿದೆ ಎಂದು ಇದೇ ವೇಳೆ ತಿಳಿಸಿದರು. ಕಾಲೇಜಿನ ಉಪ ನ್ಯಾಸಕರಾದ ದರ್ಶನ್ ಮಂಜುನಾಥ್, ಸೂರಜ್ ಶಂಕರ್ ಗೋಷ್ಠಿಯಲ್ಲಿದ್ದರು.

Translate »