ಮೈಸೂರು, ಸೆ. 6(ಆರ್‍ಕೆ)- ವಾಹನ ಸವಾರರು, ಚಾಲಕ ಹಾಗೂ ಮಾಲೀಕರು ತಿಳಿದೋ-ತಿಳಿಯದೆಯೋ ಸಂಚಾರ ನಿಯಮ ಉಲ್ಲಂಘಿಸಿದರೆ ಹತ್ತು ಪಟ್ಟು ದುಬಾರಿ ದಂಡ ತೆರಬೇಕಾ ಗುತ್ತದೆ. ಆದ್ದರಿಂದ ಸಾರ್ವಜನಿಕರು ಕಡ್ಡಾಯವಾಗಿ ಸಂಚಾರ ನಿಯಮವನ್ನು ಪಾಲಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಮೈಸೂರಿನ ನಜರ್‍ಬಾದ್‍ನಲ್ಲಿರುವ ತಮ್ಮ ಕಚೇರಿ ಸಭಾಂಗಣ ದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸಂಚಾರ ನಿಯಮ ಉಲ್ಲಂಘನೆ ಪರಿಷ್ಕøತ ದಂಡ ಆದೇಶ ಮೈಸೂ ರಿನಲ್ಲಿ ಶನಿವಾರ(ಸೆ.7) ದಿಂದ ಜಾರಿಗೆ ಬರಲಿದೆ ಎಂದರು.
ಭಾರತ ಸರ್ಕಾರವು ಮೋಟಾರು ವಾಹನ ಕಾಯ್ದೆ ಅಧಿನಿಯಮ, 1988ಕ್ಕೆ ತಿದ್ದುಪಡಿ ಮಾಡಿದ್ದು, ಅದರಂತೆ ಸಂಚಾರ ನಿಯಮ ಉಲ್ಲಂಘನೆಗೆ ಹಾಲಿ ಇದ್ದ ದರವನ್ನು ಹೆಚ್ಚಿಸಿ ಆದೇಶ ಹೊರಡಿಸಿ ರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಪರಿಷ್ಕøತ ದಂಡ ಮೊತ್ತ ವನ್ನು ಜಾರಿಗೆ ತರುವಂತೆ ಸೆಪ್ಟೆಂಬರ್ 3 ರಂದು ಅಧಿ ಸೂಚನೆ ಹೊರಡಿಸಿದೆ ಎಂದು ಪೊಲೀಸ್ ಆಯು ಕ್ತರು ತಿಳಿಸಿದರು. ಭ್ರಷ್ಟಾಚಾರ, ಲಂಚಗುಳಿತನ ತಪ್ಪಿಸುವ ದೃಷ್ಟಿಯಿಂದ ವಾಹನ ಸವಾರರನ್ನು ತಪಾಸಣೆ ಮಾಡುವ ಸಂಚಾರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಳು ಬಾಡಿವೋರ್ನ್ ಕ್ಯಾಮರಾ ಧರಿಸಬೇಕೆಂದು ಸೂಚಿಸಲಾಗಿದೆ. ಸಾರ್ವಜನಿಕರು ನಿಯಮ ಉಲ್ಲಂಘಿಸಿ ಸಿಕ್ಕಿ ಕೊಂಡಲ್ಲಿ ಪರಿಷ್ಕøತ ದಂಡ ಪಾವತಿಸಿ ಅಧಿಕೃತ ರಶೀದಿ ಪಡೆಯಬೇಕು. ರಶೀದಿ ಇಲ್ಲದೆಯೇ ಪೊಲೀಸರಿಗೆ ಹಣ ಕೊಟ್ಟು ಸುಮ್ಮನಾದರೆ ಕ್ಯಾಮರಾದಲ್ಲಿ ರೆಕಾರ್ಡ್ ಆಗುತ್ತದೆ ಎಂಬ ಅಂಶವನ್ನು ಸಾರ್ವಜನಿಕರು ತಿಳಿದುಕೊಳ್ಳಬೇಕು ಎಂದು ಬಾಲಕೃಷ್ಣ ತಿಳಿಸಿದರು. ಪಾಸ್ ಅಥವಾ ಟಿಕೆಟ್ ಇಲ್ಲದೆ ಪ್ರಯಾಣ ಅಥವಾ ಟಿಕೆಟ್ ನೀಡದೆ ಬಸ್ ಕಂಡಕ್ಟರ್ ಲೋಪವೆಸಗಿದರೆ 500 ರೂ ದಂಡ, ಆದೇಶ ಪಾಲನೆಗೆ ಅಸಹಕಾರ ಅಥವಾ ಮಾಹಿತಿ ನೀಡಲು ನಿರಾಕರಿಸಿದರೆ 2,000 ರೂ. ದಂಡ ಅಥವಾ 1 ತಿಂಗಳ ಜೈಲು ಶಿಕ್ಷೆ, ಡಿಎಲ್ ಇಲ್ಲದವರಿಗೆ ಅಥವಾ ಅಪ್ರಾಪ್ತರಿಗೆ ವಾಹನ ಓಡಿಸಲು ಕೊಟ್ಟರೆ 5,000 ರೂ. ದಂಡ ಅಥವಾ 3 ತಿಂಗಳ ಜೈಲು ಶಿಕ್ಷೆ, ಡಿಎಲ್ ಅನರ್ಹಗೊಳಿಸಿದ ಅಥವಾ ರದ್ದುಗೊಳಿಸಿದ ಅವಧಿಯಲ್ಲಿ ವಾಹನ ಚಾಲನೆ ಮಾಡಿದಲ್ಲಿ 10,000 ರೂ. ದಂಡ ಅಥವಾ 3 ತಿಂಗಳ ಜೈಲು ಶಿಕ್ಷೆ, ಸರ್ಕಾರ ನಿಗದಿಗೊಳಿಸಿದ್ದಕ್ಕೆ ವ್ಯತಿರಿಕ್ತವಾಗಿ ವಾಹನ ಮಾದರಿ ಬದಲಾವಣೆ ಮಾಡಿದರೆ ಪ್ರತೀ ವಾಹನಕ್ಕೆ 1 ಲಕ್ಷ ರೂ. ದಂಡ 3 ತಿಂಗಳು ಜೈಲು ಶಿಕ್ಷೆ ವಿಧಿಸಲಾಗುವುದು.
ಅತಿವೇಗದ ಚಾಲನೆಗೆ 2 ರಿಂದ 4 ಸಾವಿರ ರೂ., ವಾಹನ ಚಾಲನೆ ವೇಳೆ ಮೊಬೈಲ್ ಬಳಕೆಗೆ 5000 ರೂ., ಅಥವಾ 6 ತಿಂಗಳ ಜೈಲು ಶಿಕ್ಷೆ, 2 ಮತ್ತು ಹೆಚ್ಚು ಸಲ ತಪ್ಪು ಮಾಡಿದರೆ 10,000 ರೂ. ದಂಡ ಹಾಗೂ 2 ವರ್ಷ ಜೈಲು ಶಿಕ್ಷೆ, ದೈಹಿಕ ಹಾಗೂ ಮಾನಸಿಕ ಅಸಮರ್ಥರು ವಾಹನ ಚಾಲನೆ ಮಾಡಿದರೆ 1,000 ರೂ. ನಂತರದ ತಪ್ಪುಗಳಿಗೆ 2,000 ರೂ. ದಂಡ ತೆರಬೇಕಾಗುತ್ತದೆ.
