ಇಂದು ಅಟಲ್, ಅನಂತ್ ಸ್ಮರಣಾರ್ಥ  ಬಿಜೆಪಿ ಕಾರ್ಯಕರ್ತರಿಂದ ನಾಟಕ
ಮೈಸೂರು

ಇಂದು ಅಟಲ್, ಅನಂತ್ ಸ್ಮರಣಾರ್ಥ ಬಿಜೆಪಿ ಕಾರ್ಯಕರ್ತರಿಂದ ನಾಟಕ

December 30, 2018

ಮೈಸೂರು: ಮೈಸೂರಿನ ಜೆ.ಕೆ.ಮೈದಾನದಲ್ಲಿರುವ ಮೈಸೂರು ಮೆಡಿಕಲ್ ಕಾಲೇಜಿನ ಅಮೃತೋತ್ಸವ ಭವನದಲ್ಲಿ ನಾಳೆ(ಡಿ.30) ಬೆಳಿಗ್ಗೆ 11ಕ್ಕೆ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶಿಸಲಾಗುತ್ತಿದೆ ಎಂದು ಬಿಜೆಪಿ ಎಸ್‍ಸಿ ಮೋರ್ಚಾ ಅಧ್ಯP್ಷÀ ಎಂ.ನಾಗರಾಜು ತಿಳಿಸಿದ್ದಾರೆ. ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಕೇಂದ್ರ ಸಚಿವ ಅನಂತಕುಮಾರ್ ಸ್ಮರ ಣಾರ್ಥ ಬಿಜೆಪಿ ನಗರ ಯುವ ಘಟಕ ಮತ್ತು ಕಲ್ಯಾಣ ಲಕ್ಷ್ಮೀ ವೆಂಕಟೇಶ್ವರ ಕೃಪಾ ಪೆÇೀಷಿತ ನಾಟಕ ಮಂಡಳಿ ಸಹಯೋಗದಲ್ಲಿ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಬಿಜೆಪಿ ಕಾರ್ಯಕರ್ತರೇ ವಿವಿಧ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಕೆರೆಹಳ್ಳಿ ಮಹದೇವಸ್ವಾಮಿ ನಿರ್ದೇಶನ, ಕೊಳ್ಳೇಗಾಲದ ದಶಪಾಲ್ ಮತ್ತು ವೃಂದದವರ ವಾದ್ಯವೃಂದ ಇರಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಯುವ ಘಟಕದ ಉಪಾಧ್ಯP್ಷÀ ಕಾರ್ತಿಕ್ ಕುಮಾರ್, ನಗರ ಕಾರ್ಯಕಾರಿಣಿಯ ಪರಮೇಶಯ್ಯ ಉಪಸ್ಥಿತರಿದ್ದರು.

Translate »