ಅರಸೀಕೆರೆ: ಮತಯಾಚಿಸಿದ ಶಾಸಕ ಕೆಎಂಶಿ
ಹಾಸನ

ಅರಸೀಕೆರೆ: ಮತಯಾಚಿಸಿದ ಶಾಸಕ ಕೆಎಂಶಿ

April 30, 2018

ಅರಸೀಕೆರೆ: ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ತಮ್ಮ ಅಪಾರ ಬೆಂಬಲಿಗರೊಂದಿಗೆ ನಗರದ 21 ವಾರ್ಡ್‍ಗಳಲ್ಲಿ ರೋಡ್ ಶೋ ಮೂಲಕ ಮನೆ ಮನೆಗೆ ತೆರಳಿ ಪಕ್ಷದ ಪರ ಮತ ಯಾಚನೆ ಮಾಡಿದರು.

ನಗರದ ಮಾರುತಿ ನಗರದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪ್ರಚಾರ ಪ್ರಾರಂಭಿಸಿದ ಅವರು, ಕ್ಷೇತ್ರದ ಜನತೆ ಎರಡು ಬಾರಿ ಆಶೀರ್ವಾದ ಮಾಡಿ ಗೆಲ್ಲಿಸಿದ್ದಾರೆ. ಇದರ ಪರಿಣಾಮ ನನಗೆ ತುಂಬಿದ ರಾಜಕೀಯ ಶಕ್ತಿಯಿಂದ ಸದನದ ಒಳಗೂ ಮತ್ತು ಹೊರಗೂ ಹೋರಾಟ ನಡೆಸಿದ ಫಲ 121 ಕೋಟಿ ರೂ.ವೆಚ್ಚದಲ್ಲಿ ಹಾಲಿ ನಗರದ ಜನತೆಗೆ ಶುದ್ಧ ಹೇಮಾವತಿ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ನಗರ ದಲ್ಲಿರುವ 21 ವಾರ್ಡ್‍ಗಳಲ್ಲಿ ಅವಶ್ಯಕ ವಾಗಿದ್ದ ಕುಡಿಯುವ ನೀರು, ಒಳ ಚರಂಡಿ ಅಭಿವೃದ್ಧಿ, ಕಾಂಕ್ರಿಟ್ ರಸ್ತೆಗಳ ನಿರ್ಮಾಣ ವಸತಿ ರಹಿತರಿಗೆ ವಸತಿ ಸೇರಿದಂತೆ ಮೂಲ ಸೌಲಭ್ಯ ಒದಗಿಸಲು ಕಾರ್ಯೋ ನ್ಮುಖವಾಗಿದ್ದೇವೆ ಎಂದರು.

ನಗರದ ಜನತೆ ತಮ್ಮ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಯೋಜನೆಗಳನ್ನು ಕೂಲಂಕುಷವಾಗಿ ಅವಲೋಕಿಸಬೇಕು. ಕಳೆದ ಅನೇಕ ಶಾಸಕರ ಅವಧಿಯಲ್ಲಿ ಆಗದೇ ಇದ್ದಂತಹ ಅಭಿವೃದ್ಧಿ ಕಾರ್ಯ ಗಳನ್ನು ತಮ್ಮ ಹತ್ತು ವರ್ಷಗಳ ಅವಧಿ ಯಲ್ಲಿ ಮಾಡಲಾಗಿದೆ. ಕೆಲವು ವಾರ್ಡ್ ಗಳಲ್ಲಿ ತಾಂತ್ರಿಕ ತೊಂದರೆಯಿಂದ ರಸ್ತೆ ನಿರ್ಮಾಣ, ಮೂಲ ಸೌಕರ್ಯ ಕಾಮಗಾರಿ ಗಳು ಮಂದಗತಿಯಲ್ಲಿ ಮುಂದುವರೆದಿದೆ. ಈ ಕಾರ್ಯಗಳು ಕೂಡ ಮುಂದಿನ ದಿನಗಳಲ್ಲಿ ಸಂಪೂರ್ಣ ಕಾರ್ಯಗತವಾಗ ಲಿದೆ ಎಂದು ಭರವಸೆ ನೀಡಿದರು.

ಜೆಡಿಎಸ್ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಬಾಬು, ನಗರ ಸಭಾ ಸದಸ್ಯ ಮನುಕುಮಾರ್, ಮುಖಂಡ ರಾದ ಕೃಷ್ಣಕುಮಾರ್, ಧರ್ಮೇಶ್, ಕಿರಣ್ ಕುಮಾರ್, ಲೊಕೇಶ್, ಕುಮಾರ್, ರಂಗರಾಜ್, ಮಂಜುನಾಥ್, ತಾಪಂ ಮಾಜಿ ಅಧ್ಯಕ್ಷ ಶಿವಮೂರ್ತಪ್ಪ, ಗಿರೀಶ್ ಸೇರಿದಂತೆ ಹಲವಾರು ಮುಖಂಡರು ರೋಡ್ ಶೋನಲ್ಲಿ ಭಾಗವಹಿಸಿದ್ದರು.

Translate »