ಅಂಬಾರಿ ಆನೆ ಅರ್ಜುನನಿಗೆ ಭಾರ ಹೊರುವ ತಾಲೀಮು ಆರಂಭ
ಮೈಸೂರು

ಅಂಬಾರಿ ಆನೆ ಅರ್ಜುನನಿಗೆ ಭಾರ ಹೊರುವ ತಾಲೀಮು ಆರಂಭ

September 7, 2019

ಮೈಸೂರು, ಸೆ.6(ಎಂಟಿವೈ)- ದಸರಾ ಗಜಪಡೆ ನಾಯಕ ಅರ್ಜುನನಿಗೆ ಶುಕ್ರ ವಾರದಿಂದ ಭಾರ ಹೊರುವ ತಾಲೀಮು ಆರಂಭಿಸಲಾಗಿದ್ದು, ಮೊದಲ ದಿನ 350 ಕೆಜಿ ತೂಕದ ಮರಳಿನ ಮೂಟೆ ಹೊತ್ತ ಅರ್ಜುನ ನಿರಾಯಾಸವಾಗಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನ ತಲುಪಿ ತನ್ನ ಸಾಮಥ್ರ್ಯ ವನ್ನು ಮೆರೆದಿದ್ದಾನೆ. ಈ ಸಾಲಿನ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಗಜಪಡೆಯ ಮೊದಲ ತಂಡ ಆ.22ರಂದು ಮೈಸೂರಿನ ಅಶೋಕಪುರಂ ಅರಣ್ಯ ಭವನಕ್ಕೆ ಆಗಮಿ ಸಿತ್ತು. ಆ.26ರಂದು ಅರಮನೆ ಅಂಗಳ ಪ್ರವೇ ಶಿಸಿದ್ದ ಅರ್ಜುನ ನೇತೃತ್ವದ ಆರು ಆನೆಗಳ ಶಕ್ತಿ ವೃದ್ಧಿಸಲು ಪೌಷ್ಟಿಕ ಆಹಾರ ನೀಡಲಾ ಗುತ್ತಿದೆ. ಆ.27ರಿಂದ ತಾಲೀಮು ಆರಂಭಿ ಸಲಾಗಿತ್ತು. ಜಂಬೂಸವಾರಿ ಕೇವಲ 32 ದಿನ ಇರುವ ಹಿನ್ನೆಲೆಯಲ್ಲಿ ಇಂದಿನಿಂದ ಭಾರ ಹೊರುವ ತಾಲೀಮಿಗೆ ಚಾಲನೆ ನೀಡಲಾಗಿದೆ.

ಇಂದು ಬೆಳಿಗ್ಗೆ ಅರಮನೆ ಆವರಣದಲ್ಲಿ ರುವ ಶ್ರೀ ಕೋಡಿ ಸೋಮೇಶ್ವರ ದೇವಾಲ ಯಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಆನೆ ಮೇಲೆ ಇಡುವ ಗಾದಿ ಮತ್ತು ನಮ್ದಗೂ ಪೂಜೆ ಸಲ್ಲಿಸಿ ಅರ್ಜುನನ ಮೇಲಿಟ್ಟು ಕಟ್ಟಲಾಯಿತು. ಬಳಿಕ ತೊಟ್ಟಿಲು ಇಟ್ಟು ಅದರೊಳಗೆ ಆರು ಮರಳಿನ ಮೂಟೆ ಇಡಲಾಯಿತು. ಬೆಳಿಗ್ಗೆ 8.10ಕ್ಕೆ ಅರಮನೆಯಿಂದ ಹೊರಟ ಅರ್ಜುನ ನೇತೃತ್ವದ ಗಜಪಡೆ ಕೆ.ಆರ್.ವೃತ್ತದ ಮೂಲಕ ಸಯ್ಯಾಜಿರಾವ್ ರಸ್ತೆಯಲ್ಲಿ ಸಾಗಿತು. ಆಯು ರ್ವೇದ ವೃತ್ತ ಹಾಗೂ ಹಳೆ ಆರ್‍ಎಂಸಿ ವೃತ್ತ ದಲ್ಲಿ ಐದು ನಿಮಿಷ ವಿಶ್ರಾಂತಿ ನೀಡಲಾಯಿತು. ಬಳಿಕ ಹೈವೆ ವೃತ್ತದ ಮೂಲಕ ಬೆಳಿಗ್ಗೆ 9.30ಕ್ಕೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನ ತಲುಪಿತು. ಮೈದಾನದಲ್ಲಿ ಅರ್ಜುನನ ಮೇಲಿ ಡಲಾಗಿದ್ದ ಮರಳು ಮೂಟೆಯನ್ನು ಕೆಳಗಿಳಿಸಿ ಕೆಲಕಾಲ ವಿಶ್ರಾಂತಿ ನೀಡಲಾಯಿತು. ನಂತರ ಕೇವಲ ತೊಟ್ಟಿಲಿನೊಂದಿಗೆ ಮತ್ತೆ ಅರಮನೆಗೆ ಅರ್ಜುನನನ್ನು ಕರೆತರಲಾಯಿತು. ಈ ಸಂದರ್ಭ ದಲ್ಲಿ ಡಿಸಿಎಫ್ ಅಲೆಗ್ಸಾಂಡರ್ ಹಾಗೂ ಇನ್ನಿ ತರರು ಉಪಸ್ಥಿತರಿದ್ದರು.

ಹಂತಹಂತವಾಗಿ ಭಾರ ಹೆಚ್ಚಳ: ಪಶುವೈದ್ಯ ಡಾ.ಡಿ.ಎನ್. ನಾಗರಾಜು ಪತ್ರಕರ್ತರೊಂದಿಗೆ ಮಾತನಾಡಿ, ಬಾರ ಹೊರುವ ತಾಲೀಮು ಆರಂಭಿಸ ಲಾಗಿದೆ. ಮೊದಲ ದಿನವಾದ ಇಂದು 350 ಕೆಜಿ ತೂಕದ ಆರು ಮರಳಿನ ಮೂಟೆ ಇಟ್ಟು ತಾಲೀಮು ನಡೆಸಲಾಗಿದೆ. ಹಂತಹಂತವಾಗಿ ಬಾರ ಹೆಚ್ಚಿಸಲಾಗುತ್ತದೆ. ಅಲ್ಲದೆ ಮುಂದಿನ ವಾರದ ನಂತರ ಮರದ ಅಂಬಾರಿಯನ್ನು ಕಟ್ಟಿ ತಾಲೀಮು ನಡೆಸಲಾಗುತ್ತದೆ. ಇಂದು ಬಾರ ಹೊತ್ತ ಅರ್ಜುನ ನಿರಾಯಾಸವಾಗಿ ಬನ್ನಿಮಂಟಪದ ಪಂಜಿನ ಕವಾಯತ್ ಮೈದಾನ ತಲುಪಿದ್ದಾನೆ. ಅರ್ಜುನನೊಂದಿಗೆ ಅಭಿಮನ್ಯು ವಿಗೂ ಭಾರ ಹೊರುವ ತಾಲೀಮು ನೀಡಲಾಗುತ್ತದೆ ಎಂದರು.

Translate »