ಸಂಸ್ಕøತ ಸಂಪದ್ಭರಿತ ಭಾಷೆ: ಸಿಪಿಕೆ
ಮೈಸೂರು

ಸಂಸ್ಕøತ ಸಂಪದ್ಭರಿತ ಭಾಷೆ: ಸಿಪಿಕೆ

December 30, 2018

ಮೈಸೂರು: ಸಂಸ್ಕøತ ಅತ್ಯಂತ ಪ್ರಾಚೀನ, ವೈಚಾರಿಕ, ವಿಫುಲವಾದ ಭಾಷೆಯಾಗಿದ್ದು, ಭಾರತೀಯ ಅಸ್ಮಿತೆಯ ಬೃಹತ್ ಪ್ರತಿಮೆ ಯಾಗಿದೆ ಎಂದು ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಅಭಿವ್ಯಕ್ತಪಡಿಸಿದರು. ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಆಯೋಜಿಸಿರುವ 2ನೇ ರಾಜ್ಯ ಸಮ್ಮೇಳನದಲ್ಲಿ ‘ಸಂಸ್ಕøತ ಸಾಹಿತ್ಯದಲ್ಲಿ ಭಾರತೀಯತೆ’ ಕುರಿತು ಮಾತನಾಡಿದ ಅವರು, ಸಂಸ್ಕøತ ಸಾಹಿತ್ಯದಲ್ಲಿರುವುದೇ ಭಾರತೀಯತೆ ಎಂದು ಅಭಿಪ್ರಾಯಪಟ್ಟರು. ಸಂಸ್ಕøತ ಸಾಹಿತ್ಯ ಪ್ರಾಚೀನ ಪರಂಪರೆಯನ್ನು ಹೊಂದಿದ್ದು, ರಾಮಾಯಣ ಮತ್ತು ಮಹಾಭಾರತ ವಿಶ್ವ ಶ್ರೇಷ್ಠ ಕೋಶಗಳಾಗಿವೆ. ಸಂಸ್ಕøತ ಮತ್ತು ಭಾರತೀಯ ಧರ್ಮ ಒಂದೇ ಆಗಿದ್ದು, ಸಂಸ್ಕøತ ಮತ್ತು ಸಂಸ್ಕøತಿಯನ್ನು ಸಮೀಕರಣಗೊಳಿಸಲಾಗಿದೆ. ನಮ್ಮ ಆತ್ಮ ಪ್ರಜ್ಞೆಯನ್ನು ಉಳಿಸುವ ಶಕ್ತಿ ಸಂಸ್ಕøತ ಸಾಹಿತ್ಯಕ್ಕಿದೆ ಎಂದು ತಿಳಿಸಿದರು.

ಸಂಸ್ಕøತ ಪ್ರಾಧ್ಯಾಪಕ ಗಣಪತಿ ಹೆಗಡೆ ಮಾತನಾಡಿ, ಸಂಸ್ಕøತ ಭಾಷೆ ದೇವ ಭಾಷೆಯಾ ಗಿದೆ. ಭಾಷೆಗಳಲ್ಲಿಯೇ ಅತ್ಯಂತ ಶ್ರೇಷ್ಠವಾದ ಭಾಷೆ ಸಂಸ್ಕøತ. ವೇದಗಳು ಸಾಹಿತ್ಯದ ಆರಂಭಿಕ ಹಂತವಾಗಿದ್ದು, ವೈದಿಕ ಸಾಹಿತ್ಯದಿಂದ ಸಂಸ್ಕøತ ಭಾಷೆಯ ಇತಿಹಾಸ ತಿಳಿಯುತ್ತದೆ. ವಿಶ್ವದ ಕಲ್ಯಾಣವನ್ನು ಬಯಸುವ ಏಕೈಕ ಸಂಸ್ಕøತಿ ಭಾರತೀಯ ಸಂಸ್ಕøತಿಯಾಗಿದೆ. ಯಾವ ಕಡೆಯಿಂದ ನೋಡಿದರೂ ಪರಿಪೂರ್ಣತೆಯನ್ನು ಹೊಂದಿದೆ. ಕವಿಗಳು, ಸಾಹಿತಿಗಳು ಪದಗಳಿಂದ ಜೋಡಿಸಿ ಸಂಸ್ಕøತ ಸಾಹಿತ್ಯವನ್ನು ಬೆಳೆಸಿದ್ದಾರೆ. ಸಂಸ್ಕøತದಲ್ಲಿರುವ ಶ್ಲೋಕಗಳು ವ್ಯಕ್ತಿಯ ಜೀವನವನ್ನು ನಿರೂಪಿಸುತ್ತವೆ. ಈ ನಿಟ್ಟಿನಲ್ಲಿ ಇಂದು ಹಲವಾರು ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕøತ ಅಧ್ಯಯನ ಮಾಡಿಸುತ್ತಿರುವುದು ಶ್ಲಾಘನೀಯ ಎಂದರು.
ಖ್ಯಾತ ಅಂಕಣಕಾರ ಪ್ರೊ.ಪ್ರೇಮಶೇಖರ, ಜಿ.ಚಂದ್ರಕಲಾ ಮತ್ತಿತರರು ಉಪಸ್ಥಿತರಿದ್ದರು.

Translate »