`ಆರೋಗ್ಯ ಕರ್ನಾಟಕ’ ಸಾರ್ವತ್ರಿಕ ವೈದ್ಯಕೀಯ ಯೋಜನೆ ಟಿ.ನರಸೀಪರದಲ್ಲಿ ಪ್ರಾಯೋಗಿಕ ಜಾರಿ
ಮೈಸೂರು

`ಆರೋಗ್ಯ ಕರ್ನಾಟಕ’ ಸಾರ್ವತ್ರಿಕ ವೈದ್ಯಕೀಯ ಯೋಜನೆ ಟಿ.ನರಸೀಪರದಲ್ಲಿ ಪ್ರಾಯೋಗಿಕ ಜಾರಿ

June 15, 2018

ಮೈಸೂರು:  ಸಹಕಾರ ಸಂಘ ಗಳ ಸದಸ್ಯರಿಗೆ ಆರೋಗ್ಯ ಭಾಗ್ಯ ಕಲ್ಪಿಸಿದ `ಯಶಸ್ವಿನಿ ಯೋಜನೆ’ ಸೇರಿದಂತೆ ವಿವಿಧ ವೈದ್ಯಕೀಯ ಸೌಲಭ್ಯ ಯೋಜನೆಗಳನ್ನು ವಿಲೀನಗೊಳಿಸಿ `ಆರೋಗ್ಯ ಕರ್ನಾಟಕ’ ಯೋಜನೆ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿ ನಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ.

ಆರೋಗ್ಯ ಕರ್ನಾಟಕ: ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆ’ಯಡಿ ತಿ.ನರಸೀಪುರ ತಾಲೂಕಿನಲ್ಲಿ ಸುಮಾರು 8 ಸಾವಿರ ಹೆಲ್ತ್ ಕಾರ್ಡ್ ವಿತರಣೆ ಮಾಡ ಲಾಗಿದೆ. ಎಲ್ಲಾ ಜಿಲ್ಲೆಗಳ ಒಂದೊಂದು ತಾಲೂಕಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಅನುಷ್ಠಾನಗೊಳಿ ಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ರಾಜ್ಯಾದ್ಯಂತ ವಿಸ್ತರಿ ಸಲು ರಾಜ್ಯ ಸರ್ಕಾರ ಭರದ ಸಿದ್ಧತೆ ನಡೆಸುತ್ತಿದೆ.
ಸಹಕಾರ ಸಂಘಗಳ ಸದಸ್ಯರಿಗೆ 800ಕ್ಕೂ ಹೆಚ್ಚು ವಿವಿಧ ಶಸ್ತ್ರಚಿಕಿತ್ಸೆಗೆ ನೆರವಾದ `ಯಶಸ್ವಿನಿ ಯೋಜನೆ’ಯೂ ಈ `ಆರೋಗ್ಯ ಕರ್ನಾಟಕ’ದಲ್ಲಿ ವಿಲೀನಗೊಂಡಿದ್ದು, ವಾಜಪೇಯಿ ಆರೋಗ್ಯಶ್ರೀ ಯೋಜನೆ, ರಾಜೀವ್ ಆರೋಗ್ಯ ಭಾಗ್ಯ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ (ಹಿರಿಯ ನಾಗರಿಕರ ಯೋಜನೆ), ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ, ಮುಖ್ಯ ಮಂತ್ರಿ ಸಾಂತ್ವನ ಹರೀಶ್ ಯೋಜನೆ ಹಾಗೂ ಇಂದಿರಾ ಸುರಕ್ಷಾ ಯೋಜನೆ ಸೇರಿದಂತೆ ಎಲ್ಲಾ ಆರೋಗ್ಯ ಸೇವಾ ಯೋಜನೆಗಳನ್ನು `ಆರೋಗ್ಯ ಕರ್ನಾಟಕ’ದಲ್ಲಿ ಒಟ್ಟುಗೂಡಿಸಲಾಗುತ್ತಿದೆ. ಗ್ರಾಮೀಣ ಭಾಗದ ಸಹಕಾರಿ ರೈತರ ಆರೋಗ್ಯ ರಕ್ಷಣೆಗಾಗಿ 2003-04ರಲ್ಲಿ ಸಹ ಕಾರ ಇಲಾಖೆ ಮೂಲಕ ರಾಜ್ಯ ಸರ್ಕಾರ ಜಾರಿಗೊಳಿ ಸಿದ ಯಶಸ್ವಿನಿ ಯೋಜನೆಯು 2014-15ರಲ್ಲಿ ನಗರ ಪ್ರದೇಶಕ್ಕೂ ವಿಸ್ತಾರಗೊಂಡಿತು. ಆ ಮೂಲಕ ಕಾರ್ಯ ನಿರತ ಎಲ್ಲಾ ವಿಧದ ಸಹಕಾರ ಸಂಘಗಳು ಹಾಗೂ ಸಹಕಾರ ಬ್ಯಾಂಕ್‍ಗಳಲ್ಲಿ ಸದಸ್ಯರಾದವರು ಹಾಗೂ ಅವರ ಕುಟುಂಬವರಿಗೆ ಆರೋಗ್ಯ ಸೇವೆ ಒದಗಿಸ ಲಾಗಿತ್ತು. ಯಶಸ್ವಿನಿ ಯೋಜನೆ ಅಡಿಯಲ್ಲಿ ಚಿಕಿತ್ಸಾ ವೆಚ್ಚದ ಸೌಲಭ್ಯ ಕುಟುಂಬದ ಒಬ್ಬ ವ್ಯಕ್ತಿಗೆ 2 ಲಕ್ಷ ರೂ. ನಿಗದಿಗೊಳಿಸಲಾಗಿತ್ತು.

