ಕಣದಲ್ಲಿ 53 ಅಭ್ಯರ್ಥಿಗಳು ಚುನಾವಣೆ: ಹಿಂದೆ ಸರಿದ 19 ಮಂದಿ
ಹಾಸನ

ಕಣದಲ್ಲಿ 53 ಅಭ್ಯರ್ಥಿಗಳು ಚುನಾವಣೆ: ಹಿಂದೆ ಸರಿದ 19 ಮಂದಿ

April 28, 2018

ಹಾಸನ: ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸಿ ಊರ್ಜಿತಗೊಂಡಿದ್ದ 72 ಉಮೇದುವಾರರ ಪೈಕಿ 19 ಮಂದಿ ನಾಮಪತ್ರ ಹಿಂಪಡೆದ್ದು, ಅಂತಿಮವಾಗಿ 53 ಮಂದಿ ಕಣದಲ್ಲಿದ್ದಾರೆ. ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಲ್ಲಿ 86 ಮಂದಿಯಿಂದ ಒಟ್ಟು 129 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ 16 ನಾಮಪತ್ರ ತಿರಸ್ಕøತ ಗೊಂಡಿದ್ದು, 72 ಮಂದಿಯ ನಾಮಪತ್ರವು ಪುರಸ್ಕøತಗೊಂಡಿವೆ.

ಕ್ಷೇತ್ರವಾರು ವಿವರ: ಹಾಸನ ವಿಧಾನಸಭಾ ಕ್ಷೇತ್ರದಿಂದ 13 ನಾಮಪತ್ರಗಳೂ ಕ್ರಮಬದ್ಧವಾಗಿದ್ದು, 13 ಮಂದಿ ಯೂ ಕಣದಲ್ಲಿದ್ದಾರೆ. ಶ್ರವಣಬೆಳಗೊಳ ವಿಧಾನ ಸಭಾ ಕ್ಷೇತ್ರದಲ್ಲಿ 5 ನಾಮಪತ್ರಗಳೂ ಕ್ರಮಬದ್ಧವಾಗಿವೆ. ಅರಸೀಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ 13 ನಾಮಪತ್ರಗಳು ಸರಿ ಇದ್ದು, 7 ನಾಮಪತ್ರಗಳು ತಿರಸ್ಕøತಗೊಂಡಿವೆ. ಅಂತಿಮವಾಗಿ 6 ಮಂದಿ ಕಣದಲ್ಲಿದ್ದಾರೆ. ಬೇಲೂರು-9 ನಾಮಪತ್ರಗಳು ಅಂಗೀಕೃತಗೊಂಡಿದ್ದು, ಇಬ್ಬರು ನಾಮಪತ್ರ ಹಿಂಪಡೆದಿದ್ದಾರೆ. 7 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ 11 ನಾಮಪತ್ರ ಸರಿ ಇದ್ದು, ಮೂವರು ನಾಮಪತ್ರ ಹಿಂಪಡೆದಿದ್ದಾರೆ. ಒಟ್ಟು 8 ಮಂದಿ ಕಣದಲ್ಲಿದ್ದಾರೆ. ಅರಕಲ ಗೂಡು ಕೇತ್ರದಿಂದ 8 ನಾಮಪತ್ರಗಳು ಅಂಗೀಕೃತಗೊಂಡಿದ್ದು, ಓರ್ವ ಅಭ್ಯರ್ಥಿ ಉಮೇದುವಾರಿಕೆ ಹಿಂಪಡೆದಿದ್ದು, 7 ಸ್ಪರ್ಧಿ ಗಳು ಕಣದಲ್ಲಿದ್ದಾರೆ. ಸಕಲೇಶಪುರ ಕ್ಷೇತ್ರದಲ್ಲಿ 13 ನಾಮಪತ್ರ ಗಳು ಕ್ರಮಬದ್ಧವಾಗಿದ್ದು, 6 ಅಭ್ಯರ್ಥಿಗಳು ನಾಮಪತ್ರ ಹಿಂಪಡೆ ದಿದ್ದಾರೆ. ಅಂತಿಮವಾಗಿ 7 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ನಾಮಪತ್ರ ಹಿಂಪಡೆದವರು: ಅರಸೀಕೆರೆ ಕ್ಷೇತ್ರದಲ್ಲಿ ಅಭ್ಯರ್ಥಿ ಡಾ.ಪ್ರಭುದೇವ್ ವೈ.ಬಿ, ರವಿನಾಯ್ಕ್, ಡಿ.ಎಸ್.ಅಶೋಕ್, ಬಿ.ಎನ್ ವೆಂಕಟೇಶ್, ವಿ.ಸಿ.ರವಿ, ಕೆ.ಎನ್.ಕುಮಾರ್, ಮಂಜುಳಾ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ಸಕಲೇಶಪುರ ವಿಧಾನ ಸಭಾ ಕ್ಷೇತ್ರದಿಂದ ಚಂದ್ರು, ಎಂ.ಕೆ. ದೇವಪ್ಪ ಮಲ್ಲಿಗೆವಾಳು, ಎಸ್.ಮಂಜುನಾಥ್, ಡಾ.ಹೆಚ್.ಆರ್. ನಾರಾಯಣಸ್ವಾಮಿ, ಜಿ.ಕೃಷ್ಣಪ್ಪ , ಹೆಚ್.ಆರ್.ನಾರಾಯಣ ಕಣದಿಂದ ಹಿಂದೆ ಸರಿದಿದ್ದಾರೆ. ಬೇಲೂರು ಕ್ಷೇತ್ರದಿಂದ ಹೆಚ್.ಟಿ.ವೆಂಕಟಯ್ಯ, ಪರ್ವತೇಗೌಡ, ಹೊಳೆನರಸೀಪುರ ಕ್ಷೇತ್ರದಿಂದ ಹೆಚ್.ಬಿ. ಯೋಗೆಶ್, ನಿಂಗೇಗೌಡ, ಜೆ.ಕೆ.ಗುರು, ಅರಕಲಗೂಡು ಕ್ಷೇತ್ರದಿಂದ ಎಂ.ಸಿ ವಿಶ್ವನಾಥ್ ಕಣದಿಂದ ಹೊರ ಉಳಿದಿದ್ದಾರೆ.

Translate »