ತೃತೀಯ ಲಿಂಗಿಗಳಿಗೆ ಸಮಾನ ಗೌರವಕ್ಕೆ ಆಗ್ರಹಿಸಿ ಆಶೋದಯ ಸಮಿತಿ ಜಾಥಾ
ಮೈಸೂರು

ತೃತೀಯ ಲಿಂಗಿಗಳಿಗೆ ಸಮಾನ ಗೌರವಕ್ಕೆ ಆಗ್ರಹಿಸಿ ಆಶೋದಯ ಸಮಿತಿ ಜಾಥಾ

July 3, 2019

ಮೈಸೂರು, ಜು.2(ಪಿಎಂ)- ತೃತೀಯ ಲಿಂಗಿಗಳಿಗೆ ಸಮಾಜದಲ್ಲಿ ಗೌರವ ನೀಡಿ ಸಮಾನತೆಯಿಂದ ಕಾಣಬೇಕೆಂದು ಆಗ್ರಹಿಸಿ ಲೈಂಗಿಕ ವೃತ್ತಿನಿರತರ ಸಂಘಟನೆ ಯಾದ ಆಶೋದಯ ಸಮಿತಿ ವತಿಯಿಂದ ಮಂಗಳವಾರ ಜಾಥಾ ನಡೆಸಲಾಯಿತು.

ಮೈಸೂರಿನ ಕೃಷ್ಣಮೂರ್ತಿಪುರಂ ನಲ್ಲಿರುವ ಆಶೋದಯ ಸಮಿತಿ ಎದುರು ಮಾಜಿ ಸಚಿವರೂ ಆದ ಶಾಸಕ ಎಸ್.ಎ. ರಾಮದಾಸ್ ಜಾಥಾಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಸಮಾಜ ದಲ್ಲಿ ತೃತೀಯ ಲಿಂಗಿಗಳ ವಿಚಾರದಲ್ಲಿ ತಾರತಮ್ಯವಿದ್ದು, ಅವರು ತಮ್ಮ ಹಕ್ಕು ಗಳಿಗಾಗಿ ಹೋರಾಟ ಮಾಡಬೇಕಾದ ಸನ್ನಿವೇಶವಿದೆ ಎಂದು ವಿಷಾದಿಸಿದ ಅವರು, ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ಯಲ್ಲಿ 200 ಮನೆಗಳನ್ನು ಆಶೋದಯ ಸಮಿತಿ ಸದಸ್ಯರಿಗೆ ನಿರ್ಮಿಸಿ ಕೊಡಲಾ ಗುವುದು ಎಂದು ಭರವಸೆ ನೀಡಿದರು.

ಸಮುದಾಯದ ನಾಯಕಿ ಪ್ರಣತಿ ಪ್ರಕಾಶ್ ಮಾತನಾಡಿ, ನಮ್ಮ ಸಮುದಾಯ ಮುಖ್ಯ ವಾಹಿನಿಗೆ ಬರಬೇಕು. ನಮಗೆ ಇರುವ ಕಳಂಕ ತಾರತಮ್ಯ ಹೋಗಲಾಡಿಸಿ ಸಮಾಜದಲ್ಲಿ ಸೂಕ್ತ ಸ್ಥಾನ ಗಳಿಸಬೇಕು ಎಂದು ಹೇಳಿದರು. ಈ ವೇಳೆ ಮೈಸೂರು ವಿವಿ ಪ್ರಾಧ್ಯಾಪಕ ರಾದ ಡಾ.ಇಂದಿರಾ, ಡಾ.ಲೋಲಾಕ್ಷಿ, ಡಾ.ಲತಾ ಹಾಜರಿದ್ದರು.

ಆರ್‍ಟಿಓ ವೃತ್ತ, ರಾಮಸ್ವಾಮಿ ವೃತ್ತ, ಜೆಎಲ್‍ಬಿ ವೃತ್ತದಲ್ಲಿ ಸಾಗಿದ ಜಾಥಾವು ಮಹಾರಾಜ ಕಾಲೇಜು ಮೈದಾನ ತಲುಪಿ ಅಂತ್ಯಗೊಂಡಿತು. ಆಶೋದಯ ಸಮಿತಿ ಕಾರ್ಯದರ್ಶಿ ಲಕ್ಷ್ಮೀ, ಮುಖಂಡ ಅಕ್ರಮ್ ಸೇರಿದಂತೆ ಅನೇಕ ಪ್ರಾಧ್ಯಾಪಕರು, ಸಂಶೋಧಕರು ಜಾಥಾದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.

Translate »