ಸ್ಥಗಿತಗೊಂಡ ಯಶಸ್ವಿನಿ ಕೌಂಟರ್: ಯಶಸ್ವಿನಿ ಯೋಜನೆ ಯನ್ನು 2018ರ ಮೇ 31ಕ್ಕೆ ಮುಕ್ತಾಯಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಯಡಿ ನೋಂದಾಯಿ ಸಲ್ಪಟ್ಟಿದ್ದ ಖಾಸಗಿ ಆಸ್ಪತ್ರೆಗಳಲ್ಲಿ ಯಶಸ್ವಿನಿ ಕೌಂಟರ್ ಗಳನ್ನು ಸ್ಥಗಿತಗೊಳಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ 2017ರ ಜುಲೈ ವೇಳೆಗೆ ಮೈಸೂರು ನಗರದ ಜೆಎಸ್‍ಎಸ್ ಆಸ್ಪತ್ರೆ, ಕಾವೇರಿ ಆಸ್ಪತ್ರೆ, ಅಪೋಲೋ ಆಸ್ಪತ್ರೆ ಸೇರಿ ದಂತೆ 41 ಖಾಸಗಿ ಆಸ್ಪತ್ರೆಗಳು ನೋಂದಾಯಿಸಲ್ಪ ಟ್ಟಿದ್ದವು. ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಈ ಯೋಜನೆ ಯಡಿ ಶಸ್ತ್ರಚಿಕಿತ್ಸೆ ಸೌಲಭ್ಯ ಉಚಿತವಾಗಿ ಒದಗಿಸಲಾಗು ತ್ತಿತ್ತು. ಈ ಯೋಜನೆಯಡಿ ಶಸ್ತ್ರಚಿಕಿತ್ಸೆಗೆ ತಗಲುವ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುತ್ತಿತ್ತು. ಇದೀಗ `ಆರೋಗ್ಯ ಕರ್ನಾ ಟಕ’ ಯೋಜನೆಯಲ್ಲಿ ಯಶಸ್ವಿನಿ ವಿಲೀನಗೊಂಡಿದೆ.
`ಯಶಸ್ವಿನಿ’ಅಡಿ ಸೇವೆಗೆ 89.23 ಕೋಟಿ ವೆಚ್ಚ: ಯಶಸ್ವಿನಿ ಯೋಜನೆ ಆರಂಭದಿಂದ (2003-04) 2017-18ರವರೆಗೆ ಮೈಸೂರು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 1,88,812 ಮಂದಿ ಸೇವೆ ಪಡೆದಿದ್ದು, ಇದಕ್ಕಾಗಿ 89.23 ಕೋಟಿ ರೂ. (8923.19 ಲಕ್ಷ ರೂ.) ವೆಚ್ಚ ಮಾಡಲಾಗಿದೆ. ಅದೇ ರೀತಿ ಮೈಸೂರು ಜಿಲ್ಲೆಯ ಸಹಕಾರ ಸಂಘಗಳ 26,60,956 (2003-04ರಿಂದ 2017-18ರವರೆಗೆ) ಮಂದಿ ಸದಸ್ಯರಿಂದ 37.85 ಕೋಟಿ ರೂ. (3785.72 ಲಕ್ಷ ರೂ.) ವಂತಿಗೆಯಾಗಿ ಸಂಗ್ರಹಿಸಲಾಗಿದೆ.

