ಕಲಾರಸಿಕರ ಮನಸೂರೆಗೊಂಡ ಗೀತ ಗಾಯನ
ಮೈಸೂರು

ಕಲಾರಸಿಕರ ಮನಸೂರೆಗೊಂಡ ಗೀತ ಗಾಯನ

August 3, 2019

ಮೈಸೂರು,ಆ.2(ವೈಡಿಎಸ್)- ಅದೊಂದು ಸುಂದರ ಸಂಜೆ. ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದ ವೇದಿಕೆ ಯಲ್ಲಿ ಪರಿಸರ, ಜೀವ ಜಲದ ಮಹತ್ವ ಸಾರುವ ಕನ್ನಡ ಮತ್ತು ಹಿಂದಿ ಗೀತೆಗಳ ಗಾಯನ ಕಲಾರಸಿಕರ ಮನಗೆದ್ದವು.

ಮುಂಗಾರು ಮಳೆ ವಿಫಲವಾದ ಹಿನ್ನೆಲೆ ಯಲ್ಲಿ ಮೈಸೂರಿನ ಜೆಎಲ್‍ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ `ಬಾ ಮಳೆಯೇ ಬಾ’ ಶೀರ್ಷಿಕೆಯಡಿ ಆರಭಿ ಸಾಂಸ್ಕøತಿಕ ಟ್ರಸ್ಟ್ ಶುಕ್ರವಾರ ಆಯೋ ಜಿಸಿದ್ದ `ಕೆರೋಕೆ ಗೀತ ಗಾಯನ’ ಕಾರ್ಯ ಕ್ರಮದಲ್ಲಿ ಗಾಯಕರಾದ ಡಾ.ಎನ್.ಕುಲ್ ದೀಪ್, ಮಹೇಶ್‍ಕುಮಾರ್, ಡಾ.ಎಂ. ಎನ್.ರಘುವೀರ್, ಡಾ.ಜಿ.ವಿ.ಭಾರತಿ, ಹೇಮ ಲತಾ, ದಿವ್ಯ ಕೇಶವನ್, ಜೀವನ್‍ಕುಮಾರ್, ಮಧುಸೂಧನ್, ರೋಜಾ ಅವರು ಗೀತೆ ಗಳ ಮೂಲಕ ವರುಣನ ಪ್ರಾರ್ಥಿಸಿದರು.

ಮೊದಲಿಗೆ ಗಾಯಕರಾದ ಮಧು ಸೂಧನ್ ಮತ್ತು ಮಹೇಶ್ ಕುಮಾರ್ ವರಕವಿ ದ.ರಾ.ಬೇಂದ್ರೆ ವಿರಚಿತ `ಇಳಿದು ಬಾ ತಾಯೇ ಇಳಿದು ಬಾ….’ ಗೀತೆ ಯನ್ನು ಸುಶ್ರಾವ್ಯವಾಗಿ ಹಾಡಿದರು. ನಂತರ ಗಾಯಕಿ ರೋಜಾ `ಮಳೆಬರುವ ಹಾಗಿದೆ…’, ಕುಲದೀಪ್ `ಮೇಘ ಬಂತು ಮೇಘ…’ ಗೀತೆಯನ್ನು ಪ್ರಸ್ತುತಪಡಿಸಿ ಸಭಿಕರನ್ನು ರಂಜಿಸಿದರು.

ಗಾಯಕಿ ಡಾ.ಭಾರತಿ `ತುಂತುರು ಅಲ್ಲಿ ನೀರ ಹಾಡು…’, ಪ್ರೇಮಲತಾ ಮತ್ತು ಮಧುಸೂಧನ್ `ಓ ಮೇಘವೇ ಮೇಘವೇ ಹೋಗಿ ಬಾ…’, ಡಾ.ರಘುವೀರ್ ಮತ್ತು ವಿದ್ಯಾ `ಜಿನು ಜಿನುಗೋ ಜೇನ ಹನಿ…’, ದಿವ್ಯಾ ಕೇಶವನ್ `ಬಂದ ಬಂದ ಮೇಘ ರಾಜ…’, ಪ್ರೇಮಲತಾ `ಮೇರೆ ಕ್ವಾಬೋಮೆ ಜೋ ಆಯೆ…’, `ಮುತ್ತು ಮುತ್ತು ನೀರ ಹನಿಯ…’, `ಎಲ್ಲೋ ಮಳೆಯಾಗಿದೆ ಎಂದು…’, ರಿಮ್ ಜಿಮ್ ರಿಮ್ ಜಿಮ್…’, `ಬರ್‍ಸೋಲೆ ಮೇಘ ಮೇಘ…’, `ಸ್ವಾತಿ ಮುತ್ತಿನ ಮಳೆ ಹನಿಯೇ…’, `ನೀ ಅಮೃತ ಧಾರೆ…’, `ಮಳೆ ನಿಂತು ಹೋದ ಮೇಲೆ…’ ಹೀಗೆ ಮಳೆ ಕುರಿತ ಹತ್ತಾರು ಸುಶ್ರಾವ್ಯ ಗೀತೆಗಳನ್ನು ಹಾಡಿ, ವರುಣನ ಆಹ್ವಾನಿ ಸಿದರು. ಇದಕ್ಕೂ ಮುನ್ನ ಸಭಾ ಕಾರ್ಯ ಕ್ರಮದಲ್ಲಿ ಆರಭಿ ಸಾಂಸ್ಕøತಿಕ ಸಂಘ ಟನೆಯ ಮಹೇಶ್ ಕುಮಾರ್ ಮಾತ ನಾಡಿ, ವರ್ಷವಿಡಿ ಜಲಧಾರೆಯಾಗಬೇ ಕಿದ್ದ ನದಿಗಳು ಇದೀಗ ಮಳೆಗಾಲದ ನದಿ ಗಳಾಗಿ ಬದಲಾಗಿವೆ. ಪ್ರಕೃತಿ ಮೇಲೆ ನಿರಂ ತರ ದೌರ್ಜನ್ಯ ನಡೆಯುತ್ತಿರುವ ಪರಿಣಾಮ ಅತಿವೃಷ್ಠಿ-ಅನಾವೃಷ್ಠಿ ಎರಡನ್ನೂ ಕಾಣು ವಂತಾಗಿದೆ. ನೀರಿನ ಬಳಕೆ ತಿಳಿದಿರುವ ನಾವು ಅದನ್ನು ಉಳಿಸುವುದು ಹೇಗೆ ಎಂಬುದನ್ನು ಕಲಿತಿಲ್ಲ. ಮರ ಕಡಿಯುವ ನಾವು ಗಿಡ ನೆಡುವುದನ್ನು ಕಲಿತಿಲ್ಲ. ಭೂಗರ್ಭದ ನೀರನ್ನೂ ಖಾಲಿ ಮಾಡಿ ದ್ದೇವೆ. ಹನಿ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು. ಆರಭಿ ಸಾಂಸ್ಕøತಿಕ ಟ್ರಸ್ಟ್ ಅಧ್ಯಕ್ಷ ಡಾ.ಕುಲದೀಪ್, ಉಪಾಧ್ಯಕ್ಷೆ ಜಿ.ವಿ.ಭಾರತಿ, ಕಾರ್ಯದರ್ಶಿ ರಘು ವೀರ್ ಮತ್ತಿತರರು ಉಪಸ್ಥಿತರಿದ್ದರು.

Translate »