ಹಳ್ಳಿಮೈಸೂರು ಹೋಬಳಿಯಲ್ಲಿ ಸಚಿವ ಎ.ಮಂಜು ಮತಬೇಟೆ
ಹಾಸನ

ಹಳ್ಳಿಮೈಸೂರು ಹೋಬಳಿಯಲ್ಲಿ ಸಚಿವ ಎ.ಮಂಜು ಮತಬೇಟೆ

April 30, 2018

ಹೊಳೆನರಸೀಪುರ: ಅರಕಲ ಗೂಡು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಚಿವ ಎ.ಮಂಜು ಹಳ್ಳಿ ಮೈಸೂರು ಹೋಬಳಿಯ ವಿವಿಧ ಗ್ರಾಪಂ ಹಳ್ಳಿಗಳಲ್ಲಿ ಭರ್ಜರಿ ಪ್ರಚಾರ ನಡೆಸಿದರು.

ತಾಲೂಕಿನ ಹಳ್ಳಿ ಮೈಸೂರು ಗ್ರಾಮದಲ್ಲಿ ಮಾತನಾಡಿದ ಅವರು, ಜನ ಮೆಚ್ಚಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ದಿಟ್ಟ, ದೂರ ದೃಷ್ಟಿ ನಿರ್ಧಾರ ಗಳಿಂದ ನೂರಾರು ಜನಪರ ಯೋಜನೆ ಗಳನ್ನು ಜಾರಿಗೊಳಿಸಿ ಗ್ರಾಮೀಣ ಭಾಗದ ಸ್ತ್ರೀ ಸಾಮಾನ್ಯರಿಗೆ ಸೌಲಭ್ಯ ತಲುಪುವಂತೆ ಕ್ರಮ ಕೈಗೊಂಡ ಪರಿಣಾಮ ಇಂದು ಜನಾಭಿ ಪ್ರಾಯ ನಮ್ಮ ಪಕ್ಷದ ಪರವಾಗಿದೆ ಎಂದರು.

ಮಾಜಿ ಮುಖ್ಯಮಂತ್ರಿ ಜೆಡಿಎಸ್ ರಾಜ್ಯಾ ಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅಧಿಕಾರದಲ್ಲಿ ದ್ದಾಗ ರೈತರು, ಧೀನ ದಲಿತರು, ಅಲ್ಪ ಸಂಖ್ಯಾತರು, ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಯಾವುದೇ ಕಾರ್ಯಕ್ರಮ ರೂಪಿಸಲಿಲ್ಲ. ಆದರೆ ಅವರೆಲ್ಲರ ಮೇಲೆ ಈಗ ಎಲ್ಲಿಲ್ಲದ ಪ್ರೀತಿ ಬಂದಿದೆ. ಅವರ ಮಾತಿಗೆ ಮರುಳಾಗದೆ ಜನಪರವಾದ ಕಾಂಗ್ರೆಸ್ ಬೆಂಬಲಿಸುವುದರ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕೆಂದು ಕೋರಿದರು.

ಬಿಜೆಪಿ ಮತ್ತು ಜೆಡಿಎಸ್ ಯಾವುದೇ ಸುಳ್ಳು ಭರವಸೆಗಳಿಗೆ ಬೆಲೆಕೊಡದೆ ಜನಪರ ಕಾಂಗ್ರೆಸ್‍ಗೆ ಮತ ನೀಡಿ ಬೆಂಬಲಿಸಿ ಎಂದು ಮನವಿ ಮಾಡಿದರು. ಪ್ರಚಾರಕ್ಕೆ ಆಗಮಿಸಿದ್ದ ಸಚಿವರನ್ನು ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ತಾಲೂಕಿನ ಹಳ್ಳಿಮೈಸೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಂಭ ಶಿವಪ್ಪ, ಕೆಪಿಸಿಸಿ ಸದಸ್ಯ ಪುಟ್ಟೇಗೌಡ, ಪ್ರಚಾರ ಸಮಿತಿ ಅಧ್ಯಕ್ಷ ಎಲ್.ಚಂದ್ರಶೇಖರ್, ಜಿಪಂ ಸದಸ್ಯ ಪ್ರಸನ್ನ, ಗ್ರಾಪಂ ಅಧ್ಯಕ್ಷ ಎ.ಡಿ. ಶಾಂತರಾಜು, ಹಾಗೂ ನೂರಾರು ಕಾರ್ಯಕರ್ತರು ಹಾಜರಿದ್ದರು.

Translate »