2 ವರ್ಗಗಳಾಗಿ ವಿಂಗಡಣೆ: ಆರೋಗ್ಯ ಕರ್ನಾಟಕ ಕಾರ್ಡ್ (ಹೆಲ್ತ್ ಕಾರ್ಡ್) ಮಾಡಿಸಿಕೊಳ್ಳುವ ಮೂಲಕ ಈ ಯೋಜನೆಯ ವೈದ್ಯಕೀಯ ಸೇವೆಗಳನ್ನು ಪಡೆಯ ಬಹುದಾಗಿದೆ. ಈ ಯೋಜನೆಯಡಿ ವೈದ್ಯಕೀಯ ಸೌಲಭ್ಯ ಒದಗಿಸಲು ಅರ್ಹತಾ ರೋಗಿಗಳು ಹಾಗೂ ಸಾಮಾನ್ಯ ರೋಗಿಗಳೆಂದು 2 ವರ್ಗಗಳಾಗಿ ವಿಂಗ ಡಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ ಹಾಗೂ `2013ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ’ ಪ್ರಕಾರ ಅರ್ಹತಾ ಕುಟುಂಬವಾಗಿ (ಬಿಪಿಎಲ್) ಪರಿಗಣಿಸಿರುವ ಕುಟುಂಬ ಸದಸ್ಯರನ್ನು ಅರ್ಹತಾ ರೋಗಿ ಗಳೆಂದು ಹಾಗೂ ಅದೇ ರೀತಿ ಆದ್ಯತೇತರ ಕಾರ್ಡ್ ಹೊಂದಿರುವ ಮತ್ತು ಅರ್ಹತಾ ಕಾರ್ಡ್ ಇಲ್ಲದವ ರನ್ನು ಸಾಮಾನ್ಯ ರೋಗಿಗಳನ್ನು ಪರಿಗಣಿಸಲಾಗು ತ್ತದೆ. ಅರ್ಹತಾ ರೋಗಿಗಳಿಗೆ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಮತ್ತು ಶಿಫಾರಸ್ಸಿನ ಮೂಲಕ ದಾಖ ಲಾದ ನೋಂದಾಯಿತ (ಯೋಜನೆಗೆ) ಖಾಸಗಿ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸೆ ಒದಗಿಸಲಾಗುತ್ತದೆ. ಸಾಮಾನ್ಯ ರೋಗಿಗಳಿಗೆ ಸಹ-ಪಾವತಿ ಆಧಾರದಲ್ಲಿ ಚಿಕಿತ್ಸೆ ಕಲ್ಪಿಸಲಾಗುತ್ತದೆ.

ಆರೋಗ್ಯ ಕರ್ನಾಟಕ ನೋಂದಣಿ ವಿಧಾನ: ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಲ್ತ್ ಕಾರ್ಡ್ ನೋಂದಣಿ ಮಾಡಲಾಗು ತ್ತದೆ. ವಿಶಿಷ್ಟ ಗುರುತಿನ ಸಂಖ್ಯೆಯ ಹೆಲ್ತ್ ಕಾರ್ಡ್ ಅನ್ನು 10 ರೂ. ಪಾವತಿಸಿ ಪಡೆಯಬೇಕಾಗುತ್ತದೆ. ಆಸ್ಪತ್ರೆಗಳಿಗೆ ಭೇಟಿ ನೀಡುವಾಗ ಈ ಕಾರ್ಡ್ ತೆಗೆದುಕೊಂಡು ಹೋಗ ಬೇಕು. ಹೆಲ್ತ್ ಕಾರ್ಡ್ ಕಳೆದು ಹೋದಲ್ಲಿ ಆಧಾರ್ ಕಾರ್ಡ್ ಮತ್ತು ಪಡಿತರ ಕಾರ್ಡ್ ನೀಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ನಕಲು ಕಾರ್ಡ್ ಅನ್ನು 20 ರೂ. ಪಾವತಿ ಯೊಂದಿಗೆ ಪಡೆದುಕೊಳ್ಳಬೇಕಾಗುತ್ತದೆ. ಐದು ಜನರ ಒಂದು ಕುಟುಂಬಕ್ಕೆ ವರ್ಷಕ್ಕೆ ಒಂದೂವರೆ ಲಕ್ಷ ರೂ. ವರೆಗೆ ಚಿಕಿತ್ಸಾ ಸೌಲಭ್ಯ ಲಭ್ಯವಾಗಲಿದೆ.

Translate »