ಸಾರ್ವಜನಿಕ ರಸ್ತೆಗಳಲ್ಲಿ ರೇಸಿಂಗ್, ವೇಗ ಪ್ರಯೋಗ ಮಾಡಿದರೆ 5,000 ರೂ. ಎರಡನೇ ಸಲಕ್ಕೆ 10,000 ದಂಡ, ಎಫ್‍ಸಿ ಇಲ್ಲದ, ಹೊಗೆ ನಿಯಂತ್ರಣ ಪ್ರಮಾಣಪತ್ರ ಇಲ್ಲದ ವಾಹನಗಳಿಗೆ 10,000 ರೂ. ದಂಡ, ನೋಂದಣಿ ಮಾಡಿಸದ ವಾಹನ ಚಾಲನೆ ಮಾಡಿದರೆ 5,000 ರೂ. ದಂಡ, 2ನೇ ಸಲಕ್ಕೆ 10,000 ರೂ. ದಂಡ ಅಥವಾ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು. ಪರ್ಮಿಟ್ ಇಲ್ಲದೆ ಗೂಡ್ಸ್ ವಾಹನ ಓಡಿಸಿದರೆ 10,000 ರೂ. ದಂಡ, ನಿಗದಿಗಿಂತ ಹೆಚ್ಚು ಭಾರ ಸಾಗಣೆ ಮಾಡಿದರೆ ಒಮ್ಮೆಗೆ 20,000 ರೂ., ಅದೇ ದಿನ ನಂತರದ ಉಲ್ಲಂಘನೆಗಳಿಗೆ ತಲಾ 2,000 ರೂ. ದಂಡ, ನಿಗದಿ ಮೀರಿ ಪ್ರಯಾಣಿಕರ ಸಾಗಣೆಗೆ ಪ್ರತಿ ಪ್ರಯಾಣಿಕರಿಗೆ 200 ರೂ. ದಂಡ, ಸೀಟ್‍ಬೆಲ್ಟ್ ಧರಿಸದಿದ್ದರೆ 1,000 ರೂ., ಮೋಟಾರ್ ವಾಹನದಲ್ಲಿ ಸರಕು ಸಾಗಣೆ ಮಾಡಿದರೆ 1,000 ರೂ., ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡಿದರೆ 1,000 ರೂ, ಆಂಬ್ಯುಲೆನ್ಸ್, ಅಗ್ನಿಶಾಮಕ ದಳ ವಾಹನಗಳಿಗೆ ದಾರಿ ಬಿಡದಿದ್ದರೆ 10,000 ರೂ. ದಂಡ ತೆರಬೇಕಾಗುತ್ತದೆ.
ಕುಡಿದು ವಾಹನ ಚಾಲನೆ ಮಾಡಿದರೆ 10,000 ರೂ, ನಿಶ್ಯಬ್ದ ವಲಯದಲ್ಲಿ ಹಾರ್ನ್ ಮಾಡಿದರೆ 1000 ರೂ, 2ನೇ ಸಲಕ್ಕೆ 2000 ರೂ., ವಿಮೆ ಇಲ್ಲದೆ ವಾಹನ ಚಾಲನೆಗೆ 2,000 ರೂ., ಎರಡು ಮತ್ತು ನಂತರದ ತಪ್ಪಿಗೆ ತಲಾ 4,000 ರೂ., ಅಥವಾ 3 ತಿಂಗಳ ಜೈಲು ಶಿಕ್ಷೆ ಸೇರಿದಂತೆ ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದರೆ ವಾಹನ ಸವಾರರು ಭಾರೀ ಮೊತ್ತದ ದಂಡ ಪಾವತಿಸಬೇಕಾಗುತ್ತದೆ.
ಡಿಸಿಪಿಗಳಾದ ಎಂ. ಮುತ್ತುರಾಜ್, ಬಿ.ಟಿ ಕವಿತಾ, ಸಂಚಾರ ವಿಭಾಗದ ಎಸಿಪಿ ಜಿ.ಎನ್. ಮೋಹನ್, ಇನ್‍ಸ್ಪೆಕ್ಟರ್‍ಗಳಾದ ಜಗದೀಶ, ಬಿ.ಜಿ.ಪ್ರಕಾಶ, ಸೂರಜ್, ಅರುಣ್‍ಕುಮಾರಿ, ಯೋಗೇಶ್ ಎ.ಮಲ್ಲೇಶ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.